Asia Cup: ಫುಲ್ ಬಿಂದಾಸ್ ಮೂಡ್ ನಲ್ಲಿ ಟೀಮ್ ಇಂಡಿಯಾ, ಸಮುದ್ರ ತೀರದಲ್ಲಿ ಮೋಜು ಮಸ್ತಿ
ಯುಇಎಯಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಸೂಪರ್-4 ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾದ ಆಟಗಾರರು ಸಮುದ್ರ ತೀರದಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ. ಬಿಸಿಸಿಐ ಶುಕ್ರವಾರ ವಿಡಿಯೋ ಪೋಸ್ಟ್ ಮಾಡಿದೆ.
ಇದರಲ್ಲಿ ಓಪನರ್ ಕೆಎಲ್ ರಾಹುಲ್ ಮತ್ತು ಆರ್ಷದೀಪ್ ಸಿಂಗ್ ಸರ್ಫಿಂಗ್ ಮಾಡುತ್ತಿದ್ದರೆ, ನಾಯಕ ರೋಹಿತ್ ಶರ್ಮಾ ಬೋಟಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಚಾಹಲ್-ಅಶ್ವಿನ್ ಪ್ಯಾಡಲ್ ಬೋಟ್ ಓಡಿಸುತ್ತಿದ್ದಾರೆ. ಅಷ್ಟೇ ಅಲ್ಲ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರು ಕೂಡ ಬೀಚ್ ನಲ್ಲಿ ವಾಲಿಬಾಲ್ ಆಡುತ್ತಿದ್ದಾರೆ.
ಆರ್ಷದೀಪ್ ಸಿಂಗ್ ಅವರ ಪ್ರವೇಶದೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ವಿರಾಟ್ ಕೊಹ್ಲಿ ಲೈಫ್ ಜಾಕೆಟ್ ಧರಿಸಿರುವುದು ಕಂಡುಬರುತ್ತದೆ. 1 ನಿಮಿಷ 34 ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ. ಒಂದು ಗಂಟೆಯೊಳಗೆ 49 ಸಾವಿರ ಮಂದಿ ವೀಕ್ಷಿಸಿದ್ದಾರೆ.
ಸೂಪರ್-4ರ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಆಡಬೇಕಿದೆ. ಪಾಕಿಸ್ತಾನ-ಹಾಂಕಾಂಗ್ ವಿಜೇತರನ್ನು ಭಾನುವಾರ ಟೀಮ್ ಇಂಡಿಯಾದ ಎದುರಿಸಲಿದೆ. ಇಂದು ಪಾಕಿಸ್ತಾನ ಗೆದ್ದರೆ, ಸೆಪ್ಟೆಂಬರ್ 4 ರಂದು ಮತ್ತೊಮ್ಮೆ ಭಾರತ-ಪಾಕಿಸ್ತಾನ ಅಮೋಘ ಪಂದ್ಯವನ್ನು ನೋಡ ಬಹುದು. ಇಂದು ಪಾಕಿಸ್ತಾನ ಸೋತರೆ ಸೂಪರ್-4ರ ಮೊದಲ ಪಂದ್ಯದಲ್ಲಿ ಭಾರತ-ಹಾಂಕಾಂಗ್ ಮುಖಾಮುಖಿಯಾಗಲಿವೆ.
ಈ ಸಮಯದಲ್ಲಿ, ಇಂದು ರಜಾದಿನವಾಗಿದೆ. ಆದ್ದರಿಂದ ಮೋಜಿನ ಚಟುವಟಿಕೆಯನ್ನು ಯೋಜಿಸಲಾಗಿದೆ ಎಂದು ಚಹಾಲ್ ಹೇಳಿದ್ದಾರೆ. ಇದರಲ್ಲಿ ವಿನೋದ ಮತ್ತು ಕ್ರೀಡೆಗಳಿ ಸಹ ಸೇರಿವೆ. ಇದು ವಿನೋದಮಯವಾಗಿರುತ್ತದೆ. ಎಲ್ಲರೂ ತುಂಬಾ ಖುಷಿಯಾಗಿದ್ದಾರೆ.
ಹಾಂಕಾಂಗ್ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಟೀಮ್ ಇಂಡಿಯಾ ಸೂಪರ್-4 ಸುತ್ತಿಗೆ ತಲುಪಿದೆ. ಹಾಂಕಾಂಗ್ ತಂಡವನ್ನು 40 ರನ್‌ಗಳಿಂದ ಟೀಮ್ ಇಂಡಿಯಾ ಸೋಲಿಸಿತು. ಟೀಮ್ ಇಂಡಿಯಾ ಮೊದಲು 192 ರನ್ ಗಳಿಸಿತ್ತು. ನಂತರ ಹಾಂಕಾಂಗ್ 152 ರನ್‌ಗಳಿಗೆ ಆಲೌಟ್ ಆಯಿತು. ಸೂರ್ಯಕುಮಾರ್ ಯಾದವ್ ಭಾರತದ ಗೆಲುವಿನ ಹೀರೋ ಆಗಿದ್ದರು. ಅವರು 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 68 ರನ್ ಗಳಿಸಿದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಉಳಿದರು.