ಕಾನ್ಪುರದ ಗ್ರೀನ್ಪಾರ್ಕ್ ಪಿಚ್ನಲ್ಲಿ 2ನೇ ದಿನ ನ್ಯೂಜಿಲೆಂಡ್ ಬೌಲರ್ಗಳು ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ನ ಬೆನ್ನೆಲುಬು ಮುರಿದಿದ್ದರು. ಟಿಮ್ ಸೌಥಿ ಒಂದರ ಮೇಲೊಂದು ವಿಕೆಟ್ ಪಡೆದು ಟೀಮ್ ಇಂಡಿಯಾದ ಆಟಕ್ಕೆ ಬ್ರೇಕ್ ಹಾಕಿದ್ದರು. ಆದರೆ ಶ್ರೇಯಸ್ ಅಯ್ಯರ್ ಮಾತ್ರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದರು. ಅಷ್ಟೇ ಅಲ್ಲ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೇ ಶತಕ ಸಿಡಿಸಿದ ದಾಖಲೆ ಬರೆದರು. ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ 16ನೇ ಭಾರತೀಯ ಆಟಗಾರನಾಗಿ ಇತಿಹಾಸದ ಪುಟ ಸೇರಿಕೊಂಡರು.
75 ರನ್ಗಳಿಂದ ಆಟ ಆರಂಭಿಸಿದ ಶ್ರೇಯಸ್ ಬೌಂಡರಿ ಮೂಲಕವೇ ಆಟ ಆರಂಭಿಸಿದರು. ನೋಡ ನೋಡುತ್ತಿದ್ದಂತೆ ಜಡೇಜಾ ವಿಕೆಟ್ ಉರುಳಿತ್ತು. ಆದರೆ ಶ್ರೇಯಸ್ ಬೌಂಡರಿ ಮೇಲೆ ಬೌಂಡರಿ ಸಿಡಿಸಿದರು. 157ನೇ ಎಸೆತದಲ್ಲಿ ಎರಡು ರನ್ ಕದ್ದ ಶ್ರೇಯಸ್ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೇ ಶತಕದ ಸಂಭ್ರಮ ಆಚರಿಸಿಕೊಂಡರು.
ಕಾನ್ಪುರದ ಗ್ರೀನ್ಪಾರ್ಕ್ನಲ್ಲಿ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರನಾಗಿ ಶ್ರೇಯಸ್ ಇತಿಹಾಸ ಬರೆದರು. ಈ ಹಿಂದೆ ಜಿಆರ್ ವಿಶ್ವನಾಥ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ್ದರು. ಆದರೆ ಜಿಆರ್ವಿ 2ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ ಭಾರತೀಯರು:
- ಲಾಲಾ ಅಮರನಾಥ್- 1933
- ದೀಪಕ್ ಶೋಧನ್- 1952
- ಅರ್ಜನ್ ಕೃಪಾಲ್ ಸಿಂಗ್ -1955
- ಅಬ್ಬಸ್ ಅಲಿ ಬೇಗ್- 1959
- ಹನುಮಂತ್ ಸಿಂಗ್- 1964
- ಜಿ.ಆರ್.ವಿಶ್ವನಾಥ್-1969
- ಸುರಿಂದರ್ ಅಮರನಾಥ್- 1976
- ಮೊಹಮ್ಮದ್ ಅಜರುದ್ದೀನ್-1984
- ಪ್ರವೀಣ್ ಅಮ್ರೆ-1992
- ಸೌರವ್ ಗಂಗೂಲಿ-1996
- ವೀರೇಂದ್ರ ಸೆಹ್ವಾಗ್- 2001
- ಸುರೇಶ್ ರೈನಾ- 2010
- ಶಿಖರ್ ಧವನ್- 2013
- ರೋಹಿತ್ ಶರ್ಮಾ-2013
- ಪೃಥ್ವಿ ಷಾ- 2018
- ಶ್ರೇಯಸ್ ಅಯ್ಯರ್- 2021