ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 86ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ, ಬೆಂಗಾಲ್ ವಾರಿಯರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿತು.
ಗುಜರಾತ್ ಜೈಂಟ್ಸ್ ತಂಡದ ಆಟಗಾರರು 34 ಅಂಕ ಗಳಿಸಿದರೆ, ಬೆಂಗಾಲ್ ವಾರಿಯರ್ಸ್ ತಂಡದ ಆಟಗಾರರು 25 ಅಂಕ ಸೇರಿಸಿದರು. ವಿರಾಮದ ವೇಳೆಗೆ ಗುಜರಾತ್ ಜೈಂಟ್ಸ್ ಒಂದು (13-12) ಅಂಕ ಮುನ್ನಡೆ ಸಾಧಿಸಿತ್ತು.
ಗುಜರಾತ್ ಜೈಂಟ್ಸ್ ತಂಡದ ಪರ ರೈಡರ್ ಅಜಯ್ ಕುಮಾರ್ ಒಂಬತ್ತು, ಪ್ರದೀಪ್ ಕುಮಾರ್ ಏಳು, ರಾಕೇಶ್ ನಾಲ್ಕು, ಆಲ್‌ರೌಂಡರ್ ಹಾದಿ ನಾಲ್ಕು, ಡಿಫೆಂಡರ್ ಪರವೇಶ್ ಬೈಸ್ ವಾಲ್ ಮೂರು, ಸುನೀಲ್ ಕುಮಾರ್ ಎರಡು, ರವೀಂದ್ರ ಪಾಹಲ್ ಹಾಗೂ ಗಿರೀಶ್ ಮಾರುತಿ ತಲಾ ಒಂದು ಅಂಕ ಗಳಿಸಿದರು.
ಪರಾಜಿತ ಬೆಂಗಾಲ್ ವಾರಿಯರ್ಸ್ ಪರ ರೈಡರ್ ಮಣಿಂದರ್ ಸಿಂಗ್ ಒಂಬತ್ತು, ಆಲ್‌ರೌಂಡರ್ ರಾಣಾ ಸಿಂಗ್ ಆರು, ಮೊಹಮ್ಮದ್ ಐದು, ರೈಡರ್ ರವೀಂದ್ರ ನಾಲ್ಕು, ಹಾಗೂ ಡಿಫೆಂಡರ್ ಅಮಿತ್ ನರ್ವಾಲ್ ಒಂದು ಅಂಕ ಗಳಿಸಿದರು.
ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್, ಈ ವರೆಗೆ ಆಡಿರುವ ಹದಿನಾಲ್ಕು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಜಯ, ಆರು ಪಂದ್ಯಗಳಲ್ಲಿ ಸೋಲು ಹಾಗೂ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಒಟ್ಟು 38 ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಪರಾಜಿತ ಬೆಂಗಾಲ್ ವಾರಿಯರ್ಸ್ ತಂಡ, ಈ ವರೆಗೆ ಆಡಿರುವ ಹದಿನೈದು ಪಂದ್ಯಗಳ ಪೈಕಿ, ಏಳು ಪಂದ್ಯಗಳಲ್ಲಿ ಜಯ, ಏಳು ಪಂದ್ಯಗಳಲ್ಲಿ ಸೋಲು ಹಾಗೂ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಒಟ್ಟು ೪೧ ಅಂಕಗಳೊಂದಿಗೆ ಸಧ್ಯ ಆರನೇ ಸ್ಥಾನದಲ್ಲಿದೆ.