ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಕೆನಡಾ ಓಪನ್ ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ ಎರಡನೆ ಬಾರಿಗೆ ಬಿಡಬ್ಲ್ಯುಎಫ್ ಸೂಪರ್ 500 ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಜತೆಗೆ ಮೊದಲ ಬಾರಿಗೆ ಕೆನಡಾ ಓಪನ್ ಗೆದ್ದಿದ್ದಾರೆ.
21 ವರ್ಷದ ಲಕ್ಷ್ಯಸೇನ್ 2022ರಲ್ಲಿ ಇಂಡಿಯನ್ ಓಪನ್ ಗೆಲ್ಲುವ ಮೂಲಕ ಚೊಚ್ಚಲ ಸೂಪರ್ 500 ಪ್ರಶಸ್ತಿ ಗೆದ್ದಿದ್ದರು. ಇದೀಗ ರೋಚಕ ಫೈನಲ್ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಫೆಂಗ್ ವಿರುದ್ದ 21-18, 22-20 ಅಂಕಗಳಿಂದ ಗೆದ್ದಿದ್ದಾರೆ.
ಉಭಯ ಆಟಗಾರರು ಅದ್ಭುತ ಹೊಡೆತಗಳ ಮೂಲಕ ಗಮನ ಸೆಳದರು. ಲಕ್ಷ್ಯಸೇನ್ ಎದುರಾಳಿ ಮೇಲೆ ಬಿಗಿ ಹಿಡಿತ ಸಾಧಿಸಿದರು. ಚೀನಿ ಆಟಗಾರನ ವಿರುದ್ಧ ಕಳೆದ 7 ಮುಖಾಮುಖಿಯಲ್ಲಿ 5ನೇ ಗೆಲುವು ದಾಖಲಿಸಿದರು.
ಈ ಋತುವಿನಲ್ಲಿ ವೈಫಲ್ಯಗಳನ್ನೆ ಹೆಚ್ಚು ಎದುರಿಸಿದ್ದ ಲಕ್ಷ್ಯಸೇನ್ ರ್ ರಾಂಕಿಂಗ್ನಲ್ಲಿ 19ನೇ ಸ್ಥಾನಕ್ಕೆ ಕುಸಿದಿದ್ದರು.ಈ ಗೆಲುವು ಸೇನ್ ಅವರನ್ನು ಪುಟಿದೇಳುವಂತೆ ಮಾಡಿದ್ದಾರೆ.
ಮಾಜಿ ವಿಶ್ವ ನಂ.6 ಸೇನ್ 2021ರಲ್ಲಿ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದರು. ಕಳೆದ ಆಗಸ್ಟ್ನಲ್ಲಿ ಮೂಗಿನ ಶಸ್ತ್ರ ಚಿಕಿತ್ಸೆಗ ಒಳಪಟ್ಟಿದ್ದರು.
ಇಬ್ಬರು ಯುವ ಆಟಗಾರರ ನಡುವಿನ ಕಾದಾಟದಲ್ಲಿ ಸೇನ್ ತೋರಿದ ಪ್ರಾಬಲ್ಯ ಮತ್ತು ಮನೋಧರ್ಮ ಮೇಲುಗೈ ಸಾಸುವಂತೆ ಮಾಡಿತು.
ನೆಟ್ ಪ್ಲೆಯನ್ನು ಎಚ್ಚರಿಕೆಯಿಂದ ಆಡಿದ ಲಕ್ಷ್ಯಸೇನ್ ಕ್ರಾಸ್ ಸ್ಮ್ಯಾಶ್ಗಳ ಮೂಲಕ ಮೊದಲ ಸುತ್ತಿನಲ್ಲಿ ಲೀ ಅವರನ್ನ 2-6 ಅಂಕಗಳಿಂದ ಹಿನ್ನಡೆ ಅನುಭವಿಸುವಂತೆ ಮಾಡಿದರು.
ಕನ್ಮನ ಸೆಳೆಯುವ ರೀತಿಯಲ್ಲಿ ಲಕ್ಷ್ಯಸೇನ್ ಜಿಗಿದು ಸ್ಮ್ಯಾಶ್ಗಳನ್ನು ಹೊಡೆದರು.
ಪಂದ್ಯದ ಮಧ್ಯ ಭಾಗದಲ್ಲಿ ಲೀ ತಪ್ಪುಗಳನ್ನು ಮಾಡಿದ್ದರಿಂದ 12-15 ಹಿನ್ನಡೆ ಅನುಭವಿಸಿದರು. ನಂತರ 15-15 ಸಮಬಲ ಸಾಸಿದರು. ಸೇನ್ ಸ್ಮ್ಯಾಶ್ಗಳ ಸಹಾಯದಿಂದ 3 ಅಂಕ ಪಡೆದು ಮುನ್ನಡೆ ಸಾಧಿಸಿದರು.
ಚೀನಿ ಆಟಗಾರ ಸೇನ್ ತಪ್ಪುಗಳನ್ನು ಮಾಡುವುದಕ್ಕಾಗಿ ಕಾಯುತ್ತಿದ್ದರು.5-5 ಅಂಕಗಳಾಗಿದ್ದಾಗ ನಾಲ್ಕು ಅಂಕ ಮುನ್ನಡೆ ಪಡೆದರು. 13-14 ಅಂಕಗಳಾಗಿದ್ದಾಗ ಮತ್ತೆ ನಾಲ್ಕು ಅಂಕಗಳನ್ನು ಲೀ ಪಡೆದರು. ಲಕ್ಷ್ಯಸೇನ್ ಸ್ಮ್ಯಾಶ್ಗಳ ಸಹಾಯದಿಂದ ಅಂಕಗಳನ್ನು ಸಮಗೊಳಿಸಿದರು. ನಂತರ ಅಂಕ ಪಡೆದು ಗೆದ್ದರು.
ಲೀ ತುಂಬ ಕಠಿಣ ಎದುರಾಳಿ. ಅವರ ವಿರುದ್ಧ ಒಳ್ಳೆಯ ಪಂದ್ಯ ನಿರೀಕ್ಷಿಸುತ್ತೇನೆ. ನಾನು ನೆಟ್ ಮೇಲೆ ಹಿಡಿತ ಸಾಧಿಸಿದೆ. ಲೀ ಕೂಡ ಆಕ್ರಮಣಕಾರಿ ಆಟವಾಡಿದರು.ಆದರೆ ನಾನು ಗೆಲ್ಲಲು ಪ್ರಮುಖ ಅಂಕಗಳನ್ನು ಪಡೆದೆ ಎಂದಿದ್ದಾರೆ.
ಒಲಿಂಪಿಕ್ ಅರ್ಹತಾ ವರ್ಷಕ್ಕೆ ಬಂದಿರುವುದರಿಂದ ಇದು ಕಠಿಣ ಸಂದರ್ಭವಾಗಿದ್ದು ನನ್ನ ಕೈಯಿಂದಜಾರಿ ಹೋಗಿಲ್ಲಘಿ. ಈ ಗೆಲುವು ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.