ಏಕದಿನ ಸರಣಿಯ ಮೊದಲ 4 ಪಂದ್ಯಗಳನ್ನು ಸೋತಿದ್ದ ಭಾರತ ವೈಟ್ ವಾಷ್ ಅವಮಾನದ ಭೀತಿಯಲ್ಲಿತ್ತು. ಆದರೆ 5ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಜಯ ಸಾಧಿಸಿ ನ್ಯೂಜಿಲೆಂಡ್ ಕ್ಲೀನ್ ಸ್ವೀಪ್ ಆಸೆಗೆ ತಣ್ಣೀರೆರಚಿತು.
ಟಾಸ್ ಗೆದ್ದ ಭಾರತ ಮೊದಲು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಸೂಜಿ ಬೇಟ್ಸ್ (17) ಮತ್ತು ಸೋಫಿ ಡಿವೈನ್ (34) ಎಂದಿನಂತೆ ಉತ್ತಮ ಆರಂಭ ತಂದುಕೊಟ್ಟರು. ಆ ಬಳಿಕ ಅಮೆಲಿಯ ಕೆರ್ (66) ಮತ್ತೊಮ್ಮೆ ಉತ್ತಮ ಆಟ ಆಡಿದರು. ಆಮಿ ಸೆಟರ್ವೆಟ್ (12), ಲಾರೆನ್ ಡೌನ್ (30) ಮತ್ತು ಹೀಲಿ ಜೆನ್ಸನ್ (30) ಉತ್ತಮ ಆಟ ಆಡಿದರು. 50 ಓವರುಗಳಲ್ಲಿ ಕಿವೀಸ್ ವನಿತೆಯರು 9 ವಿಕೆಟ್ ಕಳೆದುಕೊಂಡು 251 ರನ್ಗಳಿಸಿದರು.
ಚೇಸಿಂಗ್ ಆರಂಭಿಸಿದ ಭಾರತ ಶಫಾಲಿ ವರ್ಮಾ (9) ವಿಕೆಟ್ ಅನ್ನು ಬೇಗೆನೆ ಕಳೆದುಕೊಂಡಿತು. ಆದರೆ ಸ್ಮೃತಿ ಮಂಧಾನಾ ಮತ್ತು ದೀಪ್ತಿ ಶರ್ಮಾ ಆರಂಭದಲ್ಲೇ ಆಘಾತವಾಗದಂತೆ ನೋಡಿಕೊಂಡರು. ಮಂಧಾನ 71 ರನ್ಗಳಿಸಿದರೆ, ದೀಪ್ತಿ 21 ರನ್ಗಳಿಸಿದರು.
ಹರ್ಮನ್ ಪ್ರಿತ್ ಕೌರ್ ಮತ್ತು ಮಿಥಾಲಿ ರಾಜ್ ಮತ್ತೊಂದು ಜೊತೆಯಾಟ ಕಟ್ಟಿದರು. ಫಾರ್ಮ್ ಕಂಡುಕೊಂಡ ಹರ್ಮನ್ 66 ಎಸೆತಗಳಲ್ಲಿ 63 ರನ್ಗಳಿಸಿ ಮಿಂಚಿದರು. ಮಿಥಾಲಿ ರಾಜ್ ಅಜೇಯ 54 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿರು. ಭಾರತ 46 ಓವರುಗಳಲ್ಲಿ 4 ವಿಕೆಟ್ಕಳೆದುಕೊಂಡು 252 ರನ್ಗಳಿಸಿತು. 5 ಪಂದ್ಯಗಳ ಸರಣಿಯಲ್ಲಿ ಭಾರತ 4-1ರ ಹಿನ್ನಡೆ ಅನುಭವಿಸಿ ನ್ಯೂಜಿಲೆಂಡ್ ಪ್ರವಾಸ ಮುಗಿಸಿತು.