ಕಳೆದ ಕೆಲವು ವರ್ಷಗಳಲ್ಲಿ, ಭಾರತದ ಅಂಡರ್-19 ಕ್ರಿಕೆಟಿಗರು ಐಪಿಎಲ್ ಹರಾಜಿನಲ್ಲಿ ಭಾರೀ ಮೊತ್ತವನ್ನು ಪಡೆಯುತ್ತಿದ್ದಾರೆ. ಈ ಋತುವಿನ ಹರಾಜಿನಲ್ಲಿಯೂ ಯುವ ಆಟಗಾರರ ಮೇಲೆ ಕಣ್ಣು ನೆಟ್ಟಿದೆ. IPL 2022 ಹರಾಜು ಅನೇಕ ಯುವಕರ ಜೀವನವನ್ನು ಬದಲಾಯಿಸಲಿದ್ದು, ವಿಶ್ವದ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವರಿಗೆ ಅವಕಾಶವನ್ನು ನೀಡುತ್ತದೆ. ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಐವರು ಭಾರತೀಯ ಅಂಡರ್ -19 ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
1- ಹರ್ನೂರ್ ಸಿಂಗ್:
ಈ ವರ್ಷದ ಭಾರತ ಅಂಡರ್-19 ತಂಡದ ಅತ್ಯಂತ ಭರವಸೆಯ ಪ್ರತಿಭೆಗಳಲ್ಲಿ ಹರ್ನೂರ್ ಒಬ್ಬರು. ಅವರು ತಂಡದ ಪ್ರಮುಖ ಬ್ಯಾಟ್ಸ್‌ಮನ್. ಮತ್ತು ಇತ್ತೀಚೆಗೆ ಆಡಿದ ಪಂದ್ಯಗಳಲ್ಲಿ ಮತ್ತು ಅಂಡರ್-19 ವಿಶ್ವಕಪ್‌ನಲ್ಲಿ ಕೆಲವು ಶ್ರೇಷ್ಠ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
2- ಆಂಗ್‌ಕ್ರಿಶ್ ರಘುವಂಶಿ:
ಓಪನರ್ ಆಂಗ್‌ಕ್ರಿಶ್ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್. ಇವರು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 79 ರನ್ ಗಳಿಸಿದ್ದರು ಮತ್ತು ನಂತರ ಉಗಾಂಡಾ ವಿರುದ್ಧ ಶತಕ (120 ರಲ್ಲಿ 144) ಗಳಿಸಿದ್ದರು. ಆದ್ದರಿಂದ, ಅವರು ಖಂಡಿತವಾಗಿಯೂ ಹರಾಜಿನಲ್ಲಿ ಹೆಚ್ಚು ಬೇಡಿಕೆಯಿರುವ ಹೆಸರುಗಳಲ್ಲಿ ಒಬ್ಬರಾಗುತ್ತಾರೆ.
3- ರಾಜ್ ಬಾವಾ:
ಇವರು ಆಲ್ ರೌಂಡರ್ ಆಗಿದ್ದಾರೆ ಮತ್ತು ಬಹುಶಃ ಐಪಿಎಲ್ ಫಾರ್ಮ್ಯಾಟ್‌ಗೆ ಅತ್ಯುತ್ತಮ ಫಿಟ್ ಆಟಗಾರ. ಅವರು 3-4 ಓವರ್‌ಗಳನ್ನು ಆರಾಮವಾಗಿ ಬೌಲ್ ಮಾಡಬಹುದು ಮತ್ತು ಉತ್ತಮ ಬ್ಯಾಟ್ಸ್‌ಮನ್ ಕೂಡ. ಅವರು ಉಗಾಂಡ ವಿರುದ್ಧ ಅದ್ಭುತ ಇನ್ನಿಂಗ್ಸ್ (108 ಎಸೆತಗಳಲ್ಲಿ 162), ಐರ್ಲೆಂಡ್ ವಿರುದ್ಧ 64 ಎಸೆತಗಳಲ್ಲಿ 42 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ವಿಕೆಟ್ ಗಳನ್ನು ಪಡೆದರು. ಯುವ ಆಲ್‌ರೌಂಡರ್‌ನ ಅಗತ್ಯವಿರುವ ಫ್ರಾಂಚೈಸಿಗಳು ಖಂಡಿತವಾಗಿಯೂ ಬಾವಾ ಅವರನ್ನು ಹರಾಜಿನಲ್ಲಿ ಬಿಡ್ ಮಾಡುತ್ತಾರೆ.
4- ಯಶ್ ಧುಲ್:
ಯಶ್ ಭಾರತದ ಅಂಡರ್-19 ನಾಯಕರಾಗಿದ್ದಾರೆ. ಇವರು ಅದ್ಭುತ ಬ್ಯಾಟ್ಸ್‌ಮನ್ ಮತ್ತು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರ ಇನ್ನಿಂಗ್ಸ್ (100 ಎಸೆತಗಳಲ್ಲಿ 82 ರನ್) ಪ್ರಭಾವಶಾಲಿಯಾಗಿತ್ತು. ದುರದೃಷ್ಟವಶಾತ್ ಅವರಿಗೆ ಕರೋನಾ ಸೋಂಕು ತಗುಲಿದ್ದರಿಂದ ಮುಂದಿನ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು.
5- ವಿಕ್ಕಿ ಓಸ್ತ್ವಾಲ್:
ಪ್ರಸ್ತುತ ಭಾರತ ಅಂಡರ್-19 ತಂಡದಲ್ಲಿ ವಿಕ್ಕಿ ಅತ್ಯುತ್ತಮ ಬೌಲರ್ ಆಗಿದ್ದಾರೆ ಮತ್ತು ಅವರು ದಕ್ಷಿಣ ಆಫ್ರಿಕಾ ವಿರುದ್ಧ 28ರನ್ ನೀಡಿ ಐದು ವಿಕೆಟ್ ಪಡೆದು ಅಬ್ಬರಿಸಿದ್ದರು. ಅವರು 2022 ರ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಬಹುದು. ಅವರು ಹರಾಜಿನಲ್ಲಿ ಉತ್ತಮ ಮೊತ್ತವನ್ನು ಪಡೆಯುವ ನಿರೀಕ್ಷೆ ಇದೆ.