ಪ್ರಸಕ್ತ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರದರ್ಶನ ನೀರಸವಾಗಿದೆ. ಆಡಿರುವ 12 ಪದ್ಯಗಳಲ್ಲಿ ಕೆಕೆಆರ್ ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. ತಂಡದಲ್ಲಿ ಸ್ಟಾರ್ ಆಟಗಾರರ ಗೊಂಚಲೇ ಇದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕೋಲ್ಕತ್ತಾ ಪ್ರತಿ ನಿಧಿಸುವ ಆಟಗಾರರ ಪತ್ನಿಯರ ಬಗ್ಗೆ ಇಲ್ಲಿದೆ ಮಾಹಿತಿ.
ನ್ಯೂಜಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ ಅವರು ಮೇಕಪ್ ಕಲಾವಿದೆ ಮತ್ತು ‘ದಿ ಸ್ಯಾಂಪಲ್ ರೂಮ್’ ಹೆಸರಿನ ಸಲೂನ್‌ನಲ್ಲಿ ಕೆಲಸ ಮಾಡುವ ಬ್ರಿಯಾ ಫಾಹಿ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ 2011 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ನಂತರ 2022 ರಲ್ಲಿ, ಅವರು ವಿವಾಹವಾದರು.
ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಅವರು ವೃತ್ತಿಯಲ್ಲಿ ಟೆನಿಸ್ ಆಟಗಾರ್ತಿ ಸಾರಾ ಕೆಂಟ್ಲಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರು ಟೆನಿಸ್‌ನಲ್ಲಿ ಕ್ವೀನ್ಸ್ ಕ್ಲಬ್ ಅನ್ನು ಪ್ರತಿನಿಧಿಸುತ್ತಾರೆ ಮತ್ತು ಕೆಂಟ್‌ನ ಅಗ್ರ ಮೂರು ಆಟಗಾರರಲ್ಲಿ ಇವರೂ ಒಬ್ಬರು.
ಪ್ಯಾಟ್ ಕಮ್ಮಿನ್ಸ್ ಬೆಕಿ ಬೋಸ್ಟನ್ ಜೊತೆ ಸಂಬಂಧ ಹೊಂದಿದ್ದಾರೆ. ಬೆಕಿ ಇಂಟೀರಿಯರ್ ಡಿಸೈನರ್ ಮತ್ತು ಆನ್‌ಲೈನ್ ಸ್ಟೋರ್ ಅನ್ನು ನಡೆಸುತ್ತಿದ್ದಾರೆ. ಬೆಕಿ ಮತ್ತು ಕಮ್ಮಿನ್ಸ್ 2014 ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅಕ್ಟೋಬರ್ 2021 ರಲ್ಲಿ ಪೋಷಕರಾದರು.
ಭಾರತೀಯ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರ ಜೀವನ ಸಂಗಾತಿ ಸಾಚಿ. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್, ಅವರು ಸಾಚಿ ಮತ್ತು ನವನೀತ್ ಡಿಸೈನ್ ಸ್ಟುಡಿಯೊದ ಮಾಲೀಕರೂ ಆಗಿದ್ದಾರೆ. ಸಾಚಿ, ನಿತೀಶ್ ಅವರ ಸ್ನೇಹಿತನ ಸಹೋದರಿ ಮತ್ತು ಅವರು 2016 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಇವರು 2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಒಂದು ವರ್ಷದ ನಂತರ ಅವರು ವಿವಾಹವಾದರು.
ಕೆರಿಬಿಯನ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರು ಫ್ಯಾಶನ್ ಮಾಡೆಲ್ ಮತ್ತು ಬ್ಲಾಗರ್ ಜಾಸಿಮ್ ಲಾರಾ ಅವರನ್ನು ವಿವಾಹವಾಗಿದ್ದಾರೆ. ಲಾರಾ ಫ್ಲೋರಿಡಾದವಳು ಮತ್ತು ರಸ್ಸೆಲ್ ಜೊತೆ 2011 ರಿಂದ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 3 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರೂ 2014 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ನಂತರ ಎರಡು ವರ್ಷಗಳ ನಂತರ ವಿವಾಹವಾದರು.
ಕೆಕೆಆರ್‌ನ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಅವರು ಅಂಜೆಲಿಯಾ ಅವರನ್ನು ವಿವಾಹವಾಗಿದ್ದಾರೆ. ನರೇನ್ ಅವರ ಮೊದಲ ಮದುವೆ ಭಾರತೀಯ ಮೂಲದ ನಂದಿತಾ ಕುಮಾರ್ ಅವರ ಜೊತೆ ಆಗಿತ್ತು. ನರೇನ್ ಮತ್ತು ನಂದಿತಾ 2013 ರಲ್ಲಿ ವಿವಾಹವಾದರು ಮತ್ತು ಕೆಲವು ವರ್ಷಗಳ ನಂತರ ಅವರು ಪರಸ್ಪರ ಬೇರ್ಪಟ್ಟರು.