ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯಸೇನ್ ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಆದರೆ ತಾರಾ ಆಟಗಾರ್ತಿ ಪಿ.ವಿ.ಸಿಂಧು ಸೆಮಿಫೈನಲ್ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಲಕ್ಷ್ಯಸೇನ್ ಜಪಾನ್ನ ಕೆಂಟಾ ನಿಶಿಮೊಟೊ ವಿರುದ್ಧ 21-17, 21-14 ನೇರ ಸೆಟ್ಗಳಿಂದ ಗೆದ್ದುಕೊಂಡರು. ಈ ಮೂಲಕ ಎರಡನೆ ಬಾರಿ ಸೂಪರ್ 500 ಫೈನಲ್ ತಲುಪಿದರು. ಮತ್ತು ವರ್ಷದ ಮೊದಲ ಬಿಡಬ್ಲ್ಯುಎಫ್ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದರು.
21 ವರ್ಷದ ಲಕ್ಷ್ಯಸೇನ್ ಫೈನಲ್ನಲ್ಲಿ ಚೀನಾದ ಲಿ ಶೀ ಫೆಂಗ್ ಅವರನ್ನು ಎದುರಿಸಲಿದ್ದಾರೆ.
ಕಳಪೆಯಾಗಿ ಆರಂಭ ಪಡೆದೆ, ನನಗೆ ನಿಯಂತ್ರಿಸಲು ಸಾಧ್ಯಯವಾಗಲಿಲ್ಲ. ನಂತರ ನೆಟ್ ಪ್ಲೇ ಅಸವಾಗಿ ಬಳಸಿಕೊಂಡು ಯಶಸ್ಸಿ ಕಂಡೆ ಎಂದಿದ್ದಾರೆ ಲಕ್ಷ್ಯಸೇನ್.
ಕಳೆದ ವರ್ಷ ಆಗಸ್ಟ್ನಲ್ಲಿ ವಿಶ್ವ ಚಾಂಪಿಯನ್ಶಿಪ್ ನಂತರ ಮೂಗಿನ ಶಸಚಿಕಿತ್ಸಗೆ ಒಳಪಟ್ಟಿದ್ದ ಲಕ್ಷ್ಯಸೇನ್ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು.
ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊನೆಯ ಬಾರಿಗೆ ಫೈನಲ್ಸ್ ಆಡಿದ್ದರು. ನಂತರ ಟೂರ್ನಿಗಳಲ್ಲಿ ಬೇಗನೆ ಸೋತು ನಿರ್ಗಮಿಸಿದ್ದರು. ಇತ್ತೀಚೆಗೆ ಥಾಯ್ಲ್ಯಾಂಡ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿ ಪ್ರದರ್ಶನದಲ್ಲಿ ಸುಧಾರಿಸಿದ್ದರು.
ಲೀ ಶೀ ಫೆಂಗ್ ವಿರುದ್ಧ ಸೇನ್ 4-2 ದಾಖಲೆ ಹೊಂದಿದ್ದರು. ನಂತರ ಥಾಯ್ಲ್ಯಾಂಡ್ ಓಪನ್ ಟೂರ್ನಿಯಲ್ಲಿ ಫೆಂಗ್ ಅವರನ್ನು ಸೋಲಿಸಿ ಅಚ್ಚರಿ ನೀಡಿದ್ದರು.
ಆರಂಭದಲ್ಲಿ ಅಂಕಗಳಿಸಲು ಪರದಾಡಿದ ಲಕ್ಷ್ಯಸೇನ್ 0-4 ಅಂಕಗಳಿಂದ ಹಿನ್ನಡೆ ಅನುಭವಿಸಿದರು. ನಂತರ ಮರುಹೋರಾಟ ನೀಡಿ 8-8 ಸಮಗೊಳಿಸಿದರು.ವಿರಾಮದ ವೇಳೆಗೆ ನಿಶಿಮೊಟೊ 11-10 ಮುನ್ನಡೆ ಪಡೆದರು. ನಂತರ ಲಕ್ಷ್ಯಸೇನ್ ಲಯ ಪಡೆದು ಮುನ್ನಡೆ ಸಾಸಿದರು.
ತಮ್ಮ ಸ್ಮ್ಯಾಶ್ಗಳ ಸಹಾಯದಿಂದ ಅಂಕ ಪಡೆಯುತ್ತಾ ಸಾಗಿದರು. ಎರಡನೆ ಸುತ್ತಿನಲ್ಲಿ ಇಬ್ಬರು 2-2, 9-9 ಸಮಬಲದ ಹೋರಾಟ ನೀಡಿದರು.ಸೇನ್ ಎಚ್ಚೆತ್ತು ಆಡಿದ್ದರಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.ಸ್ಮ್ಯಾಶ್ ಸಹಾಯದಿಂದ 19-11 ಅಂಕಗಳಾಗಿ ಪರಿವರ್ತಿಸುವಲ್ಲಿ ಯಶಸ್ಸು ಕಂಡರು. ಸೇನ್ 7 ಮ್ಯಾಚ್ ಅಂಕಗಳನ್ನು ಪಡೆದರು.
ಸೆಮಿಯಲ್ಲಿ ಎಡವಿದ ಸಿಂಧು
ಇನ್ನು ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈಲ್ನಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಿಶ್ವದ ನಂ.1 ಆಟಗಾರ್ತಿ ಜಪಾನ್ನ ಅಕಾನೆ ಯಮಗೂಚಿ ವಿರುದ್ದ 14-21,15-21 ಅಂಕಗಳಿಂದ ಸೋತರು.ಇದರೊಂದಿಗೆ ವರ್ಷದ ಮೊದಲ ಚಾಂಪಿಯನ್ಶಿಪ್ ಗೆಲ್ಲಲು ಇನ್ನು ಕಾಯಬೇಕಿದೆ.