Monday, November 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

CWC 2023: ODI ವಿಶ್ವಕಪ್‌ನಲ್ಲಿ ಮಿಂಚಲು ಸಜ್ಜಾಗಿರುವ ಟಾಪ್‌-5 ಆಲ್ರೌಂಡರ್ಸ್‌

October 4, 2023
in Cricket, ಕ್ರಿಕೆಟ್
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

Team India

Share on FacebookShare on TwitterShare on WhatsAppShare on Telegram

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌-2023 ಆರಂಭಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಅ.5ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ವಿಶ್ವ ಕ್ರಿಕೆಟ್‌ನ ಮಹಾಸಮರಕ್ಕೆ ಎಲ್ಲಾ 10 ತಂಡಗಳು ಸಜ್ಜಾಗಿವೆ. ಈ ಹತ್ತು ತಂಡಗಳ ಜೊತೆಗೆ ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನದಿಂದ ಗಮನ ಸೆಳೆದಿರುವ ಆಲ್ರೌಂಡರ್‌ಗಳು ತಮ್ಮ ತಂಡಕ್ಕೆ ದೊಡ್ಡ ಸಕ್ಸಸ್‌ ತಂದುಕೊಡಲು ಅಣಿಯಾಗಿದ್ದಾರೆ. ಅದರಂತೆ ಭಾರತದಲ್ಲಿ ನಡೆಯುವ 2023ರ ವಿಶ್ವಕಪ್‌ನಲ್ಲಿ ಇಂಪ್ಯಾಕ್ಟ್‌ ಮಾಡಬಲ್ಲ ಟಾಪ್‌-5 ಆಲ್ರೌಂಡರ್ಸ್‌ ಯಾರು? ಎಂಬ ಮಾಹಿತಿ ಇಲ್ಲಿದೆ.

Hardik
Hardik Pandya

ಹಾರ್ದಿಕ್‌ ಪಾಂಡ್ಯ(ಭಾರತ)
ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಪ್ರಮುಖ ಆಲ್ರೌಂಡರ್‌ಗಳ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಪಾಂಡ್ಯ, ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.
Mitchel Marsh
Mitchell Marsh

ಮಿಚೆಲ್‌ ಮಾರ್ಷ್‌(ಆಸ್ಟ್ರೇಲಿಯಾ)
ಬ್ಯಾಟಿಂಗ್‌ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌, ಆಸೀಸ್‌ ತಂಡದ ಪ್ರಮುಖ ಆಲ್ರೌಂಡರ್‌ ಆಗಿದ್ದು, ವಿಶ್ವಕಪ್‌ನಲ್ಲಿ ಕಾಂಗರೂ ಪಡೆಯ ಬಹುದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ತಂಡದ ಆರಂಭಿಕ ಬ್ಯಾಟರ್‌ ಆಗಿರುವ ಮಾರ್ಷ್‌, ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಎದುರಾಳಿ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿದ್ದಾರೆ.
Shakib Al Hasan
Shakib Al Hasan

ಶಕೀಬ್‌-ಅಲ್‌-ಹಸನ್‌(ಬಾಂಗ್ಲಾದೇಶ)
ಬಾಂಗ್ಲಾ ತಂಡದ ಕ್ಯಾಪ್ಟನ್‌ ಆಗಿರುವ ಶಕೀಬ್‌, ಪ್ರಮುಖ ಆಲ್ರೌಂಡರ್‌ ಆಗಿಯೂ ತಂಡಕ್ಕೆ ಆಸರೆಯಾಗಿದ್ದಾರೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಈಗಾಗಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವ ಶಕೀಬ್‌, 2007ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್‌ನಿಂದಲೂ ಬಾಂಗ್ಲಾ ತಂಡಕ್ಕೆ ಪ್ರಮುಖ ಅಸ್ತ್ರವಾಗಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 606 ರನ್‌ಗಳಿಸುವ ಜೊತೆಗೆ 11 ವಿಕೆಟ್‌ಗಳನ್ನ ಕಬಳಿಸಿ ತಂಡಕ್ಕೆ ಶಕ್ತಿ ತುಂಬಿದ್ದರು.
Rashid Khan
Rashid Khan

