ಎರಡು ದಿನಗಳ ಕಾಲ ನಡೆದ ಐಪಿಎಲ್ನ ಹರಾಜು ಭಾನುವಾರ ಕೊನೆಗೊಂಡಿದೆ. 10 ತಂಡಗಳು 204 ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿವೆ. ಇನ್ನು ಹಲವು ಖ್ಯಾತ ನಾಮ ಟಿ-20 ಆಟಗಾರರು ಮಾಲೀಕರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದಾರೆ.
ಈ ಬಾರಿ ಐಪಿಎಲ್ ನಲ್ಲಿ ಮಾಲೀಕರು ಆಟಗಾರರನ್ನು ಅಳೆದು ತೂಗಿ ತಂಡಕ್ಕೆ ಸೇರಿಸಿಕೊಂಡಿದೆ. ಭಾರತದ ಪಿಚ್ ಗಳ ಅನುಭವ ಹೊಂದಿರುವ ಆಟಗಾರರಿಗೆ ಮಾತ್ರ ಮಣೆ ಹಾಕಲಾಗಿದೆ. ಇನ್ನು ಮಾರಾಟವಾಗದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಳ್ಳುವು ಸುರೇಶ್ ರೈನಾ. ಐಪಿಎಲ್ನಲ್ಲಿ ರೈನಾ ಸ್ಟ್ರೈಕ್ ರೇಟ್ 136.76 ಆಗಿದೆ. ಮೊದಲ ಋತುವಿನಿಂದ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಆದರೆ, ಚೆನ್ನೈ ತಂಡಕ್ಕೆ ಮಧ್ಯದಲ್ಲಿ ನಿಷೇಧ ಹೇರಿದಾಗ ಗುಜರಾತ್ ಲಯನ್ಸ್ ತಂಡದ ನಾಯಕರಾಗಿದ್ದರು. ಮಾಲೀಕರ ಗಮನ ಸೆಳೆಯುವಲ್ಲಿ ಇವರು ವಿಫಲರಾಗಿದ್ದಾರೆ. ಈ ಬಾರಿ ಚೆನ್ನೈ ಕೂಡ ಅವರನ್ನು ನಂಬಲಿಲ್ಲ.
ರೈನಾ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇವರು ಭಾರತ ಕ್ರಿಕೆಟ್ ತಂಡದಿಂದ ನಿವೃತ್ತಿ ಹೊಂದಿದ್ದಾರೆ. 35 ವರ್ಷಕ್ಕೆ ಕಾಲಿಟ್ಟ ರೈನಾಗೆ ಯಾವುದೇ ತಂಡ ಅವಕಾಶಗಳನ್ನು ನೀಡಲಿಲ್ಲ. ಅವರು ತಮ್ಮ ಮೂಲ ಬೆಲೆಯನ್ನು ಎರಡು ಕೋಟಿಯಲ್ಲಿ ಹೊಂದಿದ್ದರು. ಇವರು 205 ಪಂದ್ಯಗಳನ್ನು ಆಡಿದ್ದಾರೆ ಮತ್ತು 32.51 ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 39 ಅರ್ಧಶತಕಗಳು ಸೇರಿವೆ.
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ನ ತಂಡದಲ್ಲಿ ಆಡಿದ್ದರು. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಸ್ಮಿತ್ ರಾಜಸ್ಥಾನ್ ರಾಯಲ್ಸ್ನ ನಾಯಕರಾಗಿದ್ದರು, ಆದರೆ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಕಳಪೆ ಪ್ರದರ್ಶನದಿಂದಾಗಿ, ರಾಜಸ್ಥಾನವು ಅವರನ್ನು ಹೊರ ಬಿಟ್ಟಿತ್ತು. ಸ್ಮಿತ್ ಐಪಿಎಲ್ನಲ್ಲಿ 128.09 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸ್ಮಿತ್ ಐಪಿಎಲ್ನಲ್ಲಿ 103 ಪಂದ್ಯಗಳನ್ನು ಆಡಿದ್ದು, 34.51 ಸರಾಸರಿಯಲ್ಲಿ 2485 ರನ್ ಗಳಿಸಿದ್ದಾರೆ. ಈ ವೇಳೆ ಸ್ಮಿತ್ 11 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದಾರೆ.
ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಂಬರ್ ಒನ್ ಆಲ್ ರೌಂಡರ್ ಆಗಿದ್ದಾರೆ. ಕಳೆದ ಋತುವಿನಲ್ಲಿ ಕೋಲ್ಕತ್ತಾ ತಂಡದಲ್ಲಿದ್ದ ಶಕೀಬ್ ಅವರ ಪ್ರದರ್ಶನ ವಿಶೇಷವಿರಲಿಲ್ಲ. ಅವರು 8 ಪಂದ್ಯಗಳಲ್ಲಿ ಕೇವಲ 47 ರನ್ ಗಳಿಸಿದ್ದು, ಕೇವಲ 4 ವಿಕೆಟ್ ಗಳನ್ನು ಪಡೆದಿದ್ದಾರೆ.
ಇಂಗ್ಲೆಂಡಿನ ಆದಿಲ್ ರಶೀದ್, ಅಫ್ಘಾನಿಸ್ತಾನದ ಮುಜೀಬ್ ಉರ್ ರಹಮಾನ್, ದಕ್ಷಿಣ ಆಫ್ರಿಕಾದ ತಬ್ರೇಜ್ ಶಂಸಿ ಅವರಂತಹ ಆಟಗಾರರನ್ನು ಯಾವ ತಂಡವೂ ಖರೀದಿಸಿಲ್ಲ.
ಉಳಿದಂತೆ ಡೇವಿಡ್ ಮಲಾನ್, ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ವಿಜೇತ ನಾಯಕ ಏರಾನ್ ಫಿಂಚ್, ಇಂಗ್ಲೆಂಡ್ನ ಟಿ20 ತಂಡದ ನಾಯಕ ಇಯಾನ್ ಮಾರ್ಗನ್, ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ ಕೂಡ ಇವರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ.