ತಾರಾ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೊ ಸೌದಿ ಪ್ರೀಮಿಯರ್ ಲೀಗ್ ನಲ್ಲಿ 4 ಗೋಲುಗಳನ್ನು ಹೊಡೆದು ತಂಡವನ್ನು ಗೆಲ್ಲಿಸಿದ್ದಾರೆ.
ಮೆಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ
ಅಲ್ ನಾಸ್ಸರ್ ಪರ ಆಡಿದ ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ತಂಡದ ಪರ ಹ್ಯಾಟ್ರಿಕ್ ಗೋಲುಗಳನ್ನು ಹೊಡೆದರು.
ಅಲ್ ವೆಡಾ ವಿರುದ್ಧ ಒಟ್ಟು 4 ಗೋಲುಗಳನ್ನು ಹೊಡೆದು ಗೆಲುವಿನ ರೂವಾರಿಯಾದರು. ಎದುರಾಳಿ ಡಿಫೆಂಡರ್ ಅನ್ನು ವಂಚಿಸಿ ಮೊದಲ ಗೋಲು ಹೊಡೆದರು.
ಈ ಗೋಲಿನೊಂದಿಗೆ ಕ್ಲಬ್ ಪಂದ್ಯಗಳಲ್ಲಿ 500ನೇ ಗೋಲು ಹೊಡೆದ ಸಾಧನೆ ಮಾಡಿದರು.
ಎರಡನೆ ಗೋಲನ್ನು ಎಡಗಾಲಿನ ಸಹಾಯದಿಂದ ಗೋಲ್ ಕೀಪರ್ ವಂಚಿಸಿ ಗೋಲು ಹೊಡೆದರು. ಮೂರನೆ ಗೋಲ್ ಅನ್ನು ಸುಲಭವಾಗಿ ಗೋಲ್ ಪೋಸ್ಟ್ ನೊಳಗೆ ಹಾಕಿ ಹ್ಯಾಟ್ರಿಕ್ ಸಾಧಿಸಿದರು.
ನಾಲ್ಕನೆ ಗೋಲು ಎರಡನೆ ಗೋಲ್ ರೀತಿಯಲ್ಲೆ ರಿಪ್ಲೇಯಂತೆ ಇತ್ತು. ರೊನಾಲ್ಡೊ ಹೊಡೆದ ಚೆಂಡನ್ನು ಗೋಲ್ ಕೀಪರ್ ತಡೆದರು. ಆದರೆ ರೋನಾಲ್ಡೊ ಮತ್ತೆ ಚೆಂಡನ್ನು ಗೋಲ್ ಪೋಸ್ಟ್ ನೊಳಗೆ ಹಾಕಿದರು.