ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭದಲ್ಲೆ ಶಾಂಕಿಂಗ್ ಫಲಿತಾಂಶಗಳು ಹೊರಬಂದಿವೆ.
ಟೂರ್ನಿ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಅರ್ಜೆಂಟಿನಾ ಎರಡು ಬಾರಿ ಚಾಂಪಿಯನ್ ಆಗಿದ್ದ ತಂಡ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಿಂದ ಸೋಲು ಕಂಡಿದೆ. ಇದು ಫುಟ್ಬಾಲ್ ಅಭಿಮಾನಿಗಳಿಗೆ ಅಚ್ಚರಿ ಫಲಿತಾಂಶವಾಗಿದೆ.
ಈ ಸೋಲಿನ ಮೂಲಕ ಅರ್ಜೆಂಟಿನಾದ ಅಜೇಯ 36 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಇಷ್ಟೆ ಅಲ್ಲ ಲಿಯೊನೆಲ್ ಮೆಸ್ಸಿ ನಾಯಕತ್ವದ ನಾಕೌಟ್ ಹಾದಿಗೆ ಹಿನ್ನಡೆಯಾಗಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಅರ್ಜೆಂಟಿನಾ ಗೆಲ್ಲಲೇಬೇಕಾಗಿದೆ.
ಪಂದ್ಯದ ಆರಂಭದಲ್ಲಿ ಅರ್ಜೆಂಟಿನಾ ಹಿಡಿತ ಸಾಧಿಸಿತ್ತು. 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮೆಸ್ಸಿ ಬಳಗ ಯಶಸ್ವಿಯಾಗಿ ಗೋಲನ್ನಾಗಿ ಪರಿವರ್ತಿಸಿತು.
ನಂತರ ಗೋಲು ಹೊಡೆಯಲು ಹಲವು ಬಾರಿ ಅವಕಾಶ ಸಿಕ್ಕರೂ ಸೌದಿ ಅರೇಬಿಯಾದ ಗೋಲ್ ಕೀಪರ್ ಪರ್ ಮೊಹ್ಮದ್ ಅಲೋವೈಸ್ ಚೆಂಡನ್ನು ತಡೆದರು. ಸೌದಿ ಅರೇಬಿಯಾದ ಬಲಿಷ್ಠ ಡೆಫಿನ್ಸ್ ತಂಡವನ್ನು ಕಾಪಾಡಿತು.
ನಿರ್ಣಾಯಕ ಎರಡನೆ ಅವಧಿಯಲ್ಲಿ ಸೌದಿ ಅರೇಬಿಯಾ ಅರ್ಜೆಂಟಿನಾ ತಂಡಕ್ಕೆ ಆಘಾತ ನೀಡಿತು. 48ನೇ ನಿಮಿಷದಲ್ಲಿ

ಸಲೇಂ ಸಲೆಹ್ ಅಲ್ ಶೆಹರಿ ಗೋಲು ಹೊಡೆದರು.ನಂತರ 5 ನಿಮಿಷಗಳ ಅಂತರದಲ್ಲಿ ಅಲ್ದ್ ವ್ಸಾರಿ ಮತ್ತೊಂದು ಗೋಲು ಹೊಡೆದು ಅರ್ಜೆಂಟಿನಾಗೆ ಶಾಕ್ ಕೊಟ್ಟರು.
ಗೋಲು ಹೊಡೆದ ಖುಷಿಯಲ್ಲಿ ಸೌದಿ ಆಟಗಾರರು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸಂಭ್ರಮಾಚಣೆಗಾಗಿ ಸೌದಿ ಅರೇಬಿಯಾದಲ್ಲಿ ರಜೆ ಘೋಷಿಸಲಾಗಿದೆ.
ಅರ್ಜೆಂಟಿನಾ ವಿರುದ್ಧ ಸೌದಿ ಅರೇಬಿಯಾಕ್ಕೆ ಇದು ಮೊದಲ ಗೆಲುವಾಗಿದೆ. ಈ ಹಿಂದಿನ 4 ಪಂದ್ಯಗಳಲ್ಲಿ 2 ಡ್ರಾ ಮತ್ತು 2 ಪಂದ್ಯವನ್ನು ಸೋಲುಕಂಡಿತ್ತು.