ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾ ಎದುರಾಳಿ ಇಂಗ್ಲೆಂಡ್ ತಂಡವನ್ನು ಅಕ್ಷರಶಃ ಹೊಸಕಿ ಹಾಕಿತು. ಬೌಲಿಂಗ್ನಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ ಮಿಂಚಿದ ಆಸ್ಟ್ರೇಲಿಯಾ ಬ್ಯಾಟಿಂಗ್ನಲ್ಲೂ ಇಂಗ್ಲೆಂಡ್ಗೆ ಪಾಠ ಕಲಿಸಿತು. 9 ವಿಕೆಟ್ಗಳಿಂದ ಮೊದಲ ಟೆಸ್ಟ್ ಗೆದ್ದ ಆತಿಥೇಯ ಆಸ್ಟ್ರೇಲಿಯಾ ಆ್ಯಶಸ್ ಸರಣಿಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿತು.
4ನೇ ದಿನ ಆಟ ಆರಂಭಿಸಿದ ಡೇವಿಡ್ ಮಲಾನ್ ಮತ್ತು ಜೋ ರೂಟ್ ಹೆಚ್ಚು ಆಡಲಿಲ್ಲ. ಡೇವಿಡ್ ಮಲಾನ್ 82 ರನ್ಗಳಿಸಿದ್ದಾಗ ನಾಥನ್ ಲಿಯೋನ್ಗೆ 400ನೇ ವಿಕೆಟ್ ಬಲಿಯಾದರು. ನಾಯಕ ರೂಟ್ ಆಸ್ಟ್ರೇಲಿಯಾದಲ್ಲಿ ಶತಕಗಳಿಸಬೇಕು ಅನ್ನುವ ಇರಾದೆ ಕೈಗೂಡಲಿಲ್ಲ. 89 ರನ್ಗಳಿಸಿದ್ದ ರೂಟ್ ಕ್ರಿಸ್ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. ಒಲಿಪೋಪ್, ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾಕ್ಕೆ ತೊಂದರೆಕೊಡಲಿಲ್ಲ.
ಜೋಸ್ ಬಟ್ಲರ್ 23 ರನ್ಗಳಿಸಿ ಇನ್ನಿಂಗ್ಸ್ ಸೋಲು ತಪ್ಪಿಸಿದರು. ರಾಬಿನ್ಸನ್ ಮತ್ತು ಮಾರ್ಕ್ವುಡ್ ಲಿಯೋನ್ಗೆ ವಿಕೆಟ್ ಒಪ್ಪಿಸಿದರು. ಕ್ರಿಸ್ವೋಕ್ಸ್ ಕೊನೆಯದಾಗಿ ಔಟಾದರು. ಇಂಗ್ಲೆಂಡ್ 2ನೇ ಇನ್ನಿಂಗ್ಸ್ನಲ್ಲಿ 297 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತನ್ನ ಕೊನೆಯ 7 ವಿಕಟ್ಗಳನ್ನು ಕೇವಲ 74 ರನ್ಗಳಿಗೆ ಕಳೆದುಕೊಂಡಿತು. ಆಸ್ಟ್ರೇಲಿಯಾ ಪರವಾಗಿ ಲಿಯೊನ್ 4 ವಿಕೆಟ್ ಪಡೆದು ಮಿಂಚಿದರು.
20 ರನ್ಗಳ ಗೆಲುವಿನ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಆಲೆಕ್ಸ್ ಕ್ಯಾರಿ ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.