ಆಸ್ಟ್ರೇಲಿಯಾದ (Australia) ಏಕದಿನ (ODI) ಮತ್ತು ಟಿ20 (T20I) ಕ್ರಿಕೆಟ್ ತಂಡದ (Captain) ನಾಯಕ ಆರೋನ್ ಫಿಂಚ್ (Aron Finch ) ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಟಿ20 ಕ್ರಿಕೆಟ್ ಕಡೆಗೆ ಹೆಚ್ಚು ಗಮನ ಕೊಡುವ ಸಲುವಾಗಿ ಏಕದಿನ ಕ್ರಿಕೆಟ್ ನಾಯಕತ್ವ ಹಾಗೂ ಆಟಕ್ಕೆ ದಿಢೀರ್ ಗುಡ್ ಬೈ (ODI Retirement) ಹೇಳಿದ್ದಾರೆ. ನ್ಯೂಜಿಲೆಂಡ್ (Newzealand) ವಿರುದ್ಧ ಮೂರನೇ ಏಕದಿನ ಪಂದ್ಯವೇ (ODI Match) ಫಿಂಚ್ ಪಾಲಿಗೆ ಅಂತಿಮ ಏಕದಿನ ಪಂದ್ಯವಾಗಿರಲಿದೆ. ತವರಿನಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ (T20 World Cup) ತಂಡ ಮುನ್ನಡೆಸಲು ಬೇಕಾದ ಆತ್ಮವಿಶ್ವಾಸ ಹಾಗೂ ತಂಡವನ್ನು ಗೆಲುವಿನೆಡೆಗೆ ಮುಂದುವರೆಸಲು ಪಿಂಚ್ ನಿರ್ಧರಿಸಿದ್ದಾರೆ.
ಈ ವರ್ಷ ಫಿಂಚ್ ಏಕದಿನ ಕ್ರಿಕೆಟ್‌ನಲ್ಲಿ ನೀರಸ ಆಟ ಆಡಿದ್ದಾರೆ. 13 ಇನ್ನಿಂಗ್ಸ್‌ಗಳಲ್ಲಿ ಕೇವಲ 169 ರನ್ ಮಾತ್ರಗಳಿಸಿದ್ದಾರೆ. ಕಳೆದ 12 ಇನ್ನಿಂಗ್ಸ್‌ಗಳಲ್ಲಿ 5 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಕಳೆದ 7 ಇನ್ನಿಂಗ್ಸ್‌ಗಳಲ್ಲಿ ಫಿಂಚ್ ಗಳಿಸಿರುವುದು ಕೇವಲ 26 ರನ್ ಮಾತ್ರ. ಹೀಗಾಗಿ ರನ್ ಬರ ಫಿಂಚ್‌ರನ್ನು ಕಾಡಿತ್ತು. 2023ರ ಏಕದಿನ ವಿಶ್ವಕಪ್‌ನಲ್ಲಿ (ODI World Cup) ತಂಡವನ್ನು ಮುನ್ನಡೆಸುವ ಯೋಚನೆ ಮಾಡಿದ್ದರೂ ಇತ್ತೀಚಿನ ವೈಫಲ್ಯ ಅವರನ್ನು ಹೆಚ್ಚು ಕಾಡಿತ್ತು. ಜೊತೆಗೆ ಮೊಣಕಾಲು ನೋವು ಹಾಗೂ ಭುಜದ ಸಮಸ್ಯೆ ಅವರನ್ನು ಏಕದಿನ ಕ್ರಿಕೆಟ್‌ನಿಂದ ದೂರವಾಗುವಂತೆ ಮಾಡಿದೆ.
ಫಿಂಚ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ದುಬೈನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಮೆರೆದಾಡಿತ್ತು. ಈ ಬಾರಿ ಫಿಂಚ್ ಮತ್ತೆ ಟ್ರೋಫಿ ಎತ್ತುವ ಕನಸಿನಲ್ಲಿದ್ದಾರೆ. ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ 8 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಕೂಡ ಆಡಲಿದೆ. ಫಿಂಚ್ ಬಿಬಿಎಲ್‌ನಲ್ಲಿ ಮೆಲ್ಬರ್ನ್ ರೆನಗೇಡ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅಷ್ಟೇ ವಿದೇಶಿ ಟಿ20 ಲೀಗ್‌ಗಳಲ್ಲೂ ಆಡಲಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಫಿಂಚ್ 5400 ರನ್‌ಗಳಿಸಿದ್ದಾರೆ. 17 ಶತಕಗಳನ್ನು ಸಿಡಿಸಿದ್ದರು. ರಿಕಿ ಪಾಂಟಿಂಗ್ 29, ಡೇವಿಡ್ ವಾರ್ನರ್ 18, ಮಾರ್ಕ್ ವಾ 18 ಶತಕ ಸಿಡಿಸಿದ್ದರು. 54 ಏಕದಿನ ಪಂದ್ಯಗಳನ್ನು ತಂಡವನ್ನು ಮುನ್ನಡೆಸಿ 30ರಲ್ಲಿ ಗೆಲುವು ಕಂಡಿದ್ದಾರೆ. ಫಿಂಚ್ ನಿವೃತ್ತಿ ಬಳಿಕ ಅಲೆಕ್ಸ್ ಕ್ಯಾರಿ (Alex Carey) ಆಸ್ಟ್ರೇಲಿಯಾ ತಂಡವನ್ನು ಏಕದಿನ ಕ್ರಿಕೆಟ್‌ನಲ್ಲಿ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಕ್ಯಾರಿ ಜೊತೆಗೆ ಸ್ಟೀವ್ ಸ್ಮಿತ್ (Steve Smith), ಗ್ಲೆನ್ ಮ್ಯಾಕ್ಸ್‌ವೆಲ್ (Glen Maxwell), ಜೋಶ್ ಹ್ಯಾಜಲ್‌ವುಡ್ (Josh Hazalwood) ಮತ್ತು ಮಿಚೆಲ್ ಮಾರ್ಶ್ (Mitchel Marsh) ಹೆಸರೂ ಕೂಡ ಕ್ಯಾಪ್ಟನ್ಸಿ ರೇಟ್‌ನಲ್ಲಿದೆ. ಒಟ್ಟಿನಲ್ಲಿ ಫಿಂಚ್ ದಿಢೀರ್ ನಿವೃತ್ತಿ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದೆ.