ICC Women’s World cup 2022 – ಸೂಪರ್ ಸಂಡೇಯ ಸೂಪರ್ ಮ್ಯಾಚ್.. ಇಂಡೋ – ಪಾಕ್ ನಾರಿಯರ ಕದನ..!
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಮಾರ್ಚ್ 4ರಿಂದ ನ್ಯೂಜಿಲೆಂಡ್ ನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ವೆಸ್ಟ್ ತಂಡವನ್ನು ಎದುರಿಸಲಿದೆ.
ಭಾರತ ಮಹಿಳಾ ತಂಡ ಮಾರ್ಚ್ 6ರಿಂದ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯ ಸಾಕಷ್ಟು ರೋಚಕತೆಯನ್ನು ಪಡೆದುಕೊಳ್ಳಲಿದೆ. ಅಲ್ಲದೆ ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯವಾಗಲಿದೆ. India vs Pakistan, Women’s World Cup 2022: Head-to-head
ಭಾರತ – ಪಾಕಿಸ್ತಾನ ಬಲಾಬಲ
ಭಾರತ ಮಹಿಳಾ ತಂಡ ಮತ್ತು ಪಾಕಿಸ್ತಾನ ಮಹಿಳಾ ತಂಡ ಇಲ್ಲಿಯವರೆಗೆ ಎರಡು ಬಾರಿ ಮುಖಾಮುಖಿಯಾಗಿವೆ. ಈ ಎರಡು ಪಂದ್ಯಗಳಲ್ಲೂ ಭಾರತ ಮಹಿಳಾ ತಂಡ ಗೆಲುವಿನ ನಗೆ ಬೀರಿದೆ.
ಗರಿಷ್ಠ ಸ್ಕೋರ್
ಭಾರತ ಮತ್ತು ಪಾಕಿಸ್ತಾನ ನಡುವೆ ಎರಡು ಪಂದ್ಯಗಳು ನಡೆದಿವೆ. 2017ರ ವಿಶ್ವಕಪ್ ನಲ್ಲಿ ಭಾರತ ತಂಡ 9 ವಿಕೆಟ್ ಗೆ 169 ರನ್ ಗಳಿಸಿತ್ತು.
ಕನಿಷ್ಠ ಸ್ಕೋರ್
2009ರಲ್ಲಿ ಪಾಕಿಸ್ತಾನ ಮಹಿಳಾ ತಂಡ 57 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಕನಿಷ್ಠ ಸ್ಕೋರ್ ಆಗಿದೆ.
ಬೆಸ್ಟ್ ಬೌಲಿಂಗ್
2017ರ ವಿಶ್ವಕಪ್ ನಲ್ಲಿ ಭಾರತದ ಏಕ್ತಾ ಬಿಸ್ಟಾ ಅವರು 18 ರನ್ ಗೆ ಐದು ವಿಕೆಟ್ ಉರುಳಿಸಿದ್ದರು. ಇದು ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ಗರಿಷ್ಠ ವೈಯಕ್ತಿಕ ರನ್
2017ರಲ್ಲಿ ಭಾರತದ ಪೂನಮ್ ರಾವತ್ ಅವರು 47 ರನ್ ದಾಖಲಿಸಿದ್ದರು. ಇದು ಉಭಯ ತಂಡಗಳ ಆಟಗಾರ್ತಿಯರಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ರನ್.