ಮುಂಬೈ ಬೀದಿಗಳಲ್ಲಿ ವಿರಾನುಷ್ಕಾ ಜಾಲಿ ಬೈಕ್ ರೈಡ್
ಮುಂಬೈನ ಬೀದಿಗಳಲ್ಲಿ ವಿರಾಟ್ ಮತ್ತು ಅನುಷ್ಕಾ ಸ್ಕೂಟಿ ರೈಡ್ ಮಾಡಿದ್ದಾರೆ. ಈ ಸವಾರಿಯ ವಿಡಿಯೋ ಇದೀಗ ಹೊರಬಿದ್ದಿದೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಹೆಲ್ಮೆಟ್ ಧರಿಸಿದ್ದರು, ಅನುಷ್ಕಾ ಕೈಯಲ್ಲಿ ಕೊಡೆ ಹಿಡಿದಿದ್ದರು. ಆದರೂ ಜನ ಇಬ್ಬರನ್ನೂ ಗುರುತಿಸಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಇದರಲ್ಲಿ ಐಷಾರಾಮಿ ಕಾರುಗಳನ್ನು ಇಷ್ಟಪಡುವ ವಿರಾಟ್ ಕೊಹ್ಲಿ ಸಾಮಾನ್ಯ ವ್ಯಕ್ತಿಯಂತೆ ಪತ್ನಿಯೊಂದಿಗೆ ಸ್ಕೂಟಿಯಲ್ಲಿ ತಿರುಗಾಡಿದರು. ಆದರೆ, ಈ ವಿಡಿಯೋದಲ್ಲಿ ಇಬ್ಬರ ಮುಖವೂ ಕಾಣಿಸುತ್ತಿಲ್ಲ.

ಜೂನ್ ತಿಂಗಳಿನಲ್ಲಿ ದಂಪತಿ ಮಾಲ್ಡೀವ್ಸ್‌ಗೆ ವಿಹಾರಕ್ಕೆ ತೆರಳಿದ್ದರು. ಇಬ್ಬರೂ ಬೀಚ್ ಫೋಟೋ ಹಂಚಿಕೊಂಡಿದ್ದಾರೆ. ಆಗ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯ ವಹಿಸಿತ್ತು.

ಕೊಹ್ಲಿ ಕ್ರಿಕೆಟ್‌ನಿಂದ ವಿರಾಮದಲ್ಲಿದ್ದಾರೆ. ಅವರು ಪ್ರಸ್ತುತ ಜಿಂಬಾಬ್ವೆ ಪ್ರವಾಸದ ಟೀಮ್ ಇಂಡಿಯಾದ ಭಾಗವಾಗಿಲ್ಲ. ಈಗ ಅವರು ಏಷ್ಯಾಕಪ್‌ನಿಂದ ಪುನರಾಗಮನ ಮಾಡಬಹುದು. ಅವರನ್ನು ಈ ಟೂರ್ನಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಭಾರತವು ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಬಹುದು. ಏಷ್ಯಾ ಕಪ್ ಯುಎಇಯಲ್ಲಿ ಆಗಸ್ಟ್ 27 ರಿಂದ ಆರಂಭವಾಗಲಿದೆ. ಕೊಹ್ಲಿ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಕೊಹ್ಲಿ ಶತಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರು 2019 ರಲ್ಲಿ ಕೊನೆಯ ಶತಕವನ್ನು ಗಳಿಸಿದರು. ಅಂದಿನಿಂದ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಅವರ ಫಾರ್ಮ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ, ಆದರೆ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ಶೀಘ್ರದಲ್ಲೇ ಫಾರ್ಮ್‌ಗೆ ಮರಳುವ ಭರವಸೆ ವ್ಯಕ್ತ ಪಡಿಸಿದ್ದಾರೆ.