IPL 2022- RCB – ಬೋಲ್ಡ್ ಪ್ಲೇ ಗೆ ಆರ್ ಸಿಬಿ ರೆಡಿ.. ಸಂಜಯ್ ಬಂಗಾರ್ ಮಾರ್ಗದರ್ಶನದಲ್ಲಿ ಅಭ್ಯಾಸದಲ್ಲಿ ಆರ್ ಸಿಬಿ ಲಯನ್ಸ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ರೆಡಿಯಾಗುತ್ತಿದೆ.
ಗುರುವಾರದಿಂದ ಅಭ್ಯಾಸ ಶುರು ಮಾಡಿರುವ ಆರ್ ಸಿಬಿ ತಂಡದ ಆಟಗಾರರ ಪರಿಚಯವನ್ನು ಹೆಡ್ ಕೋಚ್ ಸಂಜಯ್ ಬಂಗಾರ್ ಮಾಡಿದ್ರು.
ಬಳಿಕ ನಾಯಕ ಫಾಫ್ ಡುಪ್ಲೇಸಸ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಲುನ್ವಿತ್ ಸಿಸೊಡಿಯಾ ಅವರು ನೆಟ್ಸ್ ನಲ್ಲಿ ಬೆವರು ಸುರಿಸಿದ್ರು. ಮುಖ್ಯವಾಗಿ ತಂಡದ ನಾಯಕ ಫಾಫ್ ಡುಪ್ಲೆಸಸ್ ಅವರು ಬ್ಯಾಟಿಂಗ್ ತಾಲೀಮು ನಡೆಸಿದ್ರು.
ಎಲ್ಲರಿಗೂ ಆರ್ ಸಿಬಿ ಕ್ಯಾಂಪ್ ಗೆ ಸ್ವಾಗತ. ಈಗಾಗಲೇ ನೀವು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಿರಿ. ನಿಮ್ಮ ಕೌಶಲ್ಯಗಳು ಏನು ಎಂಬುದು ಗೊತ್ತಿದೆ. ನಿಮ್ಮ ಸಾಮಥ್ರ್ಯದ ಬಗ್ಗೆ ನಮಗೆ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ನಾವು ವಿಶೇಷವಾಗಿರುವುದನ್ನು ಮಾಡಬೇಕಿದೆ. ಆರ್ ಸಿಬಿಯ ಗೇಮ್ ಪ್ಲಾನ್ ಯಾವ ರೀತಿ ಇರುತ್ತದೆ ಎಂಬುದರ ಮಾಹಿತಿಯನ್ನು ನೀಡುತ್ತೇವೆ. ಇದಕ್ಕೆಲ್ಲಾ ನಿಮ್ಮ ಸಹಕಾರ ಬೇಕು ಎಂದು ಆರ್ ಸಿಬಿಯ ಹೆಡ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. IPL 2022- RCB’s First Practice Session – Faf du Plessis, Siddarth Kaul and Karn Sharma
ಈಗಾಗಲೇ ಮುಂಬೈಗೆ ತಲುಪಿರುವ ಆಟಗಾರರು ಹೊಟೇಲ್ ಕ್ವಾರಂಟೈನ್ ನಲ್ಲಿದ್ದಾರೆ. ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮಾರ್ಚ್ 27ರಂದು ಆರ್ ಸಿಬಿ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಹಾಗೇ ನೋಡಿದ್ರೆ ಆರ್ ಸಿಬಿ ಬಲಿಷ್ಠವಾಗಿಯೇ ಇದೆ. ಆದ್ರೂ ತಂಡದಲ್ಲಿ ಕೆಲವೊಂದು ಲೋಪದೋಷಗಳಿವೆ. ಫಾಪ್ ಡುಪ್ಲೇಸಸ್ ಜೊತೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ರೆ, ಮೂರನೇ ಕ್ರಮಾಂಕದಲ್ಲಿ ಯಾರು ಆಡ್ತಾರೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಇದ್ದಾರೆ. ಅನುಭವಿ ದಿನೇಶ್ ಕಾರ್ತಿಕ್ ಕೂಡ ಇದ್ದಾರೆ. ಆದ್ರೆ ಮ್ಯಾಚ್ ಫಿನಿಶರ್ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಅಷ್ಟೊಂದು ಸಮಸ್ಯೆ ಕಾಣುತ್ತಿಲ್ಲ.
ಒಟ್ಟಿನಲ್ಲಿ ಆರ್ ಸಿಬಿ ಹೊಸ ನಾಯಕ, ಹೊಸ ತಂಡ, ಹೊಸ ಹುರುಪಿನೊಂದಿಗೆ ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ ಅನ್ನೊದನ್ನು ಕಾದು ನೋಡಬೇಕು.