ಅಬುಧಾಬಿಯಲ್ಲಿ ಆಸ್ಟ್ರೇಲಿಯಾಕ್ಕೆ ಸೆಮಿಫೈನಲ್ಗೇರಲು ಗೆಲುವು ಅನಿವಾರ್ಯ.ಆದ್ರೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ವೆಸ್ಟ್ಇಂಡೀಸ್ ಬೇರೆಯದ್ದೇ ಲೆಕ್ಕಾಚಾರದಲ್ಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ವಿಂಡೀಸ್ ಕಟ್ಟ ಕಡೆಯ ಪಂದ್ಯದಲ್ಲಿ ಗೆದ್ದು ಆಸ್ಟ್ರೇಲಿಯಾದ ವಿಶ್ವಕಪ್ ಹಾದಿ ಮುಚ್ಚಿಬಿಡುವ ಯೋಜನೆ ಮಾಡುತ್ತಿದೆ.
ಆಸ್ಟ್ರೇಲಿಯಾದ ಬ್ಯಾಟಿಂಗ್ ಸ್ಪೋಟಕ ಶಕ್ತಿಯಾಗಿ ಬದಲಾಗಿದೆ. ಆ್ಯರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಲಯಕ್ಕೆ ಮರಳಿರುವುದು ಕಪ್ ಗೆಲ್ಲುವ ಆಸೆ ಹೆಚ್ಚಿಸಿದೆ. ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟ್ ಇನ್ನೂ ಹೆಚ್ಚು ಸದ್ದು ಮಾಡಿಲ್ಲ. ಸ್ಮಿತ್, ಸ್ಟೋಯ್ನಿಸ್ ಮತ್ತು ವೇಡ್ ಅಗತ್ಯ ಬಿದ್ದರೆ ಸ್ಪೋಟಕ ಆಟ ಆಡುವುದು ಗ್ಯಾರೆಂಟಿ. ಬೌಲಿಂಗ್ ಲೈನ್ ಅಪ್ ಬಗ್ಗೆಯಂತೂ ತಲೆ ಕೆಡಿಸಿಕೊಳ್ಳುವ ಹಾಗಿಲ್ಲ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್ವುಡ್ ಎಲ್ಲಾ ಲೆಕ್ಕಾಚಾರ ಬದಲು ಮಾಡಿದ್ದಾರೆ. ಆ್ಯಡಂ ಜಂಪಾ ಕೂಡ ವಿಕೆಟ್ ಬೇಟೆಯಲ್ಲಿದ್ದಾರೆ. ಸ್ಟೋಯ್ನಿಸ್ ಮತ್ತು ಮ್ಯಾಕ್ಸ್ವೆಲ್ ಪಾರ್ಟ್ ಟೈಮ್ ಬೌಲಿಂಗ್ ಕೂಡ ಪರಿಣಾಮಕಾರಿ ಆಗಿದೆ.
ಹಾಲಿ ಚಾಂಪಿಯನ್ ವೆಸ್ಟ್ಇಂಡೀಸ್ಗೆ ಟೂರ್ನಿಯಲ್ಲಿ ಏನೂ ಉಳಿದಿಲ್ಲ. ಆದರೆ ಆಸ್ಟ್ರೇಲಿಯಾದ ಭವಿಷ್ಯ ಹಾಳುವ ಮಾಡುವ ಅವಕಾಶವಿದೆ. ವಿಂಡೀಸ್ ಬ್ಯಾಟಿಂಗ್ ಬಗ್ಗೆ ಡೌಟ್ ಇಲ್ಲದೇ ಇದ್ದರೂ ರನ್ ಗಳಿಸದೇ ಇರುವುದು ವಿಚಿತ್ರ. ಬೌಲಿಂಗ್ನಲ್ಲಿ ಅನುಭವದ ಕೊರತೆ ಇರುವುದರಿಂದ ವಿಕೆಟ್ಗಳು ಬಂದಿಲ್ಲ. ಒಟ್ಟಿನಲ್ಲಿ ಅಬುದಾಭಿಯಲ್ಲಿ ಆಸ್ಟ್ರೇಲಿಯಾಕ್ಕೆ ಗೆಲುವು ಅನಿವಾರ್ಯವಾಗಿದ್ದರೆ, ವೆಸ್ಟ್ ಎಂಜಾಯ್ ಮಾಡಲು ಪಂದ್ಯ ಆಡುತ್ತಿದೆ.