Sunday, March 26, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

ಭಾರತದ ಹೊಸ ವೇಗದ ಬೌಲಿಂಗ್ ಸೈನ್ಯ ಸಿದ್ಧಪಡಿಸಿದ IPL

May 31, 2022
in ಕ್ರಿಕೆಟ್, Cricket
IPL 2022: ಮುಂಬೈ ವಿರುದ್ಧ ಹೈದ್ರಾಬಾದ್‌ಗೆ 3 ರನ್‌ಗಳ ರೋಚಕ ಜಯ: ಟಿಮ್‌ ಡೇವಿಡ್‌ ವ್ಯರ್ಥ ಹೋರಾಟ

UMRAN MALIK, IPL 2022, SPORTS KARNATAKA

Share on FacebookShare on TwitterShare on WhatsAppShare on Telegram

ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಅವರಂತಹ ದಿಗ್ಗಜ ವೇಗದ ಬೌಲರ್‌ಗಳ ನಂತರ ಭಾರತದ ವೇಗದ ಬ್ಯಾಟರಿ ಹೇಗಿರುತ್ತದೆ? ಈ ಪ್ರಶ್ನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಬಹಳ ದಿನಗಳಿಂದ ಮೂಡಿತ್ತು. ಐಪಿಎಲ್ 2022 ಈ ಪ್ರಶ್ನಗೆ ಉತ್ತರ ನೀಡಿದೆ.

ಉಮ್ರಾನ್ ಮಲಿಕ್

ಜಮ್ಮು ಎಕ್ಸ್ ಪ್ರೆಸ್ ಅಂದರೆ ಈ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದ ಉಮ್ರಾನ್ ಮಲಿಕ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಉಮ್ರಾನ್ 1970-80ರ ದಶಕದಲ್ಲಿ ಕೆರಿಬಿಯನ್ ವೇಗದ ಬೌಲರ್‌ಗಳ ಪ್ರಾಬಲ್ಯವನ್ನು ನೆನಪಿಸುತ್ತಾರೆ. ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಟಿಂಗ್ ಮಾಡಲು ಹೊರಟ ಉಮ್ರಾನ್ ಅವರನ್ನು ಸ್ಲೆಡ್ಜ್ ಮಾಡಿದಾಗ, ಅವರು ತಮ್ಮ ವೇಗದ ಚೆಂಡಿನ ಮೂಲಕ ತಕ್ಕ ಉತ್ತರವನ್ನು ನೀಡಿದರು. ಕಳೆದ ಋತುವಿನಲ್ಲಿ, ಜಾನಿ ಬೈರ್‌ಸ್ಟೋವ್ ಅವರಂತಹ ಅನುಭವಿ ಬ್ಯಾಟ್ಸ್‌ಮನ್ ಉಮ್ರಾನ್ ಅವರನ್ನು ನೆಟ್ಸ್‌ನಲ್ಲಿ ನಿಧಾನವಾಗಿ ಬೌಲ್ ಮಾಡಲು ವಿನಂತಿಸಿದ್ದರು.

UMRAN MALIK 2 e1653935203982

ಇವರು ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾದ ಪೇಸ್ ಬೌಲಿಂಗ್ ನ್ನು ಮುನ್ನಡೆಸಬಲ್ಲರು. ಈ ಋತುವಿನ ಅತ್ಯಂತ ವೇಗದ ಚೆಂಡನ್ನು ಗಂಟೆಗೆ 157 ಕಿಮೀ ವೇಗದಲ್ಲಿ ಬೌಲ್ ಮಾಡುವ ಮೂಲಕ ಉಮ್ರಾನ್ ಈಗಾಗಲೇ ವಿಶ್ವ ಕ್ರಿಕೆಟ್‌ನ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಅಚ್ಚರಿಗೊಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ಭಾಗವಾಗಿದ್ದ ಉಮ್ರಾನ್ ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

ಮೊಹ್ಸಿನ್ ಖಾನ್

ಮೊಹ್ಸಿನ್ ಖಾನ್ ಅವರು 3 ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಲಭಿಸಿರಲಿಲ್ಲ. ಇಂತಹ ಪರಿಸ್ಥಿತಿಗಳಲ್ಲಿ ಯಾವುದೇ ವೇಗದ ಬೌಲರ್ ತನ್ನ ಹಿಡಿತವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಮೊಹ್ಸಿನ್ ಅವಕಾಶಕ್ಕಾಗಿ ಕಾಯುತ್ತಿದ್ದರು. ಲಕ್ನೋ ಅವರನ್ನು ಬುಟ್ಟಿಗೆ ಹಾಕಿಕೊಂಡಿತು.
mohsin kahan e1653935174810

ಒಂದಷ್ಟು ಪಂದ್ಯಗಳಲ್ಲಿ ಬೆಂಚ್ ಮೇಲೆ ಕುಳಿತ ಬಳಿಕ ಮತ್ತೊಮ್ಮೆ  ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಾಗ ಮೊಹ್ಸಿನ್ ಅದ್ಭುತವನ್ನೇ ಮಾಡಿದರು. ಅವರು 9 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದರು. ಆ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 16 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಐಪಿಎಲ್ 2022 ರಲ್ಲಿ 5.97 ಏಕನಾಮಿಯೊಂದಿಗೆ ರನ್ ನೀಡಿದ ಮೊಹ್ಸಿನ್‌ಗೆ ಟೀಮ್ ಇಂಡಿಯಾದ ಬಾಗಿಲು ಬಡೆಯುತ್ತಿದ್ದಾರೆ.

