ಚೆನ್ನೈ ಹಾಗೂ ರಾಜಸ್ತಾನ ನಡುವಿನ ಇಂದು ಗುಣಮಟ್ಟದ ಕದನಕ್ಕೆ ಸಾಕ್ಷಿಯಾಗಲಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರವೀಂದ್ರ ಜಡೇಜಾ,ಮೊಯಿನ್ ಅಲಿ,ಮಹೇಷ್ ತೀಕ್ಷ್ಣಣ ಹಾಗೂ ಸ್ಯಾಂಟ್ನರ್ ವರ್ಸಸ್ ರಾಜಸ್ಥಾನ ತಂಡದ ಆರ್.ಅಶ್ವಿನ್, ಚಾಹಲ್, ಕಾದಾಟವಾಗಿದೆ.
ಸ್ಪಿನ್ ಪರೀಕ್ಷೆ ಗೆಲ್ಲುವ ತಂಡ ಈ ಪಂದ್ಯವನ್ನು ಗೆಲ್ಲಲಿದೆ ಎಂದು ವಿಶ್ಲೇಶಿಸಲಾಗುತ್ತಿದೆ.
ರಾಜಸ್ಥಾನ ತಂಡದಲ್ಲಿ ಜೋಸ್ ಬಟ್ಲರ್, ಜೈಸ್ವಾಲ್ ಹಾಗೂ ಹೇಟ್ಮಯರ್ ರಂತಹ ಸ್ಫೋಟಕ ಬ್ಯಾಟರ್ಗಳಿದ್ದಾರೆ.
ಚೆನ್ನೈ ತಂಡದಲ್ಲಿ ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಅಂಬಾಟಿ ರಾಯ್ಡು ಹಾಗೂ ಧೋನಿ ಇದ್ದಾರೆ.
ಚೆಪಾಕ್ನ ನಿಧಾನಗತಿಯ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡ ಯಾವುದು ಎನ್ನುವ ಕುತೂಹಲ ಇದೆ. ಇಂಪ್ಯಾಕ್ಟ್ ಆಟಗಾರ ಪ್ರಮುಖ ಪಾತ್ರವಹಿಸಲಿದೆ.
ಚೆನ್ನೈ ತಂಡಕ್ಕೆ ಬೆನ್ ಸ್ಟೋಕ್ಸ್, ದೀಪಕ್ ಚಾಹರ್ ಅವರ ಅನುಪಸ್ಥಿತಿ ಕಾಡಲಿದ್ದು ತವರಿನಲ್ಲಿ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.