ಸಿಆರ್-7 ಬ್ರ್ಯಾಂಡ್ನ ಮೊಡೆಲ್ 1985. ಆದ್ರೂ ಸಿಆರ್-7 ಬ್ರ್ಯಾಂಡ್ ಮಾತ್ರ 1998ರ ಮೊಡೆಲ್ನಂತೆ ವರ್ಕ್ ಆಗ್ತಿದೆ. ಹಾಗಂತ ಇದು ಏನು ಅಂತ ಅಚ್ಚರಿಯಾಗಬೇಡಿ. ಇದು ಪೋರ್ಚ್ಗಲ್ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೇಹದ ಮೆಡಿಕಲ್ ರಿಪೋರ್ಟ್. ರಿಯಲ್ ಮ್ಯಾಡ್ರಿಡ್ ಕ್ಲಬ್ಗೆ ಗುಡ್ಬೈ ಹೇಳಿ ಇಟೆಲಿಯ ಜುವೆಂಟರ್ಸ್ ಕ್ಲಬ್ ತಂಡವನ್ನು ಸೇರಿಕೊಂಡಿರುವುದು ಗೊತ್ತಿರುವ ವಿಚಾರವೇ. ಜುವೆಂಟರ್ಸ್ ಕ್ಲಬ್ ಜೊತೆ 104 ಮಿಲಿಯನ್ ಪೌಂಡ್ಗೆ ಒಪ್ಪಂದ ಕೂಡ ಮಾಡಿಕೊಂಡಿರುವುದು ಹಳೆಯ ವಿಚಾರವೇ. ಹಾಗಂತ ಜುವೆಂಟರ್ಸ್ ಕ್ಲಬ್ ತಂಡ ಹಾಗೇ ಸುಮ್ಮನೆ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಖರೀದಿ ಮಾಡಿಕೊಂಡಿಲ್ಲ.
ಕ್ರಿಸ್ಟಿಯಾನೊ ರೊನಾಲ್ಡೊ ಆಟದ ಬಗ್ಗೆ ಯಾರು ಮಾತನಾಡುವಂಗಿಲ್ಲ. ಆದ್ರೆ ಅವರ ವಯಸ್ಸಿನ ಬಗ್ಗೆ ಸಣ್ಣ ಅಪಸ್ವರಗಳು ಕೇಳಬಂದಿದ್ದವು. 33ರ ಪ್ರಾಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಂದ ಅದ್ಭುತ ಆಟ ಹೊರಹೊಮ್ಮಬಹುದೇ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದ್ರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಟ್ನೆಸ್ ನೋಡಿದಾಗ ಅವರಲ್ಲಿ ಇನ್ನೂ ಆಡುವ ಸಾಮಥ್ರ್ಯವಿದೆ ಎಂಬುದು ಕಂಡುಬರುತ್ತಿತ್ತು. ಅಲ್ಲದೆ ಸಿಆರ್-7 ಗೂ ತನ್ನ ಸಾಮಥ್ರ್ಯದ ಮೇಲೆ ಅಪಾರವಾದ ಆತ್ಮವಿಶ್ವಾಸವಿತ್ತು.
ಇನ್ನು ಜುವೆಂಟರ್ಸ್ ಕ್ಲಬ್ನ ನಿಯಮದಂತೆ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಫಿಟ್ನೆಸ್ ಪರೀಕ್ಷೆಗೂ ಒಳಪಡಿಸಲಾಗಿತ್ತು. ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೇಹದ ಸಾಮಥ್ರ್ಯವನ್ನು ಪರೀಕ್ಷಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದರು. ಯಾಕಂದ್ರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಟ್ನೆಸ್ ಹಂಡ್ರೆಡ್ ಪರ್ಸೆಂಟ್ಗಿಂತಲೂ ಹೆಚ್ಚು ಫರ್ಫೆಕ್ಟ್ ಆಗಿತ್ತು. ಫಿಟ್ ಆಂಡ್ ಫೈನ್ ಆಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೇಹ 20ರ ತರುಣರನ್ನೂ ಕೂಡ ನಾಚಿಸುವಂತಿದೆ. ಮೈದಾನದಲ್ಲಿ ಫುಟ್ಬಾಲ್ ಆಟವನ್ನು ಎಷ್ಟು ಚೆಂದವಾಗಿ ಆಡುತ್ತಾರೋ ಅಷ್ಟೇ ಅಂದವಾಗಿ ತನ್ನ ದೇಹವನ್ನು ಕೂಡ ಕಾಪಾಡಿಕೊಂಡಿದ್ದಾರೆ.
