ಪುರುಷರ ಏಷ್ಯಾಕಪ್ ಹಾಕಿ ವೇಳಾಪಟ್ಟಿ ಪ್ರಕಟವಾಗಿದೆ. ಇಂಡೋನೇಷ್ಯಾದ ಜಕಾರ್ತದಲ್ಲಿ ಮೇ 23 ರಿಂದ ಪ್ರಾರಂಭವಾಗುವ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ತಂಡವಾದ ಪಾಕಿಸ್ತಾನವನ್ನು ಎದುರಿಸಲಿದೆ. ಇದು ಏಷ್ಯಾಕಪ್ನ 11ನೇ ಆವೃತ್ತಿಯಾಗಿದೆ. ಈ ಟೂರ್ನಿಯ ಅಂತಿಮ ಪಂದ್ಯ ಜೂನ್ 1 ರಂದು ನಡೆಯಲಿದೆ. ಎಂಟು ತಂಡಗಳ ನಡುವೆ ಏಷ್ಯಾಕಪ್ ಚಾಂಪಿಯನ್ ಪಟ್ಟ ಅಲಂಕರಿಸಲು ಫೈಟ್ ನಡೆಯಲಿದೆ.
8 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡ ಪುಲ್ ಎ ನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಈ ಎರಡು ತಂಡಗಳಲ್ಲದೆ, ಜಪಾನ್ ಮತ್ತು ಆತಿಥೇಯ ಇಂಡೋನೇಷ್ಯಾದ ತಂಡವಿದೆ. ಎರಡನೇ ಗ್ರುಪ್ ನಲ್ಲಿ ಬಾಂಗ್ಲಾದೇಶ, ಮಲೇಷ್ಯಾ, ಓಮನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಸ್ಥಾನ ಪಡೆದಿವೆ.
ಏಷ್ಯಾಕಪ್ನಲ್ಲಿ ಭಾರತದ ಸಾಧನೆ
ಭಾರತ ನಾಲ್ಕನೇ ಏಷ್ಯಾಕಪ್ ಪ್ರಶಸ್ತಿಯನ್ನು ಗೆಲ್ಲವು ಕನಸು ಹೊಂದಿದೆ. 2017 ರಲ್ಲಿ, ತಂಡವು ತನ್ನ ಮೂರನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಒಂದೇ ಒಂದು ಪಂದ್ಯವನ್ನು ಸೋತು ಗೆದ್ದುಕೊಂಡಿತು. ಪಾಕ್ 1982, 1985 ಮತ್ತು 1989 ರಲ್ಲಿ ಈ ಕಪ್ ಗೆದ್ದಿದೆ.
ದಕ್ಷಿಣ ಕೊರಿಯಾ ಅತಿ ಹೆಚ್ಚು ಬಾರಿ ಈ ಕಪ್ ಗೆದ್ದಿದೆ. ಅವರು 1994, 1999, 2009 ಮತ್ತು 2013 ರಲ್ಲಿ ಈ ಕಪ್ ಗೆದ್ದಿದೆ. ಭಾರತ ಈ ಬಾರಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾದರೆ ಈ ತಂಡದ ಸಾಧನೆಯ ಸಮಕ್ಕೆ ನಿಲ್ಲ ಬಹುದು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡದ ಉತ್ಸಾಹ ಹೆಚ್ಚಿದೆ.