ಬ್ಯಾಟ್ಸ್‌ಮನ್‌ಗಳ ಸ್ಪೋಟಕ ಬ್ಯಾಟಿಂಗ್ ಅಬ್ಬರದಿಂದ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಮೊತ್ತ ಕಲೆಹಾಕಿದ ಇಂಗ್ಲೆಂಡ್, ಅತಿಥೇಯ ನೆದರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 232 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಆಮ್‌ಸ್ಟೆಲ್ವಿನ್‌ನ ವಿಆರ್‌ಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಅತಿಥೇಯ ನೆದರ್ಲೆಂಡ್ ಬೌಲರ್‌ಗಳನ್ನ ಧೂಳಿಪಟ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ ವಿಶ್ವದಾಖಲೆಯ 498/4 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕಠಿಣ ಟಾರ್ಗೆಟ್ ಬೆನ್ನತ್ತಿದ ನೆದರ್ಲೆಂಡ್ 49.4 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಗುವ ಮೂಲಕ 232 ರನ್‌ಗಳ ಭಾರೀ ಅಂತರದ ಸೋಲನುಭವಿಸಿತು.

ಇಂಗ್ಲೆಂಡ್ ಸ್ಪೋಟಕ ಬ್ಯಾಟಿಂಗ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕನಾಗಿ ಕಣಕ್ಕಿಳಿದ ಜೇಸನ್ ರಾಯ್(1) ಹಾಗೂ ನಾಯಕ ಓಯಾನ್ ಮಾರ್ಗನ್(0) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳ ಭರ್ಜರಿ ಆಟವಾಡಿದರು. ಆದರೆ ಅನನುಭವಿ ನೆದರ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಫಿಲಿಪ್ ಸ್ಲಟ್ 122(93), ಡಾವಿಡ್ ಮಲಾನ್ 125(109), ಜಾಸ್ ಬಟ್ಲರ್ 162*(70) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ 66*(22) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ ಬೌಂಡರಿ ಹಾಗೂ ಸಿಕ್ಸರ್ ಮೂಲಕ ರನ್‌ಗಳಿಸಿದ ಈ ಬ್ಯಾಟ್ಸ್‌ಮನ್‌ಗಳು ತಂಡದ ಮೊತ್ತವನ್ನ ವಿಶ್ವ ದಾಖಲೆಯ 498ಕ್ಕೆ ಏರಿಸಿದರು.
ನೆದರ್ಲೆಂಡ್ 266ಕ್ಕೆ ಆಲೌಟ್:
ಇಂಗ್ಲೆಂಡ್ ನೀಡಿದ 499 ರನ್‌ಗಳ ಅಸಾಧಾರಣ ಗುರಿ ಬೆನ್ನತ್ತಿದ ನೆದರ್ಲೆಂಡ್ 266 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಕ್ಸ್ ಒಡೌಡ್(55) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬಂದ ಸ್ಕಾಟ್ ಎಡ್ವರ್ಡ್ಸ್ 72* ರನ್‌ಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಸ್ವಲ್ಪಮಟ್ಟಿನ ಪ್ರತಿರೋಧ ನೀಡಿದರು. ಇವರಿಬ್ಬರ ಹೊರತಾಗಿ ಉಳಿದ ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತ ಕಲೆಹಾಕಿದರು ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. ಇಂಗ್ಲೆಂಡ್ ಮೊಯಿನ್ ಅಲಿ 3 ವಿಕೆಟ್ ಪಡೆದರೆ, ಡೇವಿಡ್ ವಿಲ್ಲಿ, ಟೋಪ್ಲೇ ಹಾಗೂ ಸ್ಯಾಮ್ ಕರ್ರನ್ ತಲಾ 2 ವಿಕೆಟ್ ಪಡೆದು ಮಿಂಚಿದರು.