ಏಕದಿನ ವಿಶ್ವಕಪ್-2023 ಟೂರ್ನಿ ನಾಳೆ(ಅ.5) ಆರಂಭವಾಗುವ ಬೆನ್ನಲ್ಲೇ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನ ಅಂತಿಮ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ನಂ.1 ಸ್ಥಾನಕ್ಕೆ ಕೆಲವೇ ಪಾಯಿಂಟ್ಸ್ ಹಿಂದುಳಿದಿದ್ದಾರೆ.
ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಜ಼ಂ, ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಇವರಿಗೆ ಅತ್ಯಂತ ಸನಿಹದಲ್ಲಿರುವ ಗಿಲ್, ನಂ.1 ಸ್ಥಾನದಿಂದ ಕೇವಲ 18 ಪಾಯಿಂಟ್ಸ್ಗಳ ಅಂತರದಲ್ಲಿದ್ದಾರೆ. ಇದೇ ಆತ್ಮವಿಶ್ವಾಸದೊಂದಿಗೆ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ಗೆ ಎಂಟ್ರಿಕೊಡುತ್ತಿರುವ ಗಿಲ್, ತವರಿನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಸರ್ವಶ್ರೇಷ್ಠ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್, ವಿಶ್ವ ಕ್ರಿಕೆಟ್ನ ಬೆಸ್ಟ್ ಬ್ಯಾಟರ್ ಆಗಿ ಮಿಂಚಿದ್ದಾರೆ. ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಆಡುತ್ತಿರುವ ಆರಂಭಿಕ ಬ್ಯಾಟರ್, ಮಹತ್ವದ ಟೂರ್ನಿಯಲ್ಲಿ ಇದೇ ಪ್ರದರ್ಶನದ ಮೂಲಕ ತಂಡಕ್ಕೆ ಯಶಸ್ಸು ತಂದುಕೊಡುವ ಆತ್ಮವಿಶ್ವಾಸವಿದ್ದು, ಗಿಲ್ ಅವರ ಪ್ರದರ್ಶನದ ಮೇಲೆ ಭಾರೀ ನಿರೀಕ್ಷೆ ಸಹ ಹೊಂದಲಾಗಿದೆ.
ಮತ್ತೊಂದೆಡೆ ವಿಶ್ವಕಪ್ನ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಬಾಬರ್ ಆಜ಼ಂ, ಮಹತ್ವದ ಪಂದ್ಯಾವಳಿಯಲ್ಲಿ ಇದೇ ಫಾರ್ಮ್ ಮುಂದುವರಿಸುವ ನಿರೀಕ್ಷೆ ಹೊಂದಿದ್ದಾರೆ. ಹೀಗಾಗಿ ಈ ಇಬ್ಬರು ಸ್ಟಾರ್ ಬ್ಯಾಟರ್ಗಳು ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ICC Rankings, Shubman Gill, Team India, ODI World Cup