ಸತತ ಸೋಲುಗಳಿಂದ ಕಂಗೆಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಕೊನೆಗೂ ಗಲುವು ಕಂಡಿದೆ. ಡೆಲ್ಲಿ ವಿರುದ್ದ 9 ರನ್ ಜಯ ಸಾಧಿಸಿದೆ,
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು.
198 ರನ್ ಗುರಿ ಪಡೆದ ಡೆಲ್ಲಿ ಇನ್ನಿಂಗ್ಸ್ ನ ಎರಡನೆ ಎಸೆತದಲ್ಲಿ ನಾಯಕ ವಾರ್ನರ್ ಅವರನ್ನು ಕಳೆದುಕೊಂಡಿತು. 2ನೇ ವಿಕೆಟ್ಗೆ ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಅವರ 112 ರನ್ ಜತೆಯಾಟ ಜಯದತ್ತ ಮುನ್ನಗುತ್ತಿತ್ತು. ಆದರೆ 2 ಓವರ್ 13 ರನ್ ಅಂತರದಲ್ಲಿ ಫಿಲ್ ಸಾಲ್ಟ್ 59 ರನ್, ಮನೀಶ್ ಪಾಂಡೆ (1ರನ್), ಮಿಚೆಲ್ ಮಾರ್ಷ್ 63 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಕೊನೆಯಲ್ಲಿ ಅಕ್ಸರ್ ಪಟೇಲ್ ಹೋರಾಡಿದರೂ ಫಲ ಸಿಗಿಲಿಲ್ಲ.
ಇದಕ್ಕೂ ಮುನ್ನ ಸನ್ ರೈಸರ್ಸ್ ಪರ ಅಭಿಷೇಕ್ ಶರ್ಮಾ 67, ಹೆನ್ರಿಕ್ ಕ್ಲಾಸೆನ್ 53, ಅಬ್ದುಲ್ ಸಮಾದ್ 28 ರನ್ ಹೊಡೆದರು.
ಡೆಲ್ಲಿ ಪರ ಮಿಚೆಲ್ ಮಾರ್ಷ್ 27ಕ್ಕೆ 4 ವಿಕೆಟ್ ಪಡೆದರು.