ಅಂಡರ್ 19 (Under 19 Worldcup )ವಿಶ್ವಕಪ್ ಫೈನಲ್ಗೆ ವೇದಿಕೆ ಸಿದ್ಧವಾಗಿದೆ. ಆಸ್ಟ್ರೇಲಿಯಾವನ್ನು (Australia) ಸೋಲಿಸಿದ ಭಾರತ (India), ಅಫ್ಘಾನಿಸ್ತಾವನ್ನು(Afghanistan) ಸೋಲಿಸಿದ ಇಂಗ್ಲೆಂಡ್ (England) ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಫೈನಲ್ ಪಂಧ್ಯ ಫೆಬ್ರವರಿ 5 ರಂದು ನಡೆಯಲಿದೆ. ಅಂಟಿಗುವಾದ ಸರ್. ವಿವಿಯನ್ ರಿಚರ್ಡ್ಸ್ (Sir Viv Richards)ಮೈದಾನದಲ್ಲಿ ಕಿರಿಯರ ವಿಶ್ವಕಪ್ ವಿಜೇತರು ಯಾರು ಅನ್ನುವುದು ನಿರ್ಧಾರವಾಗಲಿದೆ.
ಭಾರತ 2000, 2008, 2012 ಮತ್ತು 2018ರಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಈ ಬಾರಿ ಗೆದ್ದೆ 5ನೇ ಪ್ರಶಸ್ತಿ ಆಗಲಿದೆ.
ಸೆಮಿಫೈನಲ್ನಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು 96 ರನ್ಗಳಿಂದ ಸೋಲಿಸಿ ಫೈನಲ್ಪ್ರವೇಶಿಸಿತ್ತು
ಇಂಗ್ಲೆಂಡ್ ಅಫ್ಘಾನ್ ತಂಡವನ್ನು 15 ರನ್ಗಳಿಂದ ಸೆಮಿಫೈನಲ್ನಲ್ಲಿ ಸೋಲಿಸಿತ್ತು
ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪಂದ್ಯ ಶುರುವಾಗಲಿದೆ. ಸಂಜೆ 6 ಗಂಟೆಗೆ ಟಾಸ್ ನಡೆಯಲಿದೆ.