ಫುಟ್ಭಾಲ್ ಅಂದರೆ ಅರ್ಜೆಂಟೈನಾದ ಲಿಯೊನೆಲ್ ಮೆಸ್ಸಿ, ಪೋರ್ಚುಗಲ್ನ ಲಿಯೊನೆಲ್ ಮೆಸ್ಸಿ ಮೊದಲು ನೆನಪಾಗುತ್ತಾರೆ. ಆ ಬಳಿಕ ಅನೇಕ ಆಟಗಾರರ ಹೆಸರು ಬಂದೇ ಬರುತ್ತದೆ. ಭಾರತ ಆಟಗಾರರ ಹೆಸರು ಫುಟ್ಭಾಲ್ ಜೊತೆ ತಳುಕಿಹಾಕಿಕೊಳ್ಳುವುದೇ ಅಪರೂಪ. ಆದರ ಈಗ ಭಾರತದ ಫುಟ್ಭಾಲರ್ ಮೆಸ್ಸಿ ದಾಖಲೆಯನ್ನು ಮುರಿಸಲು ಸಜ್ಜಾಗಿದ್ದಾನೆ.
ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಒಂದು ದಶಕಕ್ಕೂ ಹೆಚ್ಚು ಕಾಲ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಭಾರತದ ಪಾಲಿಗೆ ಮಾತ್ರವಲ್ಲ ಹಲವು ದೇಶದ ಆಟಗಾರರಿಗೂ ಛೆಟ್ರಿ ಬಗ್ಗೆ ಗೊತ್ತು. ಸದ್ಯ ಛೆಟ್ರಿ ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಲಿಯೋನಿಲ್ ಮೆಸ್ಸಿ ದಾಖಲೆಯನ್ನು ಮುರಿಯಲು ಅವಕಾಶವೂ ಸಿಗಲಿದೆ.
ಅಂತರಾಷ್ಟ್ರೀಯ ಪಂದ್ಯಗಲ್ಲಿ ತಮ್ಮ ದೇಶದ ಗೋಲು ಗಳಿಸಿದವರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ ಛೆಟ್ರಿ ತಮ್ಮ ದೇಶದ ಪರ ಅತಿ ಹೆಚ್ಚು ಗೋಲ್ ಗಳನ್ನು ದಾಖಲಿಸಿದ ಸಕ್ರಿಯ ಆಟಗಾರ. ಛೆಟ್ರಿ ಇದುವರೆಗೆ ಅವರು 84 ಗೋಲ್ ಗಳನ್ನು ಗಳಿಸಿದ್ದಾರೆ, ಮೆಸ್ಸಿಗಿಂತ ಕೇವಲ ಎರಡು ಗೋಲ್ ಗಳಷ್ಟು ಅವರು ಹಿಂದೆ ಇದ್ದಾರೆ. ಇನ್ನೊಂದೆಡೆಗೆ ರೋನಾಲ್ಡೋ 117 ಗೋಲ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 86 ಗೋಲ್ ಗಳೊಂದಿಗೆ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ.
ಛೆಟ್ರಿ ಮುಂದಿನ ಬಾರಿ ಅಖಾಡಕ್ಕೆ ಇಳಿಯುವಾಗ ಈ ಸಾಧನೆ ಮಾಡಬಹುದು. ಭಾರತೀಯ ಫುಟ್ಭಾಲ್ ಲೋಕಕ್ಕೆ ಛೆಟ್ರಿ ಕೊಟ್ಟಿರುವ ಕೊಡುಗೆಗಳು ಅಷ್ಟಿಷ್ಟಲ್ಲ. ಆದರೆ ಛೆಟ್ರಿ ಸಾಧನೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಅನ್ನುವುದೇ ಬೇಸರದ ಸಂಗತಿ.