ಷಾ ಆಲಂ (ಮಲೇಷ್ಯಾ): ಏಷ್ಯಾ ಟೀಮ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ವನಿತೆಯರ ತಂಡ 2-3 ರಿಂದ ಆತಿಥೇಯ ಮಲೇಷ್ಯಾ ವಿರುದ್ಧ ನಿರಾಸೆ ಅನುಭವಿಸಿದೆ.
ಆಕರ್ಷಿ ಕಶ್ಯಪ್ ಮೊದಲ ಪಂದ್ಯದಲ್ಲಿ 16-21, 21-18, 16-21 ರಿಂದ ಕಿಸೋನ ಸೆಲ್ವದೊರೆ ವಿರುದ್ಧ ನಿರಾಸೆ ಅನುಭವಿಸಿದರು. ಡಬಲ್ಸ್ ವಿಭಾಗದಲ್ಲಿ ಖುಷಿ ಗುಪ್ತಾ / ರಿಜಾ ಮೆಹ್ರೀನ್ ಜೋಡಿ 1-21, 6-21 ರಿಂದ ಮಲೇಷ್ಯಾದ ವ್ಯಾಲೆರೀ ಸಿಯೋವ್ / ಪರ್ಲಿ ಟ್ಯಾನ್ ವಿರುದ್ಧ ಆಘಾತ ಅನುಭವಿಸಿತು.
ಇನ್ನು ಅಶ್ಮಿತಾ ಚಲಿಹಾ 21-11, 21-19 ರಿಂದ ಸಿತಿ ನೂರ್ಶುಹೈನಿ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಅರುಲ್ ಬಾಲ ರಾಧಾಕೃಷ್ಣನ್ / ನೀಲಾ ವಲ್ಲುವನ್ ಜೋಡಿ 10-21, 12-21 ರಿಂದ ಅನ್ನಾ ಚಿಯೋಂಗ್ / ಟಿಯೋಹ್ ಮೇ ಕ್ಸಿಂಗ್ ವಿರುದ್ಧ ಸೋಲು ಕಂಡಿತು. ತಾರಾ ಶಾ 21-16, 21-15 ರಿಂದ ಮೈಶಾ ಮೊಹಮ್ಮದ್ ಖೈರುಲ್ ವಿರುದ್ಧ ಗೆದ್ದು ಬೀಗಿದರು.