ಇಂದೋರ್ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಎರಡು ಬಾರಿ ಔಟ್ ಆಗುವ ಅವಕಾಶದಿಂದ ತಪ್ಪಿಸಿಕೊಂಡರು. ವೇಗಿ ಮಿಚಲ್ ಸ್ಟಾರ್ಕ್ ಎಸೆತದಲ್ಲಿ ಡಕೌಟ್ ರೋಹಿತ್ ಡಕೌಟ್ ಆಗಬೇಕಿತ್ತು.
ಪಂದ್ಯದ ಸ್ಟಾರ್ಕ್ ಅವರ ಮೊದಲ ಓವರ್ ನ ಮೊದಲ ಎಸೆತದಲ್ಲಿ ಚೆಂಡು ವಿಕೆಟ್ ಕೀಪರ್ ಆ್ಯಲೆಕ್ಸ್ ಕ್ಯಾರಿ ಕೈಸೆರಿತು. ಆಸಿಸ್ ಆಟಗಾರರು ಮನವಿ ಮಾಡಿದರು, ಅಂಪೈಯರ್ ನಿತಿನ್ ಮೆನನ್ ಔಟ್ ನೀಡಲಿಲ್ಲ. ನಾಯಕ ಸ್ಮಿತ್ ರಿವ್ಯೂ ತೆಗೆದುಕೊಳ್ಳದಂತೆ ನಿರ್ಧಾರ ಕೈಗೊಂಡರು. ಅಲ್ಟ್ರ ಎಡ್ಜ್ ತಂತ್ರಜ್ಞಾನದಲ್ಲಿ ಬ್ಯಾಟ್ ಚೆಂಡಿಗೆ ತಗುಲಿರುವುದು ಸ್ಪಷ್ಟವಾಗಿತ್ತು.
ಎರಡು ಎಸೆತಗಳ ಬಳಿಕ ಸ್ಟಾರ್ಕ್ ಎಸೆದ ಚೆಂಡು ರೋಹಿತ್ ಅವರ ಪ್ಯಾಡ್ಗೆ ಬಡಿಯಿತು. ಆಸಿಸ್ ಆಟಗಾರರು ಮನವಿ ಮಾಡಿದರು.ನಂತರ ಮನವಿ ತೆಗೆದುಕೊಳ್ಳದಂತೆ ನಿರ್ಧಾರ ಮಾಡಿದರು. ರಿಪ್ಲೇನಲ್ಲಿ ಸ್ಟಂಪ್ಗೆಗೆ ಚೆಂಡು ಬಡಿಯುತ್ತಿದ್ದದ್ದು ಸ್ಪಷ್ಟವಾಗಿತ್ತು.ನಾಯಕ ಸ್ಮಿತ್ ಎರಡನೆ ಬಾರಿಯೂ ಎಡವಿದರು.
ಎರಡೂ ಅವಕಾಶ ಪಡೆದ ಹೊರತಾಗಿಯೂ ರೋಹಿತ್ ಅವಕಾಶ ಬಳಸಿಕೊಳ್ಳಲಿಲ್ಲ. 12 ರನ್ ಗಳಿಸಿದ್ದಾಗ ಕುನೆಮಾನ್ ಎಸೆದಲ್ಲಿ ಸ್ಟಂಪ್ ಆದರು.