ಕಳೆದ ವಾರವಷ್ಟೆ ಚೆನ್ನೈ ಓಪನ್ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲೂ ಚಾಂಪಿಯನ್ ಪಟ್ಟ ಪಡೆದಿದ್ದಾರೆ.
ಹಾಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ತಂಡದ ಆಟಗಾರ ಪುರ್ಸೆಲ್ ಭಾನುವಾರ ತಮ್ಮದೇ ದೇಶದ ಎರಡನೆ ಶ್ರೇಯಾಂಕಿತ ಆಟಗಾರ ಜೇಮ್ಸ್ ಡಕ್ವರ್ತ್ ವಿರುದ್ಧದ ಸಿಂಗಲ್ಸ್ ಫೈನಲ್ನಲ್ಲಿ 3-6, 7-5, 7-6 ಸೆಟ್ಗಳಲ್ಲಿ ರೋಚಕ ಗೆಲುವು ದಾಖಲಿಸಿದರು.
ಮೊದಲ ಸೆಟ್ ನಲ್ಲಿ ಡಕ್ವರ್ತ್ ಮುನ್ನಡೆ ಸಾಧಿಸಿದರು. ಆದರೆ ಕೊನೆಯ ಎರಡು ಸೆಟ್ಗಳಲ್ಲಿ ಮುನ್ನಡೆ ಸಾಧಿಸಿದಿ ಪುರ್ಸೆಲ್ ತಿರುಗಿಬಿದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಕೊನೆಗೆ ಟೈ ಬ್ರೇಕರ್ನಲ್ಲಿ ಪುರ್ಸೆಲ್ ರೋಚಕವಾಗಿ ಗೆದ್ದುಕೊಂಡರು.ಪುರ್ಸೆಲ್ ಅವರದ್ದು 10ನೇ ಗೆಲುವಾಗಿದೆ.
ಇದರೊಂದಿಗೆ 2020ರ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಡಕ್ವರ್ತ್ ಎರಡನೆ ಪ್ರಶಸ್ತಿ ಕನಸು ಭಗ್ನಗೊಂಡಿತು.