ಟಾಸ್ ಗೆದ್ದ ಭಾರತ ಮೊದಲು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಸೂಜಿ ಬೇಟ್ಸ್ (5) ರನ್ಗಳಿಸಿ ರನೌಟ್ ಆದರು. ನಾಯಕಿ ಸೋಫಿ ಡಿವೈನ್ 30 ಎಸೆತಗಳಲ್ಲಿ 35 ರನ್ ಸಿಡಿಸಿ ಪೂಜಾಗೆ ವಿಕೆಟ್ ಒಪ್ಪಿಸಿದರು. ಅಮೆಲಿಯ ಕೆರ್ ಮತ್ತು ಏಮಿ ಸೆಟರ್ವೇಟ್ ಉತ್ತಮ ಜೊತೆಯಾಟ ತಂದುಕೊಟ್ಟರು.
ಅಮೆಲಿಯ ಕೆರ್ 50 ರನ್ಗಳಿಸಿ ಔಟಾದರೆ, ಸೆಟರ್ವೇಟ್ 75 ರನ್ಗಳಿಸಿದರು. ಮ್ಯಾಡಿ ಗ್ರೀನ್ (27) ಮತ್ತು ಕೇಟಿ ಮಾರ್ಟಿನ್ (41) ರನ್ಗಳಿಸಿ ಮಿಂಚಿದರು. ಸ್ಲಾಗ್ ಓವರುಗಳಲ್ಲಿ ಹೇಲಿ ಜನ್ಸೆನ್, ಲಿಯ ತಹುಹು, ಜೆಸ್ ಕೆರ್ ವೈಫಲ್ಯ ಕಂಡರು. ನ್ಯೂಜಿಲೆಂಡ್ 50 ಒವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 260 ರನ್ಗಳಿಸಿತು. ಪೂಜಾ ವಸ್ತ್ರಾರ್ಕರ್ 4 ವಿಕೆಟ್ ಪಡೆದು ಮಿಂಚಿದರು.
ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಮೃತಿ ಮಂಧಾನಾ (6), ದೀಪ್ತಿ ಶರ್ಮಾ (5) ರನ್ಗಳಿಸಿ ನಿರ್ಗಮಿಸಿದರು. ಯಸ್ತಿಕಾ ಭಾಟಿಯಾ (28) ಮತ್ತು ನಾಯಕಿ ಮಿಥಾಲಿ ರಾಜ್ (31) ರನ್ ಗಳಿಸಿದರೂ ಅದರಲ್ಲಿ ವೇಗ ಇರಲಿಲ್ಲ. ಮತ್ತೊಂದು ಕಡೆಯಲ್ಲಿ ಹರ್ಮನ್ ಪ್ರಿತ್ ಹೋರಾಟ ಸಂಘಟಿಸಿದರು.
ಈ ಮಧ್ಯೆ ರಿಚ ಘೋಷ್ (0), ಸ್ನೇಹ್ ರಾಣಾ (18), ಪೂಜಾ ವಸ್ತ್ರಾರ್ಕರ್ (6) ರನ್ಗಳಿಸಿ ಔಟಾಗಿದ್ದು ಭಾರತದ ಚೇಸಿಂಗ್ಗೆ ಹೊಡೆತ ನೀಡಿತು. ಹರ್ಮನ್ ಪ್ರಿತ್ 63 ಎಸೆತಗಳಲ್ಲಿ 71 ರನ್ಗಳಿಸಿ ನಿರ್ಗಮಿಸಿದರು. ಕೊನೆಯ ಸರದಿಯ ಆಟಗಾರ್ತಿಯರುಕೂಡ ಹೆಚ್ಚಿನ ಕೊಡುಗೆ ನೀಡಲಿಲ್ಲ. ಭಾರತ 46.4 ಓವರುಗಳಲ್ಲಿ 198 ರನ್ಗಳಿಗೆ ಆಲೌಟ್ ಆಯಿತು. ವಿಶ್ವಕಪ್ನಲ್ಲಿ ಭಾರತ 2 ಪಂದ್ಯಗಳಿಂದ 1 ಗೆಲುವು ಮತ್ತು 1 ಸೋಲು ಕಂಡರೆ, ನ್ಯೂಜಿಲೆಂಡ್ 3ಪಂದ್ಯಗಳಿಂದ 2 ಗೆಲುವು ಮತ್ತು 1 ಸೋಲು ಕಂಡಿದೆ.