ಅತಿಥೇಯ ಐರ್ಲೆಂಡ್ ಹಾಗೂ ಪ್ರವಾಸಿ ಭಾರತ ವಿರುದ್ಧದ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಐರ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ, ಎದುರಾಳಿ ತಂಡದ ವಿರುದ್ಧದ ಅಜೇಯ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿದೆ.
ಉಭಯ ತಂಡಗಳ ನಡುವಿನ ಎರಡು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ಡುಬ್ಲಿನ್ನಲ್ಲಿ ಆರಂಭಗೊಳ್ಳಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ, ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಯುವ ಆಟಗಾರರ ಪಡೆಯೊಂದಿಗೆ ಈ ಪ್ರವಾಸ ಕೈಗೊಂಡಿದೆ. ಐರ್ಲೆಂಡ್ ವಿರುದ್ಧ ಈವರೆಗೂ ಗೆಲುವಿನ ನಾಗಾಲೋಟ ಮುಂದುವರಿಸಿರುವ ಟೀಂ ಇಂಡಿಯಾ, ಜಯದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಹಾಗೂ ಐರ್ಲೆಂಡ್ ಈವರೆಗೂ ಮೂರು ಏಕದಿನ ಮತ್ತು ಮೂರು ಟಿ20 ಸೇರಿದಂತೆ ಒಟ್ಟು ಆರು ಬಾರಿ ಮುಖಾಮುಖಿಯಾಗಿವೆ. ಈ ಎಲ್ಲಾ ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದ್ದು, ಆ ಮೂಲಕ ಐರ್ಲೆಂಡ್ ವಿರುದ್ಧ 6-0 ಗೆಲುವಿನ ಪ್ರಾಬಲ್ಯ ಹೊಂದಿದೆ. ಹೀಗಾಗಿ ಪ್ರಸಕ್ತ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನ ಫೇವರೆಟ್ ಎನಿಸಿದ್ದು, ಪ್ರವಾಸಿ ತಂಡಕ್ಕೆ ಟಾಂಗ್ ನೀಡಲು ಐರ್ಲೆಂಡ್ ಸಹ ಭರ್ಜರಿ ತಯಾರಿ ಮಾಡಿಕೊಂಡಿದೆ.
ಐರ್ಲೆಂಡ್ v ಭಾರತ – ಮುಖಾಮುಖಿ
(ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ)
ವರ್ಷ ಮಾದರಿ ಫಲಿತಾಂಶ
2007 ODI ಭಾರತಕ್ಕೆ 9 ವಿಕೆಟ್ ಜಯ
2009 T20I ಭಾರತಕ್ಕೆ 8 ವಿಕೆಟ್ ಜಯ
2011 ODI ಭಾರತಕ್ಕೆ 5 ವಿಕೆಟ್ ಜಯ
2015 ODI ಭಾರತಕ್ಕೆ 8 ವಿಕೆಟ್ ಜಯ
2018 T20I ಭಾರತಕ್ಕೆ 76 ರನ್ಗಳ ಜಯ
2018 T20I ಭಾರತಕ್ಕೆ 143 ರನ್ಗಳ ಜಯ