FIFA: ಹಾಲಿ ಚಾಂಪಿಯನ್ ಗೆಲುವಿನ ಆರಂಭ
ಹಾಲಿ ಚಾಂಪಿಯನ್ ಫ್ರಾನ್ಸ್ 2022 ರ ಫಿಫಾ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಫ್ರಾನ್ಸ್ ಏಕಪಕ್ಷೀಯವಾಗಿ 4-1 ಗೋಲುಗಳಿಂದ ಸೋಲಿಸಿದೆ.
ಡಿ ಗುಂಪಿನ ಈ ಪಂದ್ಯದಲ್ಲಿ ಫ್ರಾನ್ಸ್ಗೆ ಎರಡು ಪ್ರಮುಖ ಗೋಲುಗಳನ್ನು ಗಳಿಸಿದ ಒಲಿವಿಯರ್ ಗಿರೌಡ್ ಫ್ರಾನ್ಸ್ನ ಗೆಲುವಿನ ಹೀರೋ ಆಗಿ ಮಿಂಚಿದರು. ಫ್ರಾನ್ಸ್ಗೆ ಎರಡು ಪ್ರಮುಖ ಗೋಲುಗಳನ್ನು ಗಳಿಸಿದ ಅವರು ಥಿಯೆರಿ ಹೆನ್ರಿ ಅವರ 51 ಗೋಲುಗಳನ್ನು ಸಮಗೊಳಿಸಿದರು. ಇದು ಫ್ರಾನ್ಸ್ನ ಇದುವರೆಗೆ ಹೆಚ್ಚು ಗೋಲ್ ಆಗಿದೆ
ಫ್ರಾನ್ಸ್ ಪರ 27ನೇ ನಿಮಿಷದಲ್ಲಿ ಅಡ್ರಿಯನ್ ರಾಬಿಯೊಟ್ ಮೊದಲ ಗೋಲು ದಾಖಲಿಸಿದರೆ, 32ನೇ ನಿಮಿಷದಲ್ಲಿ ಒಲಿವಿಯರ್ ಗಿರೋಡ್ ಎರಡನೇ ಗೋಲು ದಾಖಲಿಸಿದರು. ಆದಾಗ್ಯೂ, ಆಸ್ಟ್ರೇಲಿಯಾ 9ನೇ ನಿಮಿಷದಲ್ಲಿ ಗ್ರೆಗ್ ಗುಡ್ವಿನ್ ಗೋಲು ಗಳಿಸುವ ಮೂಲಕ ಫ್ರಾನ್ಸ್ ತಂಡವನ್ನು ಆರಂಭಿಕ ಒತ್ತಡಕ್ಕೆ ಸಿಲುಕಿಸಿದರು.
ಮೊದಲಾರ್ಧದಲ್ಲಿ 2-1 ಮುನ್ನಡೆ ಸಾಧಿಸಿದ ಫ್ರಾನ್ಸ್ ತಂಡ ದ್ವಿತೀಯಾರ್ಧದಲ್ಲೂ ಭರ್ಜರಿ ದಾಳಿ ಮುಂದುವರಿಸಿತು. ಇದರ ಪರಿಣಾಮವೆಂದರೆ ಕಳೆದ ವಿಶ್ವಕಪ್ನ ಹೀರೋ ಕೈಲಿಯನ್ ಎಂಬಪ್ಪೆ ಮೊದಲ 68ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ನಂತರ ಗಿರೋಡ್ 71ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರ್ ನ್ನು 4–1ರ ಅಂತರದಲ್ಲಿ ಮುನ್ನಡೆಸಿದರು. ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡ 3 ಅಂಕಗಳೊಂದಿಗೆ ತನ್ನ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಫ್ರಾನ್ಸ್ನ ಮುಂದಿನ ಪಂದ್ಯ ನವೆಂಬರ್ 26 ರಂದು ಡೆನ್ಮಾರ್ಕ್ ವಿರುದ್ಧ ನಡೆಯಲಿದೆ.
FIFA, France, Australia, World Cup 2022