ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೆಸ್ಟ್ ಆಡಿದ ನಂತರ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆಡಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಹೊಸ ನಾಯಕನನ್ನು ಆಯ್ಕೆ ಮಾಡಿದೆ. RCB ಮೂಲಗಳ ಪ್ರಕಾರ ಡು ಪ್ಲೆಸಿಸ್ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಪ್ಲೆಸಿಸ್ ಹೆಸರಿಗೆ ಮುದ್ರೆ ಹಾಕಲಾಗಿದೆ. ಗ್ಲೆನ್ ಮ್ಯಾಕ್ಸ್ವೆಲ್ ಅವರ ಹೆಸರನ್ನು ಸಹ ಅವರೊಂದಿಗೆ ಚರ್ಚಿಸಲಾಯಿತು, ಆದರೆ ಕೊನೆಯಲ್ಲಿ ಡು ಪ್ಲೆಸಿಸ್ಗೆ ಪಟ್ಟ ಕಟ್ಟುವುದು ಫೈನಲ್ ಆದಂತೆ ಕಾಣುತ್ತಿದೆ. ಮೂಲಗಳ ಪ್ರಕಾರ, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸಹ ಇವರು ನಾಯಕರಾಗುವುದನ್ನು ಒಪ್ಪಿದ್ದಾರೆ. ಶೀಘ್ರದಲ್ಲೇ RCB ಡು ಪ್ಲೆಸಿಸ್ ಹೆಸರನ್ನು ಘೋಷಿಸಬಹುದು.
ಫಾಫ್ ಡು ಪ್ಲೆಸಿಸ್ ಅವರನ್ನು ಟಿ-20 ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಎಂದು ಪರಿಗಣಿಸಲಾಗಿದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾದ ನಾಯಕತ್ವವನ್ನೂ ವಹಿಸಿದ್ದಾರೆ. ಆಫ್ರಿಕಾ ಪರ, ಅವರು 37 ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು ಮತ್ತು 23 ಪಂದ್ಯಗಳಲ್ಲಿ ಗೆಲುವು, 13 ಸೋಲು ಮತ್ತು 1 ಪಂದ್ಯವನ್ನು ಟೈ ಮಾಡಿಕೊಂಡರು. ಫಾಫ್ ಗೆಲುವಿನ ಶೇಕಡಾವಾರು 63.51. ಮತ್ತೊಂದೆಡೆ, ಗ್ಲೆನ್ ಮ್ಯಾಕ್ಸ್ವೆಲ್ ಆರಂಭಿಕ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ನಾಯಕತ್ವ ರೇಸ್ ನಿಂದ ಹಿಂದೆ ಸರಿದಿದ್ದಾರೆ.
ವಿರಾಟ್ ನಾಯಕತ್ವ ತೊರೆದಿದ್ದರು
ಕಳೆದ ವರ್ಷ ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನು ತೊರೆದ ನಂತರ, ವಿರಾಟ್ ಕೊಹ್ಲಿ ದುಬೈನಲ್ಲಿ ನಡೆದ ಐಪಿಎಲ್ ನಂತರ ಆರ್ಸಿಬಿ ನಾಯಕತ್ವವನ್ನೂ ತೊರೆದರು. ಇದರ ಹಿಂದೆ ಬ್ಯಾಟಿಂಗ್ನತ್ತ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಅವರು ತಮ್ಮ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಬಯಸಿದ್ದರು. ಕೊಹ್ಲಿ 2013 ರ ಋತುವಿನಲ್ಲಿ RCB ನಾಯಕರಾದರು, ಆದರೆ ಅವರ ನಾಯಕತ್ವದಲ್ಲಿ ಒಮ್ಮೆಯೂ IPL ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.