Champions League: ಅಬ್ಬರಿಸಿದ ಮ್ಯಾಂಚೆಸ್ಟರ್ ಸಿಟಿ
ಚಾಂಪಿಯನ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸಿಟಿ 5-0 ರಿಂದ ಕೋಪನ್ ಹ್ಯಾಗನ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಎರ್ಲಿಂಗ್ ಹಾಲೆಂಡ್ (7, 32ನೇ ನಿಮಿಷ), ಡಿ. ಖೋಚೋಲವಾ (39 ನೇ ನಿಮಿಷ) ಆರ್. ಮಹ್ರೆಜ್ (55 ನೇ ನಿಮಿಷ) ಜೆ. ಅಲ್ವಾರೆಜ್ (76ನೇ ನಿಮಿಷ) ಗೋಲು ಬಾರಿಸಿ ಮ್ಯಾಂಚೆಸ್ಟರ್ ಸಿಟಿ ಗೆಲುವಿನಲ್ಲಿ ಮಿಂಚಿದರು. ‘ಜಿ’ ಗುಂಪಿನಲ್ಲಿ ಮ್ಯಾಂಚೆಸ್ಟರ್ ಸಿಟಿ ಆಡಿರುವ ಮೂರು ಪಂದ್ಯಗಳನ್ನು ಗೆದ್ದು 9 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಇತ್ತೀಚಿಗೆ ಭರ್ಜರಿ ಪ್ರದರ್ಶನ ನೀಡುತ್ತಿರುವ ಎರ್ಲಿಂಗ್ ಹಾಲೆಂಡ್ ಆರಂಭದಲ್ಲಿ ತಂಡದ ಪರ ಅಬ್ಬರಿಸಿದರು. ಮೈದಾನದ ಎಡಭಾಗದಿಂದ ಸಹ ಆಟಗಾರನಿಂದ ಪಾಸ್ ನ ಲಾಭ ಪಡೆದ ಎರ್ಲಿಂಗ್ ಹಾಲೆಂಡ್ ಸೊಗಸಾದ ಗೋಲು ಬಾರಿಸಿದರು. ಈ ಅವಧಿಯಲ್ಲಿ 32ನೇ ನಿಮಿಷದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡ ಅಮೋಘ ಪ್ರದರ್ಶನ ನೀಡಿತು. ಈ ಸಮಯದಲ್ಲಿ ಸಮಯೋಚಿತ ಪ್ರದರ್ಶನ ನೀಡಿದ ಎರ್ಲಿಂಗ್ ಹಾಲೆಂಡ್ ಮತ್ತೊಂದು ಗೋಲು ದಾಖಲಿಸಿದರು.
ಇದೇ ಅವಧಿಯಲ್ಲಿ ಕೋಪನ್ ಹ್ಯಾಗನ್ ಡಿ. ಖೋಚೋಲವಾ 39ನೇ ನಿಮಿಷದಲ್ಲಿ ಉಡುಗೊರೆ ಗೋಲು ನೀಡಿದರು. ಎರಡನೇ ಅವಧಿಯಲ್ಲೂ ಉತ್ತಮ ಪ್ರದರ್ಶನ ನೀಡಿದ ಮ್ಯಾಂಚೆಸ್ಟರ್ ಸಿಟಿ ಇನ್ನೆರಡು ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು.
Champions League, Copenhagen, Manchester City,