ಐಪಿಎಲ್ 2022 ರ ಎಲಿಮಿನೇಟರ್ ಪಂದ್ಯದಲ್ಲಿ, ಆರ್‌ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ವನಿಂದು ಹಸರಂಗಗೆ ಲಕ್ನೋ ತಲಾ 4-4 ಸಿಕ್ಸರ್‌ಗಳನ್ನು ಬಾರಿಸಿದೆ. ಈ ಮೂಲಕ ಈ ಇಬ್ಬರ ಬೌಲರ್ ಗಳ ಹೆಸರಿಗೆ ಬೇಡವಿದ್ದ ದಾಖಲೆ ಅಂಟಿಕೊಂಡಿದೆ.
ಈ ಋತುವಿನಲ್ಲಿ ಈ ಇಬ್ಬರೂ ಬೌಲರ್‌ಗಳು ಇಲ್ಲಿಯವರೆಗೆ ಒಟ್ಟು 28-28 ಸಿಕ್ಸರ್‌ಗಳನ್ನು ನೀಡಿದ್ದಾರೆ. ಈ ಇಬ್ಬರೂ ಬೌಲರ್‌ಗಳು ಐಪಿಎಲ್‌ನ ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ತಿಂದ ಡ್ವೇನ್ ಬ್ರಾವೋಗಿಂತ ಕೇವಲ ಒಂದು ಹೆಜ್ಜೆ ಹಿಂದೆ ಉಳಿದಿದ್ದಾರೆ. ಆರ್‌ಸಿಬಿಯ ಮುಂದಿನ ಪಂದ್ಯದಲ್ಲಿ ಸಿರಾಜ್ ಅಥವಾ ವನಿಂದು ಹೆಸರಿನಲ್ಲಿ ದಾಖಲಾದರೆ ಕಳಪೆ ದಾಖಲೆಯೊಂದು ಇವರ ಹಣೆ ಏರಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಡ್ವೇನ್ ಬ್ರಾವೋ ಐಪಿಎಲ್ 2018 ರಲ್ಲಿ ಒಟ್ಟು 29 ಸಿಕ್ಸರ್‌ಗಳನ್ನು ನೀಡಿದ್ದರು. ಈ ಮೂಲಕ ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡಿದ ದಾಖಲೆ ಈಗಲೂ ಬ್ರಾವೋ ಹೆಸರಿನಲ್ಲಿದೆ. ಬ್ರಾವೋ ಮೊದಲು ಈ ದಾಖಲೆ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿತ್ತು. 2015ರ ಐಪಿಎಲ್‌ನಲ್ಲಿ ಚಹಾಲ್ 28 ಸಿಕ್ಸರ್‌ಗಳನ್ನು ನೀಡಿದ್ದರು. ಈಗ ಐಪಿಎಲ್ 2022 ರಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ವನಿಂದು ಹಸರಂಗ 28-28 ಸಿಕ್ಸರ್‌ಗಳೊಂದಿಗೆ ಚಹಾಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಮುಂದಿನ ಪಂದ್ಯದಲ್ಲಿ ಈ ಇಬ್ಬರೂ ಬೌಲರ್‌ಗಳು ಬ್ರಾವೋ ಅವರನ್ನು ಹಿಂದಿಕ್ಕಬಹುದು.

ಎಲಿಮಿನೇಟರ್ ಪಂದ್ಯದಲ್ಲಿ RCB, LSG ತಂಡವನ್ನು ಸೋಲಿಸಿ ಕ್ವಾಲಿಫೈಯರ್-2 ಗೆ ಲಗ್ಗೆ ಇಟ್ಟಿತು. ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಂಗಳೂರು ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ರಾಜಸ್ಥಾನದಲ್ಲಿ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಬ್ಯಾಟ್ಸ್ ಮನ್ ದೊಡ್ಡ ಸಿಕ್ಸರ್ ಬಾರಿಸುವುದರಲ್ಲಿ ನಿಪುಣರು.