ಏಷ್ಯನ್ ಗೇಮ್ಸ್ ಟ್ರಯಲ್ಸ್ಗೆ ತಡಮಾಡಿದ ಬೆನ್ನಲ್ಲೆ ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಭಜರಂಗ್ ಪುನಿಯಾ ಅಮೆರಿಕದಲ್ಲಿ ತರಬೇತಿಗೆ ಅವಕಾಶ ನೀಡುವಂತೆ ಕೇಂದ್ರ ಕ್ರೀಡಾ ಸಚಿವರಿಗೆ ಪತ್ರ ಬರೆದಿದ್ದಾರೆ.
ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ ಪಡೆಯಲು ಆಗಸ್ಟ್ನಲ್ಲಿ ಟ್ರಯಲ್ಸ್ ನಡೆಸುವಂತೆ ಈ ಹಿಂದೆ ಕೇಂದ್ರ ಕ್ರೀಡಾ ಸಚಿವರಿಗೆ ಪತ್ರ ಬರೆದಿದ್ದರು.
ಈ ಕುರಿತು ಕ್ರೀಡಾ ಸಚಿವರಿಗೆ ನೇರವಾಗಿ ಕುಸ್ತಿಪಟುಗಳು ಪತ್ರ ಬರೆದಿದ್ದಾರೆ. ಮನವಿಯನ್ನು ಸಚಿವರು ಮಿಷನ್ ಒಲಿಂಪಿಕ್ ಸೆಲ್ಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರ ಇನ್ನು ಚರ್ಚೆಯಾಗಬೇಕಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.
ಅಮರಿಕಾದಲ್ಲಿ ತರಬೇತಿ ಪಡೆಯುವ ಕುರಿತು ವಿನೇಶ್, ಭಜರಂಗ್, ಸಾಕ್ಷಿ ಮಲ್ಲಿಕ್, ಅತ್ಯವರ್ಥ್ ಕಡಿಯಾನ್ ಮತ್ತು ಸಂಗೀತಾ ಪೋಗಟ್ ಪತ್ರ ಬರೆದಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಐಒಎ ಜು.15ರ ವೇಳೆಗೆ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾಗೆ ಹೆಸರುಗಳನ್ನು ಕಳುಹಿಸಬೇಕಾಗಿದ್ದು ಬೇಗೆ ಟ್ರಯಲ್ಸ್ ನಡೆಸಬೇಕಾಗಿದೆ.
ಕುಸ್ತಿಪಟುಗಳ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಒಲಿಂಪಿಕ್ ಕೌನ್ಸಿಲ್ ಆï ಏಷ್ಯಾಗೆ ನಿಗದಿತ ದಿನಾಂಕವನ್ನು ವಿಸ್ತಿರಿಸುವಂತೆ ಮನವಿ ಮಾಡಿದೆ.
ಒಂದು ವೇಳೆ ಬೇಡಿಕೆಯನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ತಿರಸ್ಕರಿಸಿದರೆ ಕುಸ್ತಿಪಟುಗಳು ಟ್ರಯಲ್ಸ್ಗೆ ಸಜ್ಜಾಗಬೇಕಾಗುತ್ತದೆ.
ಟ್ರಯಲ್ಸ್ ಅನ್ನು ಆದಷ್ಟು ನಿಧಾನಕ್ಕೆ ಮಾಡುವುದೊಂದೇ ಕುಸ್ತಿಪಟುಗಳಿಗೆ ಮಾಡಬಹುದಾದ ಸಹಾಯವಾಗಿದೆ. ಜು.15ರೊಳಗೆ ಹೆಸರು ನೀಡಬೇಕಿದೆ. ಹೆಚ್ಚಂದರೆ 20 ದಿನ ಅವಕಾಶ ನೀಡಬಹುದಾಗಿದ್ದು ಜು.15ರ ವೇಳೆಗೆ ಹೆಸರುಗಳನ್ನು ಅಂತಿಮಗೊಳಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
ಹಲವಾರು ಕುಸ್ತಿಪಟುಗಳು ಟ್ರಯಲ್ಸ್ಗೆ ಸಜ್ಜಾಗಿದ್ದಾರೆ. ಟ್ರಯಲ್ಸ್ ನಡೆಸುವಂತೆ ಮನವಿ ಮಾಡಿದ್ದಾರೆ. ಟ್ರಯಲ್ಸ್ ಅನ್ನು ನಿಧಾನಕ್ಕೆ ನಡೆಸಬಾರದೆಂದು ಮಾತುಗಳು ಕೇಳಿ ಬಂದಿವೆ.
ಜೂನ್ ಅಂತ್ಯದ ವೇಳೆಗೆ ಟ್ರಯಲ್ಸ್ ನಡೆಸುವ ಸಾಧ್ಯತೆ ಇರುವುದರಿಂದ ಕುಸ್ತಿಪಟುಗಳು ತಮ್ಮ ತೂಕವನ್ನು ಕಾಪಾಡಿಕೊಂಡಿದ್ದಾರೆ. ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳಿಗಾಗಿ ಬೇರೆ ಕುಸ್ತಿಪಟುಗಳು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದರಿಲ್ಲ ಎಂದು ತಿಳಿದು ಬಂದಿದೆ.