ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೆ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಇದರೊಂದಿಗೆ ಟೀಮ್ ಇಂಡಿಯಾ 1-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ನೇಪಿಯರ್ನಲ್ಲಿ ನಡೆದ ಮೂರನೆ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.4 ಓವರ್ಗಳಲ್ಲಿ 160 ರನ್ ಗಳಿಸಿ ಆಲೌಟ್ ಆಯಿತು. ಭಾರತ 9 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತು.
ಭಾರತ ಪರ ಇಶಾನ್ ಕಿಶನ್ 10, ರಿಷಬ್ ಪಂತ್ 11, ಸೂರ್ಯ ಕುಮಾರ್ 13, ಶ್ರೇಯಸ್ ಅಯ್ಯರ್ 0 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದರು. ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 30 ರನ್, ದೀಪಕ್ ಹೂಡಾ ಅಜೇಯ 9 ರನ್ ಗಳಿಸಿದರು.
9 ಓವರ್ಗಳಿಗೆ 4 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದ್ದಾಗ ಮಳೆ ಜೋರಾಗಿ ಸುರಿದ್ದರಿಂದ ಪಂದ್ಯ ನಿಂತಿತು. ನಂತರ ಮಳೆ ನಿಲ್ಲದಿದ್ದಾಗ ಡಕ್ ವರ್ತ್ ಲೂಹಿಸ್ ನಿಯಮ ಅಳವಡಿಸಲಾಯಿತು. ಪಂದ್ಯ ಟೈ ಎಂದು ಘೋಷಿಸಲಾಯಿತು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 27ಕ್ಕೆ 2, ಆಡಮ್ ಮಿಲ್ನೆ 23ಕ್ಕೆ 1, ಇಶ್ ಸೌಧಿ 12ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ನ್ಯೂಜಿಲೆಂಡ್ ಪರ ಫಿನ್ ಆಲೆನ್ 3, ಡೆವೊನ್ ಕಾನ್ವೆ 59(82 ಎಸೆತ,5 ಬೌಂಡರಿ, 2ಸಿಕ್ಸರ್) , ಮಾರ್ಕ್ ಚಾಪ್ ಮನ್ 12, ಗ್ಲೇನ್ ಫಿಲೀಪ್ಸ್ 54 ರನ್ (49 ಎಸೆತ, 5 ಬೌಂಡರಿ, 3 ಸಿಕ್ಸರ್) ಡ್ಯಾರಿಲ್ ಮಿಚೆಲ್ 10 ರನ್ ಕಲೆ ಹಾಕಿದರು.
ಭಾರತ ಪರ ಮೊಹ್ಮದ್ ಸೀರಾಜ್ 17ಕ್ಕೆ 4, ಆರ್ಷದೀಪ್ 37ಕ್ಕೆ 4 ಹಾಗೂ ಹರ್ಷಲ್ ಪಟೇಲ್ 28ಕ್ಕೆ 1 ವಿಕೆಟ್ ಪಡೆದರು.
ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಸರಣಿ ಶ್ರೇಷ್ಠ ಹಾಗೂ 4 ವಿಕೆಟ್ ಪಡೆದ ಮೊಹ್ಮದ್ ಸೀರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.