ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (ಎಂಸಿಎ) ರಾತ್ರಿ 7:30 ರಿಂದ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಋತುವಿನ ಆರಂಭದಲ್ಲಿ ಸತತ ಪಂದ್ಯಗಳನ್ನು ಗೆಲ್ಲುತ್ತಿದ್ದರೂ ಈಗ ಸೋಲನ್ನು ಎದುರಿಸಬೇಕಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ರವೀಂದ್ರ ಜಡೇಜಾ ನಾಯಕ್ವತದಿಂದ ಕೆಳಗಿಳಿದಿದ್ದು ಮತ್ತೆ ಕೂಲ್ ಕ್ಯಾಪ್ಟನ್ ಧೋನಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪವರ್ ಪ್ಲೇನಲ್ಲಿ ವೇಗದಲ್ಲಿ ರನ್ ಗಳಿಸಲು ಸಾಧ್ಯವಾಗದಿರುವುದು ದೊಡ್ಡ ಸಮಸ್ಯೆಯಾಗಿದೆ. ವಿರಾಟ್ ಖಂಡಿತವಾಗಿಯೂ ಲಯಕ್ಕೆ ಮರಳಿದರೂ, ಅವರು ಬಾರಿಸಿದ ಅರ್ಧಶತಕವು T-20 ಸ್ವರೂಪದಲ್ಲಿ ತುಂಬಾ ನಿಧಾನವಾಗಿತ್ತು. ನಾಯಕ ಫಾಫ್ ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆ ಕಂಡುಬಂದಿದೆ. ದಿನೇಶ್ ಕಾರ್ತಿಕ್ ಕಳೆದ ಎರಡು ಮೂರು ಪಂದ್ಯಗಳಲ್ಲಿ ರನ್ ಕಲೆ ಹಾಕದೇ ಇರುವುದು ತಂಡಕ್ಕೆ ತಲೆ ನೋವಾಗಿದೆ.
ಬೆಂಗಳೂರು ತಂಡದಲ್ಲಿ ಸ್ಟಾರ್ ಆಟಗಾರರು ಖಂಡಿತವಾಗಿಯೂ ಇದ್ದಾರೆ. ಸ್ಥಿರ ಪ್ರದರ್ಶನ ನೀಡಿ ಗೆಲುವಿನ ಲಯಕ್ಕೆ ಮರಳುವ ಪ್ಲಾನ್ ಮಾಡಿಕೊಂಡಿದೆ. ಒಂದು ವೇಳೆ ಸೋಲಿನ ಸರಪಳಿ ಮುಂದುವರೆದರೆ ತಂಡವು ಪ್ಲೇಆಫ್ ರೇಸ್‌ನಿಂದ ಹೊರಗುಳಿಯಬಹುದು. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ಆಟಗಾರನು ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ಆಡಬೇಕಿದೆ.

ನಾಯಕನ ಬದಲಾವಣೆಯ ನಂತರ ಚೆನ್ನೈ ಮತ್ತೊಮ್ಮೆ ಸೆಣಸಾಡುವ ಧೈರ್ಯ ತೋರಿದೆ. ಸನ್‌ರೈಸರ್ಸ್‌ನಂತಹ ಬಲಿಷ್ಠ ಬೌಲಿಂಗ್ ದಾಳಿಯನ್ನು ಎದುರಿಸುವಾಗ ಅವರ ಅಗ್ರ ಕ್ರಮಾಂಕ ನಿರ್ಭೀತವಾಗಿ ಬ್ಯಾಟಿಂಗ್ ಮಾಡಿದ ರೀತಿ, ಇದು ಸಿಎಸ್‌ಕೆಯನ್ನು ಇನ್ನೂ ಪ್ಲೇಆಫ್‌ನ ರೇಸ್‌ನಲ್ಲಿ ನಿಲ್ಲುವಂತೆ ಮಾಡಿದೆ. ಇಂದು CSK ತಮ್ಮ ಅಗ್ರ ಕ್ರಮಾಂಕದಿಂದ ಇದೇ ರೀತಿಯ ಆಟವನ್ನು ಬಯಸುತ್ತಿದೆ.
ದೀಪಕ್ ಚಹಾರ್ ಬದಲಿಗೆ ತಂಡಕ್ಕೆ ಸೇರ್ಪಡೆಗೊಂಡ ಬೌಲರ್ ಮುಖೇಶ್ ಚೌಧರಿ ಅಂತಿಮವಾಗಿ ಲಯಕ್ಕೆ ಬಂದಿದ್ದು, ಕಳೆದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಮಹೇಶ ತೀಕ್ಷಣ ಜೊತೆಗೂಡಿ ಮತ್ತೊಮ್ಮೆ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪ್ರಯತ್ನಗಳನ್ನು ತೋರಿಸಬೇಕಿದೆ.