ಶ್ರೇಯಸ್ ಅಯ್ಯರ್(113*) ಹಾಗೂ ಇಶಾನ್ ಕಿಶನ್(93) ಅದ್ಭುತ ಬ್ಯಾಟಿಂಗ್ ನೆರವಿನಿಂದ ಸೌತ್ ಆಫ್ರಿಕಾ ವಿರುದ್ಧದ 2ನೇ ODI ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಭಾರತದ ಭರ್ಜರಿ ಗೆಲುವಿನೊಂದಿಗೆ 2ನೇ ಏಕದಿನ ಪಂದ್ಯದಲ್ಲಿ ಮೂರು ಹೊಸ ದಾಖಲೆಗಳು ಸೃಷ್ಟಿಯಾಗಿವೆ.7 ಸಿಕ್ಸರ್ ಸಿಡಿಸಿದ ಭಾರತದ 2ನೇ ಯುವ ಆಟಗಾರ
ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ನಿಂದ ಮಿಂಚಿದ ಇಶಾನ್ ಕಿಶನ್, ODIನಲ್ಲಿ 7 ಸಿಕ್ಸರ್ ಸಿಡಿಸಿದ ಭಾರತದ ಎರಡನೇ ಯುವ ಆಟಗಾರ ಎನಿಸಿದರು.
ಅಬ್ಬರದ ಬ್ಯಾಟಿಂಗ್‌ನಿಂದ ಸೌತ್ ಆಫ್ರಿಕಾ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಇಶಾನ್ ಕಿಶನ್, 84 ಬಾಲ್‌ಗಳಲ್ಲಿ 93 ರನ್‌ಗಳಿಸಿ, ಕೇವಲ 7 ರನ್‌ಗಳಿಂದ ಚೊಚ್ಚಲ ಶತಕ ಬಾರಿಸುವ ಅವಕಾಶ ಕಳೆದುಕೊಂಡರು.
ತನ್ನ ತವರಿನ ಅಂಗಳದಲ್ಲಿ ಬ್ಯಾಟ್ ಮೂಲಕ ಆರ್ಭಟಿಸಿದ ಇಶಾನ್ ಕಿಶನ್, 7 ಸಿಕ್ಸರ್‌ಗಳನ್ನ ಬಾರಿಸಿ ಮಿಂಚಿದರು. ಆ ಮೂಲಕ 24 ವರ್ಷದ ಎಡಗೈ ಬ್ಯಾಟ್ಸ್‌ಮನ್, ODIನಲ್ಲಿ 7 ಸಿಕ್ಸರ್ ಬಾರಿಸಿದ ಭಾರತದ 2ನೇ ಯುವ ಆಟಗಾರ ಎನಿಸಿದರು.
ಈ ಹಿಂದೆ 2021ರಲ್ಲಿ ರಿಷಬ್ ಪಂತ್, ತಮ್ಮ 23ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ 40 ಬಾಲ್‌ನಲ್ಲಿ 77 ರನ್‌ಗಳಿಸಿದ್ದ ಸಂದರ್ಭ 7 ಸಿಕ್ಸರ್ ಬಾರಿಸಿದ್ದರು.
ಚೇಸಿಂಗ್‌ನಲ್ಲಿ 300 ODI ಗೆದ್ದ ಮೊದಲ ಟೀಂ ಭಾರತರಾಂಚಿಯಲ್ಲಿ ಅದ್ಭುತ ಚೇಸಿಂಗ್‌ನಿಂದ ಮಿಂಚಿದ ಟೀಂ ಇಂಡಿಯಾ, 7 ವಿಕೆಟ್‌ಗಳ ಗೆಲುವು ಸಾಧಿಸಿತು.
ಭಾರತಕ್ಕೆ ದೊರೆ ಈ ಗೆಲುವು ODIನಲ್ಲಿ ಚೇಸಿಂಗ್‌ನಲ್ಲಿ ಭಾರತಕ್ಕೆ ದೊರೆತ 300ನೇ ಗೆಲುವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್‌ನಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಭಾರತ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ.
ಉಳಿದಂತೆ ಆಸ್ಟ್ರೇಲಿಯಾ(257 ಪಂದ್ಯಗಳು) ಹಾಗೂ ವೆಸ್ಟ್ ಇಂಡೀಸ್(247 ಪಂದ್ಯಗಳು) ನಂತರದ ಸ್ಥಾನದಲ್ಲಿವೆ.2022ರಲ್ಲಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶ್ರೇಯಸ್
ಸೌತ್ ಆಫ್ರಿಕಾ ವಿರುದ್ಧದ 2ನೇ ODIನಲ್ಲಿ ಟೀಂ ಇಂಡಿಯಾ ಗೆಲುವಿನ ಹೀರೋ ಆಗಿ ಮಿಂಚಿರುವ ಶ್ರೇಯಸ್ ಅಯ್ಯರ್, ಪ್ರಸಕ್ತ ವರ್ಷದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಅಯ್ಯರ್, ಹಲವು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಶ್ರೇಯಸ್ ಅಯ್ಯರ್, ಐದು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇವರ ನಂತರದಲ್ಲಿ ಸೂರ್ಯಕುಮಾರ್ ಯಾದವ್, 2022ರಲ್ಲಿ ಒಟ್ಟು 4 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
IND v SA 2022