ಮೊಹ್ಸಿನ್ ಅವರ ಎಡಗೈ ಹಾಗೂ ಕೋನ, ಬ್ಯಾಟ್ಸ್‌ಮನ್‌ಗೆ ಆಘಾತ ನೀಡುವ ಅವರ ಬೌನ್ಸರ್ ಸಾಮರ್ಥ್ಯ ಮೊಹ್ಸಿನ್ ಅವರ ದೊಡ್ಡ ಶಕ್ತಿಯಾಗಿದೆ.

ಮುಕೇಶ್ ಚೌಧರಿ

ದೀಪಕ್ ಚಾಹರ್ ಗಾಯಗೊಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ತುಂಬಾ ದುರ್ಬಲವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಕೇಶ್ ಚೌಧರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅವರು ತಮ್ಮ ಅತ್ಯುತ್ತಮ ಬೌಲಿಂಗ್‌ನಿಂದ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಈ ಋತುವಿನಲ್ಲಿ 13 ಪಂದ್ಯಗಳನ್ನು ಆಡುವ ಮೂಲಕ 16 ವಿಕೆಟ್ ಪಡೆದಿರುವ ಮುಕೇಶ್ ಮುಂದಿನ ದಿನಗಳಲ್ಲಿ ಎಡಗೈ ವೇಗದ ಬೌಲಿಂಗ್ ಆಯ್ಕೆಯಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದು.

mukhesh choudhari e1653935143417

ಮುಂಬೈ ಇಂಡಿಯನ್ಸ್ ವಿರುದ್ಧ 46 ರನ್‌ಗಳಿಗೆ 4 ದೊಡ್ಡ ವಿಕೆಟ್‌ಗಳನ್ನು ಕಬಳಿಸಿದ್ದು ಮುಖೇಶ್ ಅವರ ಅತ್ಯುತ್ತಮ ಬೌಲಿಂಗ್ ಫಿಗರ್ ಆಗಿತ್ತು. 2021-22ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಖೇಶ್ ಮಹಾರಾಷ್ಟ್ರ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು ಪವರ್‌ಪ್ಲೇ ಸಮಯದಲ್ಲಿ ನಲ್ಲಿ ಇವರು ಸೀಮ್ ಹಾಗೂ ಸ್ವಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ.

yasha e1653935083539

ಯಶ್ ದಯಾಳ್

ಗುಜರಾತ್ ಟೈಟಾನ್ಸ್ ತನ್ನ ಮೊದಲ ಐಪಿಎಲ್ ಸೀಸನ್‌ನಲ್ಲಿ ಕಪ್ ಗೆದ್ದಿದೆ. ಈ ಅದ್ಭುತ ಯಶಸ್ಸಿನಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದಾರೆ. 9 ಪಂದ್ಯಗಳಲ್ಲಿ 11 ವಿಕೆಟ್ ಪಡೆದ ವೇಗಿ ಜಿಟಿಗೆ ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್ ಪಡೆದರು. ಸುಮಾರು 147kmph ವೇಗದಲ್ಲಿ ಸತತವಾಗಿ ಬೌಲ್ ಮಾಡುವ ಯಶ್ ದಯಾಳ್, ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದ ವೇಗದ ಬ್ಯಾಟರಿಯ ಪ್ರಮುಖ ಭಾಗವಾಗಬಲ್ಲರು.

ಯಶ್ ದಯಾಳ್ ಅವರ ಚೊಚ್ಚಲ ಐಪಿಎಲ್ ಇದಾಗಿದೆ. 2021-22ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಯಶ್ ದಯಾಳ್ ಅಗ್ರ-10 ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯ ಇವರದ್ದಾಗಿದೆ.
kuldep e1653935055627

ಕುಲ್ದೀಪ್ ಸೇನ್

ರಾಜಸ್ಥಾನ್ ರಾಯಲ್ಸ್ 2008 ರ ಮೊದಲ ಋತುವಿನ ನಂತರ ಮೊದಲ ಬಾರಿಗೆ IPL ನ ಫೈನಲ್ ನ ತಲುಪಿತು. ಇದರಲ್ಲಿ ಕುಲ್ದೀಪ್ ಸೇನ್ ಅವರ ವೇಗದ ಬೌಲಿಂಗ್ ಮಹತ್ವದ ಪತ್ರ ವಹಿಸುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 20 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದ ಇವರು 7 ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದಿದ್ದಾರೆ. 145kmph ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಕುಲ್ದೀಪ್, ಟೀಮ್ ಇಂಡಿಯಾದಲ್ಲಿ ಎಡಗೈ ವೇಗದ ಬೌಲರ್‌ಗಳ ಹುಡುಕಾಟವನ್ನು ಕೊನೆಗೊಳಿಸಬಹುದು.

6ae4b3ae44dd720338cc435412543f62?s=150&d=mm&r=g

admin

See author's posts

ShareTweetSendShare
Next Post
ಹಾರ್ದಿಕ್ ಪಾಂಡ್ಯ ಮುಂದಿನ ಮಿಷನ್ ಯಾವುದು? ಇಲ್ಲಿದೆ ಉತ್ತರ

ಹಾರ್ದಿಕ್ ಪಾಂಡ್ಯ ಮುಂದಿನ ಮಿಷನ್ ಯಾವುದು? ಇಲ್ಲಿದೆ ಉತ್ತರ

Leave a Reply Cancel reply

Your email address will not be published. Required fields are marked *

Stay Connected test

Recent News

ISSF Shooting ಮನುಗೆ ಭಾಕರ್ಗೆ ಕಂಚು 

ISSF Shooting ಮನುಗೆ ಭಾಕರ್ಗೆ ಕಂಚು 

March 26, 2023
Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

March 26, 2023
World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

March 26, 2023
WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

March 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram