ಭಾರತ ಮತ್ತು ಪಾಕಿಸ್ತಾನದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ 2023 ರಲ್ಲಿ ಒಟ್ಟಿಗೆ ಆಡುವುದನ್ನು ಕಾಣಬಹುದು. 2023 ರ ಐಪಿಎಲ್ ನಂತರ ಆಫ್ರಿಕಾ ಮತ್ತು ಏಷ್ಯಾ XI ನಡುವೆ ಸರಣಿಯನ್ನು ಆಡಲಾಗುತ್ತದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಆಟಗಾರರು ಸಹ ಏಷ್ಯಾ ಇಲೆವೆನ್ ನಲ್ಲಿ ಆಡುವುದನ್ನು ಕಾಣಬಹುದು. ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಸರಣಿ ಆಡಿಲ್ಲ. ಹಾಗೆಯೇ ಪಾಕಿಸ್ತಾನಿ ಆಟಗಾರರು ಐಪಿಎಲ್‌ನಲ್ಲಿ ಆಡುವುದಿಲ್ಲ. ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ಆಟಗಾರರು ಒಟ್ಟಿಗೆ ಆಡುವುದನ್ನು ನೋಡುವುದೇ ಅಭಿಮಾನಿಗಳಿಗೆ ವಿಭಿನ್ನ ಅನುಭವ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಸರಣಿ 2012-13ರಲ್ಲಿ ನಡೆದಿತ್ತು. ಅದರ ನಂತರ ಎರಡೂ ತಂಡಗಳು ಐಸಿಸಿ ಈ ವೆಂಟ್‌ಗಳಲ್ಲಿ ಮಾತ್ರ ಆಡುತ್ತಿರುವುದು ಕಂಡುಬಂದಿದೆ.

ಇದಕ್ಕೂ ಮುನ್ನ 2007ರಲ್ಲಿ ಏಷ್ಯಾ ಮತ್ತು ಆಫ್ರಿಕಾ XI ನಡುವೆ 3 ಪಂದ್ಯಗಳ ಸರಣಿ ನಡೆದಿತ್ತು. ಈ ಸರಣಿಯನ್ನು ಏಷ್ಯಾ XI 3-0 ಅಂತರದಿಂದ ಗೆದ್ದುಕೊಂಡಿತ್ತು. ಆ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಆಸಿಫ್, ಯುವರಾಜ್ ಸಿಂಗ್, ಮೊಹಮ್ಮದ್ ಯೂಸುಫ್ ಅವರಂತಹ ಸ್ಟಾರ್ ಆಟಗಾರರು ಒಟ್ಟಿಗೆ ಆಡುತ್ತಿದ್ದರು. ಅದೇ ಸಮಯದಲ್ಲಿ, ಮೊರ್ನೆ ಮೊರ್ಕೆಲ್, ಎಬಿ ಡಿವಿಲಿಯರ್ಸ್ ಮತ್ತು ಸ್ಟೀವ್ ಟಿಕೊಲೊ ಆಫ್ರಿಕಾ XI ಗಾಗಿ ಒಟ್ಟಿಗೆ ಆಡಿದ್ದರು. ಆದರೆ ಅದರ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಸಮಸ್ಯೆಗಳಿಂದ ಸರಣಿಯನ್ನು ಮತ್ತೆ ಆಡಲು ಸಾಧ್ಯವಾಗಲಿಲ್ಲ.

2023ರಲ್ಲಿ ನಡೆಯಲಿರುವ ಸರಣಿಯ ಸ್ವರೂಪ ಟಿ-20 ಯದ್ದಾಗಿರುತ್ತದೆ. ಈ ಮೊದಲು ಈ ಸರಣಿಯ ಸ್ವರೂಪ ODI ಆಗಿತ್ತು. ಏಪ್ರಿಲ್ 2023 ರಲ್ಲಿ ಐಸಿಸಿ ಮಂಡಳಿಯ ಸಭೆಯಲ್ಲಿ ಜಯ್ ಶಾ ಮತ್ತು ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌ನ ಹೊಸ ಅಧ್ಯಕ್ಷ ಸುಮೋದ್ ದಾಮೋದರ್ ನಡುವೆ ಇದನ್ನು ಚರ್ಚಿಸುವ ಸಾಧ್ಯತೆ ಇದೆ.