Fifa Pre-Quarterfinal: ಅರ್ಜೆಂಟೀನಾ ಜಯದಲ್ಲಿ ಮಿಂಚಿದ ಮೆಸ್ಸಿ
ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ನ ಎರಡನೇ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ 2-1 ಗೋಲುಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಅರ್ಜೆಂಟೀನಾ 10ನೇ ಬಾರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮ 1000ನೇ ಪಂದ್ಯದಲ್ಲಿ ಅದ್ಭುತ ಒಂದು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯದ 35ನೇ ನಿಮಿಷದಲ್ಲಿ ಮೆಸ್ಸಿ ಅದ್ಭುತ ಗೋಲು ಬಾರಿಸಿ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಮೆಸ್ಸಿ ಅವರ ವೃತ್ತಿಜೀವನದ 789 ನೇ ಗೋಲು ಇದಾಗಿದೆ. ಪಂದ್ಯದ 57ನೇ ನಿಮಿಷದಲ್ಲಿ ಜುನಿಯನ್ ಅಲ್ವಾರೆಜ್ ಗೋಲು ಬಾರಿಸಿ ತಂಡಕ್ಕೆ 2-0 ಮುನ್ನಡೆಗೆ ತಂದರು.
ಮೆಸ್ಸಿ ವಿಶ್ವಕಪ್‌ನಲ್ಲಿ ಗೋಲು ಗಳಿಸುವ ಲೆಕ್ಕಾಚಾರದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿದ್ದಾರೆ. ಇದು ವಿಶ್ವಕಪ್‌ನಲ್ಲಿ ಮೆಸ್ಸಿ ಅವರ 9 ನೇ ಗೋಲು. ಅಲ್ಲದೆ ಈ ಪಂದ್ಯಾವಳಿಯಲ್ಲಿ ಅವರ ಮೂರನೇ ಗೋಲು. ರೊನಾಲ್ಡೊ ವಿಶ್ವಕಪ್‌ನಲ್ಲಿ ಇದುವರೆಗೆ ಎಂಟು ಗೋಲು ಗಳಿಸಿದ್ದಾರೆ. ಮೆಸ್ಸಿ ಮೊದಲ ಬಾರಿಗೆ ವಿಶ್ವಕಪ್‌ನ ನಾಕೌಟ್‌ನಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

77ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಮೊದಲ ಗೋಲು ಗಳಿಸಿತು. ಅರ್ಜೆಂಟೀನಾದ ಫರ್ನಾಂಡಿಸ್ ಉಡುಗೊರೆ ಗೋಲು ನೀಡಿದರು. ಇದಾದ ಬಳಿಕ ಇಂಜುರಿ ಟೈಮ್‌ನಲ್ಲಿ ಆಸ್ಟ್ರೇಲಿಯಾಗೆ ಅವಕಾಶ ಸಿಕ್ಕಿತು ಆದರೆ ಅರ್ಜೆಂಟೀನಾ ಗೋಲ್‌ಕೀಪರ್ ಆಮಿ ಮಾರ್ಟಿನೆಜ್ ಅದನ್ನು ತಡೆದು ತಂಡಕ್ಕೆ ಜಯ ತಂದುಕೊಟ್ಟರು.
ಎಂಟು ವರ್ಷಗಳ ನಂತರ ಅರ್ಜೆಂಟೀನಾ ಕ್ವಾರ್ಟರ್ ಫೈನಲ್‌ಗೆ
ಎಂಟು ವರ್ಷಗಳ ನಂತರ ಅರ್ಜೆಂಟೀನಾ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದೆ. ಇದಕ್ಕೂ ಮುನ್ನ 2014ರಲ್ಲಿ ಅರ್ಜೆಂಟೀನಾ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಆ ಸಮಯದಲ್ಲಿಯೂ ಲಿಯೋನೆಲ್ ಮೆಸ್ಸಿ ತಂಡದ ನಾಯಕರಾಗಿದ್ದರು. ಅರ್ಜೆಂಟೀನಾ ಬೆಲ್ಜಿಯಂ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಅದೇ ಸಮಯದಲ್ಲಿ, ನೆದರ್ಲ್ಯಾಂಡ್ಸ್ ಸೆಮಿಫೈನಲ್ನಲ್ಲಿ ಪೆನಾಲ್ಟಿ ಶೂಟ್-ಔಟ್ನಲ್ಲಿ ಗೆದ್ದಿತು. ಫೈನಲ್‌ನಲ್ಲಿ ಜರ್ಮನಿಯಿಂದ ಸೋಲನ್ನು ಎದುರಿಸಬೇಕಾಯಿತು.
Fifa, Pre-Quarterfinal, Argentina, Australia, Football, World Cup