ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ, ಐಸಿಸಿ ಏಕದಿನ ವಿಶ್ವಕಪ್ಗೆ ಗ್ರ್ಯಾಂಡ್ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ಈ ಇಬ್ಬರು ಸ್ಟಾರ್ ಆಟಗಾರರು ಅಂತಿಮ ಪಂದ್ಯದ ಮೂಲಕ ತಂಡಕ್ಕೆ ಕಮ್ಬ್ಯಾಕ್ ಮಾಡಿದರು. ಹೀಗಾಗಿ ಇವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಫ್ಯಾನ್ಸ್ಗಳ ನಿರೀಕ್ಷೆಗೆ ತಕ್ಕಂತೆ ಆಟವಾಡಿದ ಇಬ್ಬರು ದಿಗ್ಗಜ ಬ್ಯಾಟರ್ಸ್, ಆಕರ್ಷಕ ಅರ್ಧಶತಕ ಬಾರಿಸಿ ಮಿಂಚುವ ಮೂಲಕ ವಿಶ್ವಕಪ್ನಲ್ಲಿ ಅಬ್ಬರಿಸಲು ತಾವು ಸಜ್ಜಾಗಿರುವುದಾಗಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ “ಹಿಟ್ ಮ್ಯಾನ್” ರೋಹಿತ್ ಶರ್ಮಾ, ಎಂದಿನಂತೆ ತಮ್ಮ ಬಿರುಸಿನ ಆಟದಿಂದ ಗಮನ ಸೆಳೆದರು. ಇನ್ನಿಂಗ್ಸ್ನ ಆರಂಭದಿಂದಲೇ ಆಸೀಸ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ ರೋಹಿತ್, 57 ಬಾಲ್ಗಳಲ್ಲಿ 5 ಬೌಂಡರಿ, 6 ಸಿಕ್ಸ್ ಮೂಲಕ 81 ರನ್ಗಳಿಸಿದರೆ. ಎಂದಿನಂತೆ 1ನೇ ಕ್ರಮಾಂಕದಲ್ಲಿ ಬಂದ “ಚೇಸ್ ಮಾಸ್ಟರ್” ವಿರಾಟ್ ಕೊಹ್ಲಿ, 61 ಬಾಲ್ಗಳಲ್ಲಿ 5 ಬೌಂಡರಿ, 1 ಸಿಕ್ಸ್ ಮೂಲಕ 56 ರನ್ಗಳಿಸಿ ಮಿಂಚಿದರು. ಈ ಇಬ್ಬರು ಬ್ಯಾಟರ್ಗಳು 2ನೇ ವಿಕೆಟ್ಗೆ 70 ರನ್ಗಳ ಉತ್ತಮ ಜೊತೆಯಾಟವಾಡಿದರು.
ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯ ವಿಶ್ವಕಪ್ಗೂ ಮುನ್ನ ನಡೆಯುತ್ತಿರುವ ಕೊನೆ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ನಿಂದ ಅಬ್ಬರಿಸಿರುವ ರೋಹಿತ್ ಹಾಗೂ ಕೊಹ್ಲಿ, ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲೂ ಇದೇ ಪ್ರದರ್ಶನ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದಾರೆ.
IND v AUS, Team India, Virat Kohli, Rohit Sharma, Australia