ರಶೀದ್‌ ಖಾನ್‌(ಅಫ್ಘಾನಿಸ್ತಾನ)
ಕ್ರಿಕೆಟ್‌ ಜಗತ್ತಿನ “ಸ್ಪಿನ್‌ ಕಿಂಗ್”‌ ಎಂದೇ ಖ್ಯಾತಿ ಪಡೆದಿರುವ ರಶೀದ್‌ ಖಾನ್‌, ತಮ್ಮ ಚಾಣಾಕ್ಷ ಸ್ಪಿನ್‌ ಬೌಲಿಂಗ್‌ ಜೊತೆಗೆ ಸ್ಪೋಟಕ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದಾರೆ. ತಮ್ಮ ಗೂಗ್ಲಿ ಮೂಲಕ ಬ್ಯಾಟರ್‌ಗಳಿಗೆ ಮಾರಕವಾಗಿರುವ ರಶೀದ್‌ ಖಾನ್‌, ಕೆಳ ಕ್ರಮಾಂಕದಲ್ಲಿ ಅಫ್ಘಾನ್‌ ತಂಡಕ್ಕೆ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.
Chris Woakes
Chris Woakes

ಕ್ರಿಸ್‌ ವೋಕ್ಸ್‌(ಇಂಗ್ಲೆಂಡ್‌)
ಇಂಗ್ಲೆಂಡ್‌ ತಂಡದ ಬೌಲಿಂಗ್‌ ಆಲ್ರೌಂಡರ್‌ ಆಗಿರುವ ಕ್ರಿಸ್‌ ವೋಕ್ಸ್‌, ಬ್ಯಾಟಿಂಗ್‌ನಲ್ಲೂ ಕಮಾಲ್‌ ಮಾಡಲಿದ್ದಾರೆ. 2019 ವಿಶ್ವಕಪ್‌ನಲ್ಲಿ 16 ವಿಕೆಟ್‌ ಪಡೆದು ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ವೋಕ್ಸ್‌, 134 ರನ್‌ಗಳಿಸಿ ತಂಡಕ್ಕೆ ಆಸರೆ ಆಗಿದ್ದರು. ತಮ್ಮ ಜವಾಬ್ದಾರಿಯ ಬ್ಯಾಟಿಂಗ್‌ನಿಂದಲ ನಿರ್ಣಾಯಕ ಹಂತದಲ್ಲಿ ತಂಡಕ್ಕೆ ಆಸರೆಯಾಗುವ ಎಲ್ಲಾ ಸಾಮರ್ಥ್ಯ ಕ್ರಿಸ್‌ ವೋಕ್ಸ್‌ ಅವರಲ್ಲಿ ಅಡಗಿದೆ.

ಈ ಐವರ ಜೊತೆಗೆ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಕೆಮರೂನ್‌ ಗ್ರೀನ್‌, ಟ್ರಾವಿಸ್‌ ಹೆಡ್‌, ಶದಾಬ್‌ ಖಾನ್‌ ಸೇರಿದಂತೆ ಇನ್ನೂ ಅನೇಕರು ತಮ್ಮ ಆಲ್ರೌಂಡ್‌ ಆಟದ ಮೂಲಕ ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

CWC 2023, ODI Cricket, World Cup, All-Rounders, Sports Karnataka

8d9112c1932726ac7931fde0e8f48a29?s=150&d=mm&r=g

dinesh

See author's posts

Tags: all-roundersCWC 2023odi cricketSports KarnatakaWorld Cup
ShareTweetSendShare
Next Post
IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

CWC 2023: ಜಹೀರ್‌ ಖಾನ್‌ ದಾಖಲೆ ಮೇಲೆ "ಸ್ಪೀಡ್‌ ಸ್ಟಾರ್‌" ಮೊಹಮ್ಮದ್‌ ಶಮಿ ಕಣ್ಣು

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram