ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಕ್ಕೆ ಎಂಟ್ರಿಯಾದ ಮೇಲೆ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ದಾಖಲೆ ಬರೆಯುತ್ತಾ ಹೋದರು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ನಿವೃತ್ತಿಯಾಗುವ ಹೊತ್ತಲ್ಲಿ ಧೋನಿ ವಿಶ್ವದ ಶ್ರೇಷ್ಠ ನಾಯಕರ ಪಟ್ಟಿ ಸೇರಿದ್ದರು. ಬ್ಯಾಟಿಂಗ್, ಕೀಪಿಂಗ್ ಮತ್ತು ಕ್ಯಾಪ್ಟನ್ಸಿಯಲ್ಲಿ ಧೋನಿಗೆ ಸರಿಸಾಟಿ ಯಾರೂ ಇಲ್ಲ ಅನ್ನುವ ಹಾಗೆ ಆಡಿದ್ದರು.
ಆದರೆ ಈಗ ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಹವಾ ಜೋರಾಗಿದೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಲು ರಿಷಬ್ ಸಿದ್ಧರಾಗಿದ್ದಾರೆ. ಇಲ್ಲಿ ತನಕ 25 ಟೆಸ್ಟ್ ಪಂದ್ಯ ಆಡಿರುವ ರಿಷಬ್ 97 ಬಲಿ ಪಡೆದಿದ್ದಾರೆ. 100ನೇ ಬಲಿಗಾಗಿ ಕಾದು ಕುಳಿತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರಿಷಬ್ ಈ ಸಾಧನೆ ಮಾಡುವುದು ಬಹುತೇಕ ಖಚಿತ. ಧೋನಿ ವಿಕೆಟ್ ಹಿಂದೆ ಈ ಸಾಧನೆ ಮಾಡಲು 36 ಪಂದ್ಯಗಳನ್ನು ತೆಗೆದುಕೊಂಡಿದ್ದರು.
37 ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆ ಮಾಡಿರುವ ವೃದ್ಧಿಮಾನ್ ಸಹಾ ಧೋನಿಗೆ ಹತ್ತಿರವಾಗಿದ್ದಾರೆ. ಭಾರತದ ಮಾಜಿ ಕೀಪರ್ಗಳಾದ ಕಿರಣ್ ಮೋರೆ, ನಯನ್ ಮೊಂಗಿಯಾ ಮತ್ತು ಸೈಯದ್ ಕಿರ್ಮಾನಿ ಕ್ರಮವಾಗಿ 39, 41 ಮತ್ತು 42 ಟೆಸ್ಟ್ಗಳಲ್ಲಿ ಮೈಲಿಗಲ್ಲನ್ನು ತಲುಪಿದ್ದರು. ಈಗ ರಿಷಭ್ ಪಂತ್ ಧೋನಿ ದಾಖಲೆ ಮುರಿಯಲು ಸಿದ್ಧವಾಗಿದ್ದಾರೆ. ಮುಂದಿನ ದಿನಗಳಲ್ಲಿ ರಿಷಬ್ ಧೋನಿಯ ಹಲವು ದಾಖಲೆಗಳನ್ನು ಮುರಿಯುವುದು ಖಚಿತ