ಹೌದು, ಕ್ರಿಸ್ಟಿಯಾನೊ ರೊನಾಲ್ಡೊಗೆ 36 ವರ್ಷವಾದ್ರೂ ದೇಹ ಮಾತ್ರ 20 ವರ್ಷದಂತಿದೆ. ಹಾಗೇ ದೇಹದಲ್ಲಿ ಕೊಬ್ಬಿನ ಅಂಶ ಇರೋದು ಕೇವಲ 7 ಪರ್ಸೆಂಟ್ ಮಾತ್ರ. ಸಾಮಾನ್ಯವಾಗಿ ಫುಟ್ಬಾಲ್ ಆಟಗಾರರ ದೇಹದಲ್ಲಿ ಶೇ.10ರಷ್ಟು ಕೊಬ್ಬಿನ ಅಂಶವಿರುತ್ತೆ. ಆದ್ರೆ ಸಿಆರ್ ಬಾಡಿನಲ್ಲಿ ಅದಕ್ಕಿಂತಲೂ ಶೇ.3ರಷ್ಟು ಕಡಿಮೆ ಇದೆ. ಇನ್ನು, ದೇಹದ ಸ್ನಾಯುಗಳ ದ್ರವ್ಯರಸ ( musಛಿಟe mಚಿss) ಶೇ.50ರಷ್ಟಿದೆ. ಇಲ್ಲೂ ಕೂಡ ಸಿಆರ್-7 ಒಂದು ಹೆಜ್ಜೆ ಮುಂದಿದ್ದಾರೆ. ಫುಟ್ಬಾಲ್ ಆಟಗಾರರಲ್ಲಿ ಸ್ನಾಯುಗಳ ದ್ರವ್ಯ ರಸ ( muscle mass ) ಶೇ.45ರಷ್ಟಿರುತ್ತೆ. ಆದ್ರೆ ಸಾಮಾನ್ಯ ಆಟಗಾರರಿಗಿಂತ ಶೇ.4ರಷ್ಟು ಹೆಚ್ಚು ಸ್ನಾಯುಗಳ ದ್ರವ್ಯ ರಸ ( muscle mass) ಕ್ರಿಸ್ಟಿಯಾನೊ ರೊನಾಲ್ಡೊ ದೇಹದಲ್ಲಿದೆ.
ಅಷ್ಟೇ ಅಲ್ಲ, ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೇಹ ವೇಗಕ್ಕೂ ಸ್ಪಂದಿಸುತ್ತದೆ. ಸುಸ್ತು ಅನ್ನೋದೇ ಇವರಿಗಿಲ್ಲ. ಪ್ರತಿ ದಿನವೂ ತನ್ನ ದೇಹವನ್ನು ದಂಡಿಸುವ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ದೇಹವನ್ನು ಫುಟ್ಬಾಲ್ ಚೆಂಡಿನಂತೆ ರೂಪುಗೊಳಿಸಿದ್ದಾರೆ. ರಷ್ಯಾ ಫಿಫಾ ಫುಟ್ಬಾಲ್ ಟೂರ್ನಿಯ ಪಂದ್ಯವೊಂದರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಗಂಟೆಗೆ 33.98 ಕಿಲೋ ಮೀಟರ್ ವೇಗದಲ್ಲಿ ಓಡಿದ್ದಾರೆ. ಅಂದ ಮೇಲೆ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಆಟಕ್ಕಾಗಿ ತನ್ನ ದೇಹವನ್ನು ಯಾವ ರೀತಿ ದಂಡಿಸಿರಬಹುದು ಎಂಬುದನ್ನು ಊಹೆ ಮಾಡುವುದು ಕೂಡ ಕಷ್ಟ.
ಪ್ರತಿ ದಿನವೂ ಡಯಟ್ ಮಾಡುವ ಕ್ರಿಸ್ಟಿಯಾನೊ ರೊನಾಲ್ಡೊ ಹೆಚ್ಚು ತರಕಾರಿಗಳನ್ನು ತಿನ್ನುತ್ತಾರೆ. ಫಿಶ್ ಅವರ ಫೆವರೀಟ್ ಫುಡ್. ಮೊಟ್ಟೆ, ಹಣ್ಣು ಹೀಗೆ ದಿನ ಆರು ಬಾರಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಿನ್ನುತ್ತಾರೆ. ಆಲ್ಕೊಹಾಲ್ ಸೇರಿದಂತೆ ದುಶ್ಚಟಗಳನ್ನು ಬೆಳೆಸಿಕೊಂಡಿಲ್ಲ ಎಷ್ಟೇ ಬಿಝಿಯಾಗಿದ್ರೂ ದಿನ ನಿತ್ಯವೂ ವರ್ಕ್ಔಟ್ ಮಾಡುವುದನ್ನು ಮರೆಯುವುದಿಲ್ಲ. ಕಠಿಣ ಅಭ್ಯಾಸದ ಜೊತೆಗೆ ಜಿಮ್ನಲ್ಲಿ ಕಠಿಣ ಕಸರತ್ತುಗಳನ್ನು ಕೂಡ ನಡೆಸುತ್ತಾರೆ.
