ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಬಿಡಬ್ಲ್ಯುಎಫ್ ರಾಂಕಿಂಗ್ನಲ್ಲಿ ಟಾಪ್ 10ರಿಂದ ಹೊರಬಿದಿದ್ದಾರೆ.
ಕಳಪೆ ಲಯದಲ್ಲಿರುವ ತಾರಾ ಆಟಗಾರ್ತಿ ಪಿ.ವಿ.ಸಿಂಧು ಈ ವರ್ಷ ಸ್ವಿಸ್ ಓಪನ್, ಆಲ್ ಇಂಗ್ಲೆಂಡ್, ಇಂಡಿಯನ್ ಓಪನ್ ಟೂರ್ನಿಗಳಲ್ಲಿ ಆರಂಭಿಕ ಸುತ್ತುಗಳಲ್ಲಿ ಸೋತು ಹೊರಬಿದ್ದಾರೆ. ಇದೀಗ ಬಿಡಬ್ಲ್ಯುಎಫ್ ರಾಂಕಿಂಗ್ಗ್ನಲ್ಲಿ 60,448 ಅಂಕಗಳೊಂದಿಗೆ 11ನೇ ಸ್ಥಾನ ಪಡೆದಿದ್ದಾರೆ.
ರ್ಯಾಂಕಿಂಗ್ನಲ್ಲಿ ಸಿಂಧು ಎರಡನೆ ಸ್ಥಾನ ಪಡೆದಿದ್ದು ವೃತ್ತಿ ಜೀವನದ ಶ್ರೇಷ್ಠ ಸಾಧನೆಯಾಗಿತ್ತು. 2016ರಿಂದಲೂ ಸಿಂಧು ಟಾಪ್ 10ರಲ್ಲಿ ಇದ್ದರು.
ಪುರುಷರ ವಿಭಾಗದಲ್ಲಿ ಎಚ್.ಪ್ರಣಯ್ ಎಂಟನೆ ಸ್ಥಾನದಲ್ಲೆ ಮುಂದುವರೆದಿದ್ದಾರೆ.ಕಿದಂಬಿ ಶ್ರೀಕಾಂತ್ 21ನೇ ಸ್ಥಾನಕ್ಕೆ ಕುಸಿದಿದ್ದಾರೆ, ಲಕ್ಷ್ಯ ಸೇನ್ 25ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸ್ವಿಸ್ ಓಪನ್ ಚಾಂಪಿಯನ್ಗಳಾದ ಸಾತ್ವಿಕ್ಸೈರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆರನೆ ಸ್ಥಾನಕ್ಕೆ ಜಿಗಿದಿದ್ದಾರೆ. ಮಹಿಳಾ ಡಬಲ್ಸ್ ಜೋಡಿಯಾದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ 18ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.