ಐಪಿಎಲ್ 2022ರಲ್ಲಿ ವೇಗದ ಬೌಲರ್ಗಳು ಮಿಂಚುತ್ತಿದ್ದಾರೆ. ಮೆಗಾ ಹರಾಜಿನಲ್ಲಿಯೂ ಸಹ, ಅನೇಕ ವೇಗದ ಬೌಲರ್ಗಳನ್ನು ತಂಡಗಳು ಭಾರಿ ಮೊತ್ತ ನೀಡಿ ಖರೀದಿಸಿವೆ. ಈಗ ಸೀಸನ್ ನಲ್ಲೂ ವೇಗಿಗಳ ಹಾವಳಿ ಕಂಡು ಬರುತ್ತಿದೆ. ವೇಗದ ಬೌಲರ್ ಒಬ್ಬರು ಈ ಋತುವಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಐಪಿಎಲ್ 2022 ರಲ್ಲಿ ಹೈದರಾಬಾದ್ ವೇಗದ ಬೌಲರ್ ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಈ ಋತುವಿನ IPL ಇತಿಹಾಸದಲ್ಲಿ ವೇಗವಾಗಿ ಚೆಂಡನ್ನು ಎಸೆದ ಎರಡನೇ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ.
ಉಮ್ರಾನ್ ವೇಗವನ್ನು ಕಂಡು ಪಾಕಿಸ್ತಾನದ ಮಾಜಿ ದಿಗ್ಗಜ ಬೌಲರ್ ಶೋಯೆಬ್ ಅಖ್ತರ್ ತಮ್ಮ 20 ವರ್ಷಗಳ ಹಳೆಯ ಅಂತಾರಾಷ್ಟ್ರೀಯ ದಾಖಲೆ (161.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ ವಿಶ್ವದಾಖಲೆ) ಮುರಿಯಬಹುದು ಎಂಬ ಭಯದಲ್ಲಿದ್ದಾರೆ. ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದ ಚೆಂಡು ಎಸೆದ ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ, ಕ್ರೀಡಾ ವೆಬ್ಸೈಟ್ ನೀಡಿದ ಸಂದರ್ಶನದಲ್ಲಿ, ಅಖ್ತರ್ ನನ್ನ ದಾಖಲೆಯನ್ನು ಮುರಿಯುವ ನಿಟ್ಟಿನಲ್ಲಿ ಉಮ್ರಾನ್ ಅವರ ಮೂಳೆ ಮುರಿಯಬಾರದು ಎಂದು ಹೇಳಿದ್ದಾರೆ.
‘ನಾನು ಉಮ್ರಾನ್ ಅವರ ವೃತ್ತಿಜೀವನವನ್ನು ಬಹಳ ದೀರ್ಘವಾಗಿ ನೋಡಲು ಬಯಸುತ್ತೇನೆ. ನನ್ನ ದಾಖಲೆ 20 ವರ್ಷಗಳನ್ನು ಪೂರೈಸಿದೆ ಎಂದು ಇತ್ತೀಚೆಗೆ ಒಬ್ಬರು ನನ್ನನ್ನು ಅಭಿನಂದಿಸಿದರು. ಇಲ್ಲಿಯವರೆಗೆ ಯಾರೂ ಅದನ್ನು ಮುರಿಯಲು ಸಾಧ್ಯವಾಗಲಿಲ್ಲ. ಈ ದಾಖಲೆಯನ್ನು ಮುರಿಯಬೇಕು ಎಂಬ ಆಸೆ ಇದೆ. ಉಮ್ರಾನ್ ನನ್ನ ದಾಖಲೆಯನ್ನು ಮುರಿದರೆ ನನಗೆ ಸಂತೋಷವಾಗುತ್ತದೆ. ಮಲಿಕ ದೈಹಿಕ ಕ್ಷಮತೆಯತ್ತ ಕಸರತ್ತು ನಡೆಸಬೇಕು. ಅವರು ಫಿಟ್ ಆಗಿರಲಿ ಎಂಬುದೇ ನನ್ನ ಪ್ರಾರ್ಥನೆ” ಎಂದು ಶೋಯೆಬ್ ಅಕ್ತರ್ ಹೇಳಿದ್ದಾರೆ.
T-20 ವಿಶ್ವಕಪ್ನಲ್ಲಿ ಉಮ್ರಾನ್ನ ಆಯ್ಕೆಯ ಕುರಿತು ಮಾತನಾಡಿದ ಅಖ್ತರ್, “ಅವರಿಗೆ ಸ್ಥಾನ ನೀಡಬೇಕು. ಅವರು ಆಡುವುದನ್ನು ನಾನು ನೋಡಲು ಬಯಸುತ್ತೇನೆ. 150 (ವೇಗ) ಗಡಿಯಲ್ಲಿ ಬೌಲಿಂಗ್ ಮಾಡುವ ಕೆಲವೇ ಬೌಲರ್ಗಳು ಉಳಿದಿದ್ದಾರೆ. ಉಮ್ರಾನ್ ಸ್ಥಿರವಾಗಿ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. 150 ಕ್ಕಿಂತ ಹೆಚ್ಚು.” ಇದನ್ನು ನೋಡಿ ಸಂತೋಷವಾಯಿತು. ಹೊಸ ಆಟಗಾರರು ಈ ವೇಗದಲ್ಲಿ ಬೌಲಿಂಗ್ ಮಾಡುವುದನ್ನು ನೋಡಲು ನಾನು ಬಯಸಿದ್ದೆ” ಎಂದು ತಿಳಿಸಿದ್ದಾರೆ.