ವಾರದ ಐದು ದಿನ ನಾಲ್ಕು ತಾಸುಗಳ ಕಾಲ ಜಿಮ್ನಲ್ಲಿ ದೇಹವನ್ನು ದಂಡಿಸುತ್ತಾರೆ. ವಿಕೆಂಡ್ಗೆ ಮ್ಯಾಚ್ ಅಡ್ತಾರೆ. ಒಂದು ದಿನ ದೇಹಕ್ಕೆ ರೆಸ್ಟ್ ಕೊಡ್ತಾರೆ. ಮೈದಾನದಲ್ಲಿ ವೇಗವಾಗಿ ಓಡುತ್ತಾ, ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಕ್ರಿಸ್ಟಿಯಾನೊ ರೊನಾಲ್ಡೊ ಶರವೇಗದಲ್ಲೇ ಚೆಂಡನ್ನು ಒದೆಯುತ್ತಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಲೆ, ಎದೆ, ತೊಡೆ, ಕಾಲು, ಪಾದಗÀಳ ಸ್ನಾಯುಗಳಲ್ಲಿ ಮಿಂಚಿನ ಶಕ್ತಿ ಇದೆ. ತೋಳ್ಬಲದಲ್ಲಿ ಪವರ್ ಕೂಡ ಇದೆ. 1.87 ಮೀಟರ್ ಎತ್ತರ, 84 ಕೆಜಿ ತೂಕವಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರಲ್ಲಿ ಫರ್ಫೆಕ್ಟ್ ಸಿಕ್ಸ್ ಪ್ಯಾಕ್ ಅನ್ನು ನೋಡಬಹುದು.
ಕ್ರಿಸ್ಟಿಯಾನೊ ರೊನಾಲ್ಡೊ ಆಟವನ್ನು ತುಂಬಾನೇ ಪ್ರೀತಿಸ್ತಾರೆ. ಸೋಲು -ಗೆಲುವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಚೆನ್ನಾಗಿ ಆಡಬೇಕು. ಆಡಿದ್ರೆ ಪಂದ್ಯವನ್ನು ಗೆಲ್ಲುತ್ತೇವೆ ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಲೈಫ್ ಅನ್ನು ಚಾಲೆಂಜ್ ಆಗಿಯೇ ತೆಗೆದುಕೊಳ್ತಾರೆ. ಅದಕ್ಕಾಗಿಯೇ ಜುವೆಂಟರ್ಸ್ ತಂಡವನ್ನು ಸೇರಿಕೊಂಡಿರುವುದಾಗಿಯೂ ಹೇಳಿದ್ದಾರೆ. ರಿಯಲ್ ಮ್ಯಾಡ್ರಿಡ್ ತಂಡದ ಪರವಾಗಿ 9 ವರ್ಷ ಆಡಿರುವ ಸಿಆರ್-7ಗೆ ಎಲ್ಲವೂ ಸಿಕ್ಕಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆತ್ಮವಿಶ್ವಾಸ, ಪ್ರಶಸ್ತಿ ಗೆಲ್ಲುತ್ತೇನೆ ಅನ್ನೋ ವಿಶ್ವಾಸ, ನನ್ನಲ್ಲಿ ಇನ್ನೂ ಆಡುವ ಸಾಮಥ್ರ್ಯವಿದೆ ಎಂಬ ನಂಬಿಕೆ ಎದ್ದುಕಾಣುತ್ತಿದೆ.
ಮಿಲಿಯನ್ಗಟ್ಟಲೇ ದುಡ್ಡು ಕೊಟ್ಟ ಕ್ಲಬ್ಗೆ ಋಣವನ್ನು ತೀರಿಸಲು ರೆಡಿಯಾಗಿದ್ದೇನೆ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ. ಅದಕ್ಕೆ ತಕ್ಕಂತೆ ಫುಟ್ಬಾಲ್ ಆಟ ಮತ್ತು ತನ್ನ ಫಿಟ್ನೆಸ್ ಅನ್ನು ಕಾಯ್ದುಕೊಂಡಿದ್ದಾರೆ. ಇದಕ್ಕೆ ಅನ್ನೋದು ಕ್ರಿಸ್ಟಿಯಾನೊ ರೊನಾಲ್ಡೊ ಗ್ರೆಟೆಸ್ಟ್ ಆಫ್ ಆಲ್ ಟೈಮ್ ಅಂತ.