ಟಿ20 ವಿಶ್ವಕಪ್ ಫೈಟ್ ನೆನಪು ಇನ್ನೂ ಮಾಸಿಲ್ಲ. ಆದರೆ ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ಮತ್ತೊಂದು ಕಾದಾಟಕ್ಕೆ ಸಿದ್ಧವಾಗುತ್ತಿವೆ. ಪಿಂಕ್ ಸಿಟಿ ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್, ಟೀಮ್ ಇಂಡಿಯಾಕ್ಕೆ ಸವಾಲೊಡ್ಡಿದೆ.
ರಾಹುಲ್ ದ್ರಾವಿಡ್ಗೆ ಟೀಮ್ ಇಂಡಿಯಾದ ಕೋಚ್ ಆದ ಬಳಿಕ ಮೊದಲ ಸರಣಿಯಾಗಿದೆ. ಪೂರ್ಣ ಪ್ರಮಾಣದ ನಾಯಕನಾದ ಮೇಲೆ ರೋಹಿತ್ಗೂ ಇದು ಮೊದಲ ಸರಣಿ. ಹೀಗಾಗಿ ಇಬ್ಬರಿಗೂ ತವರಿನಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. ಇನ್ನು ನ್ಯೂಜಿಲೆಂಡ್ ಕೂಡ ನಾಯಕ ಕೇನ್ ವಿಲಿಯಮ್ಸನ್ ಲಭ್ಯತೆಯನ್ನು ಕಳೆದುಕೊಂಡಿದೆ. ಟಿಮ್ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾದ ಕಾಂಬಿನೇಷನ್ ಕೂಡ ಸಿಕ್ಕಾ ಪಟ್ಟೆ ಚರ್ಚೆಯಲ್ಲಿದೆ. ರೋಹಿತ್ ಶರ್ಮಾ ಜೊತೆ , ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇಶನ್ ಕಿಶನ್ ನಂಬರ್ ತ್ರಿಯಲ್ಲಿ ಆಡಿದರೆ, ನಾಲ್ಕನೇ ಕ್ರಮಾಂಕ ಯಾರ ಪಾಲಾಗುತ್ತೆ ಅನ್ನುವ ಚರ್ಚೆಯಿದೆ. ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ ಮತ್ತು ರುತುರಾಜ್ ಗಾಯಕ್ವಾಡ್ ಈ ಸ್ಥಾನಕ್ಕಾಗಿ ಫೈಟ್ ಮಾಡ್ತಿದ್ದಾರೆ. ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ ಸ್ಥಾನಕ್ಕೆ ತೊಂದರೆ ಇಲ್ಲ. ಅಕ್ಸರ್ ಪಟೇಲ್ ಮತ್ತು ಅಶ್ವಿನ್ ಸ್ಪಿನ್ ಧ್ವಯರು. ಭುವನೇಶ್ವರ್, ಮೊಹಮ್ಮದ್ ಸಿರಾಜ್ ವೇಗಿಗಳು. ಯಜುವೇಂದ್ರ ಚಹಲ್ ಟ್ರಂಪ್ ಕಾರ್ಡ್ ಸ್ಪಿನ್ನರ್.
ನ್ಯೂಜಿಲೆಂಡ್ ಕೂಡ ಹಲವು ಹಿನ್ನಡೆ ಅನುಭವಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಅಲಭ್ಯರಾಗಿದ್ದಾರೆ. ಡೆವೊನ್ ಕಾನ್ವೆ ಮತ್ತು ಟ್ರೆಂಟ್ ಬೋಲ್ಟ್ ಸೇವೆಯೂ ಅಲಭ್ಯ. ಹೀಗಾಗಿ ಹೊಸ ಕಾಂಬಿನೇಷನ್ನತ್ತ ಕಿವೀಸ್ ಗಮನವಿಟ್ಟಿದೆ.
ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂ ಬ್ಯಾಟ್ಸ್ಮನ್ಗಳಿಗೆ ಸಹಕಾರಿ. ರಾತ್ರಿ ವೇಳಿ ಇಬ್ಬನಿ ಬೀಳುವುದರಿಂದ ಟಾಸ್ ಗೆದ್ದವನೆ ಬಾಸ್. ಹೀಗಾಗಿ ಟಾಸ್ ಮೇಲೆ ಎರಡೂ ತಂಡಗಳು ಕಣ್ಣಿಟ್ಟಿವೆ.
ಸಂಭಾವ್ಯ XI
ಟೀಮ್ ಇಂಡಿಯಾ
- ರೋಹಿತ್ ಶರ್ಮಾ, 2. ಕೆ.ಎಲ್. ರಾಹುಲ್, 3. ಇಶಾನ್ ಕಿಶನ್, 4. ವೆಂಕಟೇಶ್ ಅಯ್ಯರ್/ ಶ್ರೇಯಸ್ ಅಯ್ಯರ್/ ರುತುರಾಜ್ ಗಾಯಕ್ವಾಡ್, 5. ಸೂರ್ಯಕುಮಾರ್ ಯಾದವ್, 6. ರಿಷಬ್ ಪಂತ್, 7. ಅಕ್ಸರ್ ಪಟೇಲ್, 8. ರವಿಚಂದ್ರನ್ ಅಶ್ವಿನ್, 9. ಭುವನೇಶ್ವರ್ ಕುಮಾರ್, 10. ಮೊಹಮ್ಮದ್ ಸಿರಾಜ್, 11. ಯುಜುವೇಂದ್ರ ಚಹಲ್
ನ್ಯೂಜಿಲೆಂಡ್
- ಮಾರ್ಟಿನ್ ಗಪ್ಟಿಲ್, 2. ಡೆರಿಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, 4. ಮಾರ್ಕ್ ಚಾಪ್ಮನ್ಮ 5. ಟಿಮ್ ಸೀಫರ್ಟ್, 6. ಜೇಮಿ ನಿಶಾಮ್, 7. ಮಿಚೆಲ್ ಸ್ಯಾಟ್ನಂಟ್, 8. ಕೈಲ್ ಜೇಮಿಸನ್, 9. ಟಿಮ್ ಸೌಥಿ, 10. ಆ್ಯಡಂ ಮಿಲ್ನೆ, 11. ಈಶ್ ಸೋಧಿ