ಆತ್ಮವಿಶ್ವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡವು ಭಾನುವಾರ ವಿಶ್ವಕಪ್‌ನ ತಮ್ಮ ಮೊದಲ ಪೂಲ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದು, ಟೋಕಿಯೊ ಓಲಿಪಿಂಕ್ಸ್ ಸೋಲಿನ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 4-3 ಗೋಲುಗಳಿಂದ ಭಾರತವನ್ನು ಸೋಲಿಸಿ ಐತಿಹಾಸಿಕ ಪದಕ ಜಯವನ್ನು ಪಡೆದಿತ್ತು.
ವಿಶ್ವಕಪ್‌ಗೂ ಮೊದಲು, ಭಾರತ ತಂಡವು ಮೊದಲ ಬಾರಿಗೆ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿ ಉತ್ಸಾಹದಲ್ಲಿತ್ತು. ಟೋಕಿಯೊದಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ, ಭಾರತೀಯ ಮಹಿಳಾ ತಂಡದ ಪ್ರದರ್ಶನದ ಗುಣ ಮಟ್ಟ ಏರುತ್ತಿದೆ. ಮೇ ತಿಂಗಳಲ್ಲಿ, ಭಾರತ ತಂಡವು ಎಫ್‌ಐಎಚ್ ಶ್ರೇಯಾಂಕದಲ್ಲಿ ಆರನೇ ಸ್ಥಾನವನ್ನು ತಲುಪಿತ್ತು. ಇದು ಇಲ್ಲಿಯವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಭಾರತ ತಂಡವು ಬೆಲ್ಜಿಯಂ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗಿಂತ ಮುಂದಿದೆ.

ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರು ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಿಂದ ಗಾಯದ ಸಮಸ್ಯೆಯಿಂದ ರಾಣಿ ರಾಂಪಾಲ್ ತಂಡದಿಂದ ಹೊರಗುಳಿದಿದ್ದರು. ಸವಿತಾ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಯುವ ಗೋಲ್‌ಕೀಪರ್ ಬಿಚ್ಚು ದೇವಿ ಖರಿಬಮ್ ಅವರಿಗೆ ಬೆಂಬಲ ನೀಡಲಿದ್ದಾರೆ.

ರಕ್ಷಣಾ ವಿಭಾಗದ ಉಪನಾಯಕಿ ದೀಪ್ ಗ್ರೇಸ್ ಇಕ್ಕಾ, ಗುರ್ಜಿತ್ ಕೌರ್, ಉದಿತಾ ಮತ್ತು ನಿಕ್ಕಿ ಪ್ರಧಾನ್ ನೇತೃತ್ವ ವಹಿಸಿದರೆ, ಮಿಡ್‌ಫೀಲ್ಡ್ ಅನ್ನು ಸುಶೀಲಾ ಚಾನು, ನೇಹಾ ಗೋಯಲ್ ನಿರ್ವಹಿಸಲಿದ್ದಾರೆ. ನವಜೋತ್ ಕೌರ್, ಸೋನಿಕಾ, ಜ್ಯೋತಿ. , ನಿಶಾ ಮೋನಿಕಾ ಮೇಲೆ ಇರುತ್ತಾರೆ. ಸಲೀಮಾ ಟೆಟೆ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಪ್ಲೇಮೇಕರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ದಾಳಿಯ ಹೊಣೆಯನ್ನು ವಂದನಾ ಕಟಾರಿಯಾ, ಲಾಲ್ರೆಮ್ಸಿಯಾಮಿ, ನವನೀತ್ ಕೌರ್ ಮತ್ತು ಶರ್ಮಿಳಾ ದೇವಿ ಅವರ ಮೇಲಿದೆ.