ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ (Indo VS Pak: ) ಹೋರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗ ಹಳೆಯ ಲೆಕ್ಕಾಚಅರಗಳ ಬಗ್ಗೆ ಚರ್ಚೆ ಜೋರಾಗುತ್ತಿದೆ. ಇಂದಿನ ಪಂದ್ಯದ ಸೋಲು, ಗೆಲುವಿನ ನಡುವೆ ಹಿಂದೆ ಯಾರು ಮತ್ತು ಹೇಗೆ ಗೆದ್ದಿದ್ದರು ಅನ್ನುವುದು ಕೂಡ ಹಾಟ್ ಟಾಪಿಕ್. ಭಾರತ (India) ಮತ್ತು ಪಾಕ್ (Pakistan) ತಂಡದ ದಂತಕಥೆಗಳೆಲ್ಲರೂ ಏಷ್ಯಾಕಪ್ (Asia Cup) ಹೋರಾಟದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಏಷ್ಯಾಕಪ್‌ಗೆ ದೊಡ್ಡ ಇತಿಹಾಸವಿದೆ. ಐಸಿಸಿ ಈವೆಂಟ್ ಬಳಿಕ ಅತಿ ಹಳೆಯ ಟೂರ್ನಿಗಳಲ್ಲಿ ಇದು ಕೂಡ ಒಂದಾಗಿದೆ.
ಇದು 14ನೇ ಆವೃತ್ತಿಯ ಏಷ್ಯಾಕಪ್. ಅದರೆ ಭಾರತ (Indo) ಮತ್ತು ಪಾಕಿಸ್ತಾನ (Pak) ನಡುವೆ ಇಲ್ಲಿ ತನಕ 14 ಪಂದ್ಯಗಳು ನಡೆದಿವೆ. 8 ಪಂದ್ಯಗಳಲ್ಲಿ ಭಾರತದ (India) ಕ್ಲೀಯರ್ ಮೆಜಾರಿಟಿ ಸಾಧಿಸಿದೆ. ಪಾಕ್ ಗೆದ್ದಿರುವುದು ಕೇವಲ 5 ಪಂದ್ಯಗಳನ್ನು ಮಾತ್ರ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಹೀಗಾಗಿ ಹಳೆಯ ಲೆಕ್ಕಾಚಾರದಲ್ಲೂ ಭಾರತದ್ದೇ ಪಾರಮ್ಯ.
ಏಷ್ಯಾಕಪ್ ಇಂಡೋ-ಪಾಕ್ ರಿಸಲ್ಟ್
★ 1984: ಭಾರತಕ್ಕೆ 54 ರನ್‌ಗಳು
★ 1988:4 ವಿಕೆಟ್‌ಗಳಿಂದ ಗೆದ್ದ ಟೀಮ್ ಇಂಡಿಯಾ
★ 1995: ಪಾಕಿಸ್ತಾನಕ್ಕೆ 92 ರನ್
★ 2000: ಪಾಕ್‌ಗೆ 44 ರನ್
★ 1999: ನೋ ರಿಸಲ್ಟ್
★ 2004:59 ರನ್‌ಗಳಿಂದ ಗೆದ್ದ ಪಾಕಿಸ್ತಾನ
★ 2008:8 ವಿಕೆಟ್ ಜಯ ಸಾಧಿಸಿದ ಭಾರತ
★ 2008: ಪಾಕಿಸ್ತಾನಕ್ಕೆ 6 ವಿಕೆಟ್
★ 2010: ಭಾರತಕ್ಕೆ 3 ವಿಕೆಟ್
★ 2012:6 ವಿಕೆಟ್ ಗೆಲುವು ಸಾಧಿಸಿದ ಭಾರತ
★ 2016:6 ವಿಕೆಟ್ ಜಯ ಕಂಡ ಭಾರತ
★ 2014: ಪಾಕಿಸ್ತಾನಕ್ಕೆ 1 ವಿಕೆಟ್
★ 2018: ಭಾರತಕ್ಕೆ 8 ವಿಕೆಟ್ ಜಯ
★ 2018: ಭಾರತಕ್ಕೆ 9 ವಿಕೆಟ್ ಜಯ
ಈ ಎರಡು ತಂಡಗಳ ನಡುವೆ ಹೋರಾಟ ನಡೆದರೆ ಮೈದಾನ ಮತ್ತು ಆಟಗಾರರ ನಡುವೆ ಕದನ ಇರುವುದಿಲ್ಲ. ಇದು ದೇಶಗಳ ನಡುವಿನ ಕದನದಂತೆ ಟೆಂಪರಮೆಂಟ್ ಪಡೆಯುತ್ತಿದೆ. ಒಟ್ಟಿನಲ್ಲಿ ಇಂಡೋ-ಪಾಕ್ ನಡುವಿನ ಹೋರಾಟಕ್ಕೆ ಕೆಲವೇ ಗಂಟೆ ಮಾತ್ರ ಉಳಿದಿರುವಾಗಲೂ ಇತಿಹಾಸ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿ ಕಾಣುತ್ತಿದೆ.