2400 ಕೋಟಿಯ ಬಂಪರ್ ಆಫರ್ ಪಡೆದ Cristiano Ronaldo, ಸಹಿ ಮಾಡಿದರೆ ಇತಿಹಾಸ
ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊಗೆ ಸೌದಿ ಅರೇಬಿಯಾದ ಕ್ಲಬ್‌ನಿಂದ 300 ಮಿಲಿಯನ್ ಯುರೋಗಳ (ಸುಮಾರು 2400 ಕೋಟಿ ರೂ.) ಆಫರ್ ಒಂದು ಬಂದಿದೆ.
ವರದಿಗಳ ಪ್ರಕಾರ, ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗುತ್ತಾರೆ. ಆದರೆ, ಯಾವ ಕ್ಲಬ್ ಅವರಿಗೆ ಇಷ್ಟು ದೊಡ್ಡ ಮೊತ್ತದ ಆಫರ್ ನೀಡಿದೆ ಎಂಬುದು ಬಹಿರಂಗವಾಗಿಲ್ಲ. ಅವರು ಕೆಲವು ದಿನಗಳ ಹಿಂದೆ ಇಂಗ್ಲಿಷ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ರೊನಾಲ್ಡೊ ಅವರು ಚಾಂಪಿಯನ್ಸ್ ಲೀಗ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ತಂಡದ ಪರ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಕೌಟುಂಬಿಕ ಕಾರಣಗಳಿಂದಾಗಿ ಅವರು ಥೈಲ್ಯಾಂಡ್‌ನಲ್ಲಿ ತಂಡದೊಂದಿಗೆ ಪೂರ್ವ-ಋತುವಿನ ತರಬೇತಿಯ ಭಾಗವಾಗಿಲ್ಲ.
ಕ್ಲಬ್ ಕೋಚ್ ಎರಿಕ್ ಟೆನ್ ಹಾಗ್ ಅವರು ರೊನಾಲ್ಡೊ ಅವರೊಂದಿಗೆ ಮಾತನಾಡುವುದಾಗಿ ಸ್ಪಷ್ಟಪಡಿಸಿದೆ. ಕ್ಲಬ್ ಇನ್ನೂ ರೊನಾಲ್ಡೊ ಅವರನ್ನು ಬಿಡುಗಡೆ ಮಾಡುವುದಿಲ್ಲ. ಅವರು ಈ ಋತುವಿನಲ್ಲಿ ತಂಡದ ಕಾರ್ಯತಂತ್ರದ ಭಾಗವಾಗಿದ್ದಾರೆ ಎಂದು ತಿಳಿಸಿದೆ.
ಇಂಗ್ಲಿಷ್ ಕ್ಲಬ್‌ನೊಂದಿಗಿನ ಅವರ ಒಪ್ಪಂದವು ಮುಂದಿನ ವರ್ಷ ಜೂನ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಅವರು ಬಯಸಿದರೆ ಅದನ್ನು ವಿಸ್ತರಿಸಬಹುದು. ಇದರ ನಂತರವೂ, 37 ವರ್ಷದ ಫುಟ್ಬಾಲ್ ಆಟಗಾರ ಇತ್ತೀಚೆಗೆ ಬದಲಾವಣೆ ನಿಯಮದಡಿ ತಂಡದಿಂದ ಕೈ ಬಿಡಬೇಕೆಂದು ವಿನಂತಿಯನ್ನು ಸಲ್ಲಿಸಿದ್ದಾರೆ. ಈ ವಿನಂತಿಯು ರೊನಾಲ್ಡೊ ಕ್ಲಬ್ ತೊರೆಯುವ ಸುದ್ದಿಗೆ ಪುಷ್ಠಿ ನೀಡುತ್ತದೆ.

ಕಳೆದ ವಾರ ಇಂಗ್ಲೆಂಡ್ ಫಾರ್ವರ್ಡ್ ರಹೀಮ್ ಸ್ಟಿರ್ಲಿನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಚೆಲ್ಸಿಯಾ ರೊನಾಲ್ಡೊ ಅವರೊಂದಿಗಿನ ಒಪ್ಪಂದದಿಂದ ಹಿಂದೆ ಸರಿದಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಬೇಯರ್ನ್ ಮ್ಯೂನಿಚ್ ಮತ್ತು ಅಟ್ಲೆಟಿಕೊ ಮ್ಯಾಡ್ರಿಡ್ ಇನ್ನೂ ರೊನಾಲ್ಡೊ ಪಡೆಯುವ ಸ್ಪರ್ಧೆಯಲ್ಲಿ ನಿರತವಾಗಿವೆ.
ರೋನಾಲ್ಡೊ ಒಂದು ವರ್ಷದ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಮರಳಿದ್ದರು. ಆದರೆ ಅವರ ಎರಡನೇ ಋತುವು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಕಳೆದ ಋತುವಿನಲ್ಲಿ ಅವರು ಇಂಗ್ಲಿಷ್ ಕ್ಲಬ್‌ಗಾಗಿ 18 ಗೋಲುಗಳನ್ನು ಗಳಿಸಿದ್ದರು, ಆದರೆ ಕ್ಲಬ್ ಪ್ರೀಮಿಯರ್ ಲೀಗ್‌ನಲ್ಲಿ ಆರನೇ ಸ್ಥಾನವನ್ನು ಗಳಿಸಿತು ಮತ್ತು ಚಾಂಪಿಯನ್ಸ್ ಲೀಗ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು.
Cristiano Ronaldo, Saudi Arabia, club, offer